ಬರೋಬ್ಬರಿ ನಾಲ್ಕು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಗಂಡಸು! ಅರೇ ಇದು ನಿಜವಾಗಿಯೂ ಸಾಧ್ಯವೇ?
ಈ ಜಗತ್ತೇ ಒಂದು ಅದ್ಭುತವಾದದ್ದು. ಅದರಲ್ಲೂ ಕೂಡ ಇಂದಿನ ಯುಗದಲ್ಲಿ ಅಸಾಧ್ಯ ಎಂಬ ವಿಚಾರಗಳನ್ನು ಕೂಡ ಸಾಧ್ಯವಾಗಿಸಬಹುದಾಗಿದೆ. ಆ ಮಟ್ಟಕ್ಕೆ ಜನರ ಮನಸ್ಥಿತಿ, ತಂತ್ರಜ್ಞಾನ, ವಿಜ್ಞಾನ ಇವೆಲ್ಲವೂ ಬೆಳೆದು ನಿಂತಿದೆ. ಇದರಿಂದ ಪ್ರತಿದಿನ ಒಂದೊಂದು ಹೊಸ ಬೆಳವಣಿಗೆಯನ್ನು ಕಾಯುತ್ತಿರುತ್ತೇವೆ. ಹೀಗಿರುವಾಗ ಪ್ರಪಂಚದ ಮತ್ತೊಂದು ಅದ್ಭುತವೊಂದು ನಡೆದಿದೆ.
ಒಬ್ಬ ಪುರುಷ ಗರ್ಭಾವತಿಯಾಗುತ್ತಾನೆ ಎಂದರೆ ಅದನ್ನು ನಂಬುವುದೇ ಅಸಾಧ್ಯ, ಆದ್ರೆ ಅದು ಸಾಧ್ಯವಾಗಿದೆ. ವ್ಯಕ್ತಿಯೊಬ್ಬರು ಗರ್ಭಧಾರಣೆ ಮಾಡಿ ಬರೋಬ್ಬರಿ ನಾಲ್ಕು ಜನ ಮಕ್ಕಳಿಗೆ ಜನ್ಮ ನೀಡಿ ಘಟನೆ ಅಮೇರಿಕಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅಮೇರಿಕಾದ ಥಾಮಸ್ ಎಂಬ ವ್ಯಕ್ತಿಯು ಟ್ರಾನ್ಸ್ ಜಂಡರ್ ಆಗಿದ್ದು ಪಬ್ಲಿಕ್ ಸ್ಪೀಕರ್ ಹಾಗೂ ಅಡ್ವಕೇಟ್ ಕೂಡ ಆಗಿದ್ದಾರೆ. ಸಾಮಾನ್ಯವಾಗಿ ಟ್ರಾನ್ಸ್ ಜಂಡರ್ ಎಲ್ಲರೂ ಮೊದಲು ಹುಡುಗನಾಗಿ ಹುಟ್ಟಿ ನಂತರ ಹುಡಿಗಿಯಾಗಿ ಪರಿವರ್ತನೆಗೊಳ್ಳುತ್ತಾರೆ. ಆದರೆ ವಿಚಿತ್ರ ಎಂಬಂತೆ 1984ರಲ್ಲಿ ಜನಿಸಿದ ಈತ ಹುಡುಗಿಯಾಗಿ ಹುಟ್ಟಿದ ನಂತರ ಹುಡುಗನಾಗಿ ಬದಲಾಗಿದ್ದಾನೆ.
ಹೌದು ಗೆಳೆಯರೇ ಈತ ಹುಟ್ಟಿದಾಗ ಸಂಪೂರ್ಣ ಹುಡುಗಿಯಾಗಿ ದೇಹದ ಎಲ್ಲಾ ಭಾಗವು ಅದೇ ರೀತಿ ಇದ್ದು ಬೆಳಿತಾ ಬೆಳಿತಾ ಹುಡುಗನಾಗಿ ಬದಲಾಗುತ್ತಾನೆ. ಅದರಂತೆ ಈ 24ನೇ ವರ್ಷಕ್ಕೆ ಬಂದಾಗ ನಾನ್ಸಿ ಎಂಬ ಹುಡುಗಿಯೊಂದಿಗೆ ಮದುವೆಯಾಗಿ ಸಲಿಂಗ ದಂಪತಿಗಳಾಗುತ್ತಾರೆ.
೨೦೦೫ರಲ್ಲಿ ಥಾಮಸ್ ಹಾಗೂ ನಾನ್ಸಿ ಇಬ್ಬರು ಮಕ್ಕಳನ್ನು ಪಡೆಯಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿಕೊಳ್ಳುತ್ತಾರೆ.
ಆದರೆ ಕೆಲವು ಕಾರಣಗಳಿಂದಾಗಿ ನಾನ್ಸಿಯ ದೇಹದಲ್ಲಿದ್ದಂತಹ ಗರ್ಭಕೋಶವನ್ನು ಡಾಕ್ಟರ್ ಕೆಲವು ಕಾರಣಗಳಿಂದಾಗಿ ತೆಗೆದು ಹಾಕಿರುತ್ತಾರೆ. ಇದರಿಂದ ನಾನ್ಸಿಗೆ ಮಕ್ಕಳಾಗುವ ಅವಕಾಶ ಇರೋದಿಲ್ಲ, ಆದರೆ ಥಾಮಸ್ಗೆ ಮಕ್ಕಳನ್ನು ಹೇರುವ ಸಾಮರ್ಥ್ಯವಿರುತ್ತದೆ. ಈ ಕಾರಣದಿಂದ ಇಂಟರ್ನೆಟ್ ಅಲ್ಲಿ ಬೇರೆವರಿಂದ ವೀ ರ್ಯಾಣಗಳನ್ನು ಪಡೆದುಕೊಂಡು ಆರ್ಟಿಫಿಷಿಯಲ್ ಇನ್ಸೋ ಮಿನೇಷನ್ ಎಂಬ ಟೆಕ್ನಿಕ್ ಮೂಲಕ ಥಾಮಸ್ ಗರ್ಭ ಧರಿಸುತ್ತಾನೆ.
ಇದರಿಂದ 2008 ಜೂನ್ 29ರಂದು ಮೊಟ್ಟಮೊದಲು ಥಾಮಸ್ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದನು. ಇದೇ ರೀತಿ 2008 ರಿಂದ 2012ರವರೆಗೆ ಥಾಮಸ್ ಮೂರು ಜನ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಪ್ರಪಂಚದ ಮೊಟ್ಟ ಮೊದಲ ಪುರುಷನಾಗಿ ಪ್ರಖ್ಯಾತಿ ಪಡೆದಿದ್ದಾನೆ.