Home latest 5 ವರ್ಷದ ಬಾಲಕಿ ಮೇಲೆ ಅತ್ಯಾಚಾಗೈದ 15ರ ಬಾಲಕ! ಘಟನೆಗೂ ಮೊದಲು ಆತ ಮಾಡಿದ್ದೇನು ಗೊತ್ತಾ?

5 ವರ್ಷದ ಬಾಲಕಿ ಮೇಲೆ ಅತ್ಯಾಚಾಗೈದ 15ರ ಬಾಲಕ! ಘಟನೆಗೂ ಮೊದಲು ಆತ ಮಾಡಿದ್ದೇನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಅತ್ಯಾಚಾರದ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆಯೇ ಹೊರತು ನಿಯಂತ್ರಣಕ್ಕೆ ಬರದಂತಾಗಿವೆ. ಮಕ್ಕಳು, ಮುದುಕರು ಎಂಬುದನ್ನು ನೋಡದೆ ನಿರಂತರವಾಗಿ ಇಂತಹ ಘಟನೆಗಳು ಪ್ರತೀ ದಿನ ಘಟಿಸುತ್ತಿವೆ. ಇದೀಗ ಶಾಲಾ ಅವರಣದಲ್ಲಿಯೇ 5 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ.

ಶಾಲೆ ಆವರಣದಲ್ಲಿ 15 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆ ದಕ್ಷಿಣ ಮುಂಬೈನ ನಾಗ್ಪಾಡಾ ಎಂಬಲ್ಲಿ ನಡೆದಿದೆ. ಆರೋಪಿ ಬಾಲಕನು, ಬಾಲಕಿಯನ್ನು ಶಾಲೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದಾದ ಬಳಿಕ ಬಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಶನಿವಾರ ಸಂಜೆ ಬಾಲಕಿಯೊಬ್ಬಳು ಶಾಲೆಯ ಕಾಂಪೌಂಡ್ ಒಳಗೆ ಕುಳಿತು ಅಳುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಹತ್ತಿರ ಹೋಗಿ ವಿಚಾರಿಸಿದಾಗ ಆರೋಪಿಯು ಹುಡುಗಿಯ ಬಾಯಿ ಮುಚ್ಚಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದು ತಿಳಿದಬಂದಿದೆ. ಅತ್ಯಾಚಾರ ಮಾಡುವ ಮೊದಲು ವಿರೋದಿಸಿದಕ್ಕೆ ತನಗೆ ಚೆನ್ನಾಗಿ ಹೊಡೆದ ಎಂದು ಬಾಲಕಿ ಹೇಳಿದ್ದಾಳೆ.

ಘಟನೆಗೆ ಸಂಬಂಧಿಸಿ ಸಂತ್ರಸ್ತೆಯ ತಂದೆ ನಾಗ್ಪಾಡಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಾಲಕನಿಗಾಗಿ ಶೋಧ ನಡೆಸಿದ್ದಾರೆ.

ಪೋಲಿಸರು ಆರೋಪಿ ಬಾಲಕನಿಗಾಗಿ ಅವನ ಮನೆಗೆ ತೆರಳಿ ಹುಡುಕಾಟ ನಡೆಸಿದರು. ಆದರೆ ಅಲ್ಲಿ ಅವನ ಸುಳಿವಿರಲಿಲ್ಲ. ನಂತರ ಅವನ ಸಂಬಂಧಿಕರ ಮನೆಯಾದ ಪಾಲ್ಘರ್ ಜಿಲ್ಲೆಯ ನಲಸೋಪಾರಾ ಪ್ರದೇಶದಲ್ಲಿ 15 ವರ್ಷದ ಬಾಲಕನು ಸಿಕ್ಕಿದ್ದು, ಪೋಲೀಸರು ಆತನನ್ನು ಬಂಧಿಸಿದ್ದಾರೆ.