EPFO ನಾಮಿನೇಷನ್ ಈ ರೀತಿ ಸಲ್ಲಿಸಿ!
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ತಿಳಿಯಲೇಬೇಕಾದ ಸುದ್ದಿ ಇದು. ಉದ್ಯೋಗಿಗಳ ಪಾಲಿಗೆ ಪಿಎಫ್ (PF) ಮೊತ್ತವು ಸಂಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವ ಖಾತೆ ಎಂದರೇ ತಪ್ಪಾಗಲಾರದು. ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ನೀಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯುನಿವರ್ಸಲ್ ಅಕೌಂಟ್ ನಂಬರ್ (UAN) ಮೂಲಕ ಇ-ನಾಮನಿರ್ದೇಶನವನ್ನು ಮಾಡಬಹುದಾಗಿದೆ.
ಅರ್ಹ ಕುಟುಂಬ ಸದಸ್ಯರಿಗೆ ಪಿಎಫ್, ಪಿಂಚಣಿ ಮತ್ತು ಉದ್ಯೋಗಿಗಳ ಠೇವಣಿ-ಸಂಯೋಜಿತ ವಿಮಾ ಯೋಜನೆಯಡಿ (EDLI) 7 ಲಕ್ಷದವರೆಗೆ ಆನ್ಲೈನ್ ಪಾವತಿ ಮಾಡಲು ಇಪಿಎಫ್ಒ ನಲ್ಲಿ ಇ-ನಾಮನಿರ್ದೇಶನವು ನಿರ್ಣಾಯಕವಾಗಿದೆ. ನಾಮನಿರ್ದೇಶನವನ್ನು ಯಾವಾಗ ಬೇಕಾದರೂ ನವೀಕರಿಸಬಹುದು. ಆದರೆ ಮದುವೆಯ ನಂತರ ಇ- ನಾಮನಿರ್ದೇಶನವು ಅಗತ್ಯ ಎಂದು EPFO ಹೇಳಿದೆ. EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ತನ್ನ ಸದಸ್ಯ ಉದ್ಯೋಗಿಗಳಿಗೆ ಇ-ನಾಮನಿರ್ದೇಶನದ ಸೌಲಭ್ಯವನ್ನು ನೀಡಿದ್ದೂ, ಇಪಿಎಫ್ ಖಾತೆದಾರರು ಮನೆಯಲ್ಲಿ ಕುಳಿತೇ ಆನ್ಲೈನ್ ಮೂಲಕ ನಾಮಿನಿಯನ್ನು ಸೇರಿಸಬಹುದು. ಸಕ್ರಿಯವಾಗಿರುವ UAN ಮತ್ತು ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾದ ಸದಸ್ಯರು ಮಾತ್ರ ಇ-ನಾಮನಿರ್ದೇಶನದ ಸೌಲಭ್ಯ ಪಡೆಯಬಹುದು.
UAN ನೊಂದಿಗೆ ಇ- ನಾಮನಿರ್ದೇಶನವನ್ನು ಸಲ್ಲಿಸಲು ಈ ಕ್ರಮವನ್ನು ಅನುಸರಿಸಿ:
- EPFO ವೆಬ್ಸೈಟ್ಗೆ ಹೋಗಿ (https://epfindia.gov.in/) ಮತ್ತು ‘ಸೇವೆಗಳು’ ವಿಭಾಗದಲ್ಲಿ ‘ಉದ್ಯೋಗಿಗಳಿಗಾಗಿ’ ಕ್ಲಿಕ್ ಮಾಡಿ.
- ಇದು ನಿಮ್ಮನ್ನು “ಉದ್ಯೋಗಿಗಳಿಗಾಗಿ” ಪುಟಕ್ಕೆ ಮರುನಿರ್ದೇಶಿಸುತ್ತದೆ. ಈಗ ‘ಸದಸ್ಯ UAN/ಆನ್ಲೈನ್ ಸೇವೆ (OCS/OTCP)’ ಮೇಲೆ ಕ್ಲಿಕ್ ಮಾಡಿ.
- ಈಗ UAN ಮತ್ತು ಪಾಸ್ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
- ‘ಮ್ಯಾನೇಜ್’ ಟ್ಯಾಬ್ನಲ್ಲಿ ನಾಲ್ಕನೇ ಆಯ್ಕೆಯನ್ನು ಆರಿಸಿ – ‘ಇ-ನಾಮನಿರ್ದೇಶನ’ ಆಯ್ಕೆಮಾಡಿ.
