ರಾಜಕೀಯ ರಂಗಕ್ಕೆ ಕಿಚ್ಚ ಸುದೀಪ್ ಎಂಟ್ರಿ!

ರಾಜಕೀಯ ರಂಗದಲ್ಲಿ ಇತ್ತೀಚಿಗಂತೂ ಸಿನಿಮಾ ನಟ ನಟಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಕೆಲವರಂತೂ ರಾಜಕೀಯ ಪ್ರವೇಶಿಸಿ ಆಗಾಗ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್ ಕೂಡ ರಾಜಕೀಯ ಅಕಾಡಕ್ಕೆ ಇಳಿಯುತ್ತಾರೆಂಬ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ರಾಜಕೀಯ ಎಂಟ್ರಿಯ ಕುರಿತು ಎಲ್ಲೆಡೆ ಗುಸು ಗುಸು ಶುರುವಾಗಿದೆ. ಸುದೀಪ್ ರಾಜಕೀಯ ರಂಗಕ್ಕೆ ಬರುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಕಡೆಯಿಂದ ಕಿಚ್ಚನಿಗೆ ಬಂಪರ್ ಆಫರ್ ಸಿಕ್ಕಿದೆಯಂತೆ.

ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸುದೀಪ್‌ಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಆಫರ್ ಬಂದಿದೆ. ನಟಿ ರಮ್ಯಾ ಮೂಲಕ ಕಾಂಗ್ರೆಸ್ ನಾಯಕರು ಈಗಾಗಲೇ ನಟ ಸುದೀಪ್ ಜೊತೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ. ಆದರೆ ತಮ್ಮ ನಿರ್ಧಾರದ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜಕೀಯ ಪ್ರವೇಶದ ಬಗ್ಗೆ ಸುದೀಪ್ ಕೂಡ ಮೌನ ವಹಿಸಿದ್ದಾರೆ.

ಇತ್ತೀಚೆಗಷ್ಟೇ `ವಿಕ್ರಾಂತ್ ರೋಣ’ ಸಕ್ಸಸ್‌ನಲ್ಲಿದ್ದ ಸುದೀಪ್, ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮುಗಿಸಿ ಸ್ವಲ್ಪ ಫ್ರಿ ಆಗಿದ್ದಾರೆ. ಈ ಬೆನ್ನಲ್ಲೇ ಸುದೀಪ್‌ಗೆ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಿ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮಣೆ ಹಾಕ್ತಿದ್ದಾರೆ. ನಟಿ ರಮ್ಯಾ ಮೂಲಕ ಸುದೀಪ್ ಅವರನ್ನ ಕಾಂಗ್ರೆಸ್ ನಾಯಕರು ಈಗಾಗಲೇ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ.

ಇದಲ್ಲದೆ ಮಂಡ್ಯ ಲೋಕಸಭೆ ಚುನಾವಣೆ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಾರೆ ಎಂಬ ಮಾತು ಈಗ ಗಾಂಧಿನಗರದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿ ಅಭಿಮಾನಿಗಳಿಂದ ಟೀಕೆಗಳನ್ನ ಎದುರಿಸಿದ್ದ ಸುದೀಪ್, ಇನ್ಮುಂದೆ ಗೆಳೆಯರು ಮತ್ತು ಆಪ್ತರಿಗಾಗಿ ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗವಾಗಿ ಪತ್ರ ಬರೆದಿದ್ದರು. ಇದೀಗ, ಕೊಟ್ಟ ಮಾತನ್ನ ಮೀರಿ ಮತ್ತೆ ಚುನಾವಣಾ ಪ್ರಚಾರಕ್ಕೆ ಸುದೀಪ್ ಹೋಗುತ್ತಿದ್ದಾರಾ ಎನ್ನುವ ವಿಚಾರ ಭಾರಿ ಸದ್ದು ಮಾಡುತ್ತಿದೆ.

Leave A Reply

Your email address will not be published.