2023ರಲ್ಲಿ ಜೀವನ ಉತ್ತಮವಾಗಿರುತ್ತದೆ ಎಂದ ಸಮೀಕ್ಷೆ

Share the Article

ಕಳೆದ ವರ್ಷಕ್ಕಿಂತ 2023ರಲ್ಲಿ ಜೀವನ ಉತ್ತಮವಾಗಿರುತ್ತದೆ ಎಂದು ಸಮೀಕ್ಷೆಗೆ ಒಳಪಡಿಸಿದ್ದ ನಾಲ್ಕನೇ ಮೂರರಷ್ಟು ನಗರ ಭಾರತೀಯರು ಹೇಳಿದ್ದಾರೆ ಎಂದು ಸಮೀಕ್ಷೆಯೊಂದು ಬಯಲಿಗೆ ಬಂದಿದೆ.

ಡಿಸೆಂಬರ್ 2022 ರಲ್ಲಿ ನಡೆಸಿದ ಈ ಸಮೀಕ್ಷೆಯು 186 ನಗರ ಭಾರತೀಯರ ಪ್ರತಿಕ್ರಿಯೆಯನ್ನಾಧರಿಸಿದೆ. ಭಾರತದಲ್ಲಿ YouGov Omnibus ಮೂಲಕ ಆನ್ನೈನ್‌ನಲ್ಲಿ ಸಂಗ್ರಹಿಸಿದ ಡೇಟಾ ಇದಾಗಿದೆ.

ಸಂದರ್ಶಿಸಿದ ಸುಮಾರು 75 ಪ್ರತಿಶತ ನಗರ ಭಾರತೀಯರು ತಮ್ಮ ಜೀವನಕ್ಕಿಂತ ಈ ವರ್ಷ ಉತ್ತಮವಾಗಿರುತ್ತದೆ ಎಂದು ಭಾವಿಸಿರುತ್ತಾರೆ. ಆದರೆ 21 ಪ್ರತಿಶತದಷ್ಟು ಜನರು ತಮ್ಮ ಜೀವನವು ಒಂದೇ ಆಗಿರುತ್ತದೆ ಎಂದು ಭಾವಿಸುತ್ತಾರೆ ಮತ್ತು ಕೇವಲ ನಾಲ್ಕು ಪ್ರತಿಶತದಷ್ಟು ಜನರು ತಮ್ಮ ಜೀವನವು 2022 ಕ್ಕಿಂತ ಕೆಟ್ಟದಾಗಿರುತ್ತದೆ ಎಂದು ಭಾವಿಸುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಸಮೀಕ್ಷೆ ಪ್ರಕಾರ 10 ನಗರ ಭಾರತೀಯರಲ್ಲಿ ಒಬ್ಬರು ಇದು ಕೆಟ್ಟ ವರ್ಷ ಎಂದು ತಿಳಿಸಿದ್ದು, 27 ಪ್ರತಿಶತದಷ್ಟು ಜನರು ಕಳೆದ ವರ್ಷದ ಬಗ್ಗೆ ತಮ್ಮ ಭಾವನೆಗಳ ಬಗ್ಗೆ ಖಚಿತವಾಗಿಲ್ಲ ಎಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Leave A Reply