*ಇದರ ನಂತರ ‘ವಿವರಗಳನ್ನು ಒದಗಿಸಿ’ ಟ್ಯಾಬ್ ಪರದೆಯ ಮೇಲೆ ಕಾಣಿಸುತ್ತದೆ, ‘ಉಳಿಸು’ ಕ್ಲಿಕ್ ಮಾಡಿ. - ಕುಟುಂಬದ ಘೋಷಣೆಯನ್ನು ನವೀಕರಿಸಲು ‘ಹೌದು’ ಕ್ಲಿಕ್ ಮಾಡಿ.
- ಈಗ ‘ಕುಟುಂಬ ವಿವರಗಳನ್ನು ಸೇರಿಸಿ’ ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಕೂಡ ಸೇರಿಸಬಹುದು.
- ಯಾವ ನಾಮಿನಿಯ ಪಾಲು ಬರುತ್ತದೆ ಎಂಬುದನ್ನು ಪ್ರಕಟಿಸಲು ‘ನಾಮನಿರ್ದೇಶನ ವಿವರಗಳು’ ಕ್ಲಿಕ್ ಮಾಡಿ. ವಿವರಗಳನ್ನು ನಮೂದಿಸಿದ ನಂತರ ‘ಸೇವ್ ಇಪಿಎಫ್ ನಾಮನಿರ್ದೇಶನ’ ಕ್ಲಿಕ್ ಮಾಡಿ.
- OTP ರಚಿಸಲು ‘e-Sign’ ಮೇಲೆ ಕ್ಲಿಕ್ ಮಾಡಿ. ಆಧಾರ್ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- OTP ಅನ್ನು ನಿರ್ದಿಷ್ಟಪಡಿಸಿದ ಜಾಗದಲ್ಲಿ ನಮೂದಿಸುವ ಮೂಲಕ ಸಲ್ಲಿಸಿ.
PF ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:
- ಅಧಿಕೃತ EPFO ವೆಬ್ಸೈಟ್ಗೆ ಭೇಟಿ ನೀಡಿ epfindia.gov.in. ಡ್ಯಾಶ್ಬೋರ್ಡ್ನ ಮೇಲ್ಬಾಗದಲ್ಲಿ ಉಲ್ಲೇಖಿಸಲಾದ ‘ಸರ್ವೀಸ್’ ವಿಭಾಗದ ಮೇಲೆ ಕ್ಲಿಕ್ ಮಾಡಿ.
- ಈ ವಿಭಾಗದ ಅಡಿಯಲ್ಲಿ, ‘ಉದ್ಯೋಗಿಗಳಿಗಾಗಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ, ಹೊಸ ಪೇಜ್ ತೆರೆಯುತ್ತೆ ‘ಸರ್ವೀಸ್’ ಆಯ್ಕೆಯಲ್ಲಿ ಕಾಣಿಸುವ ‘ಸದಸ್ಯ ಪಾಸ್ಬುಕ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ‘ಸದಸ್ಯ ಪಾಸ್ಬುಕ್’ ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್ಗೆ ನಿರ್ದೇಶಿಸಲಾಗುತ್ತದೆ.
- ಪಾಸ್ವರ್ಡ್ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಟಾ ಕೋಡ್ಗೆ ಉತ್ತರಿಸಿ. ನಂತರ ‘ಲಾಗಿನ್’ ಕ್ಲಿಕ್ ಮಾಡಿ.
- ಇದರ ನಂತರ, ಚಂದಾದಾರರನ್ನು ಮುಖ್ಯ EPF ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ಮಾಹಿತಿ ಕಾಣಬಹುದು.
ಎಸ್ಎಮ್ಎಸ್ ಮೂಲಕ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಹೀಗೆ ಮಾಡಿ:
- ಪ್ರತಿಯೊಬ್ಬ EPFO ಸದಸ್ಯರು ತಮ್ಮದೆ UAN (ಸಾರ್ವತ್ರಿಕ ಖಾತೆ ಸಂಖ್ಯೆ) ಹೊಂದಿದ್ದಾರೆ. PF ಖಾತೆಯ ಬಾಕಿಯನ್ನು ತಿಳಿಯಲು, ನೌಕರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ನಂಬರ್ ಗೆ ‘EPFOHO UAN ENG’ ಎಂದು SMS ಕಳುಹಿಸಬಹುದು. ಈ ಮೂಲಕ ನೌಕರರು ಅವರ ಪಿಎಫ್ ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದಾಗಿದೆ. ಉಮಂಗ್ ಆಪ್ ಮೂಲಕವು ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದು.