Pensioners: ಪಿಂಚಣಿದಾರರೇ ನಿಮಗೊಂದು ಗುಡ್ ನ್ಯೂಸ್ | ಈ ಪ್ರಕ್ರಿಯೆ ಇನ್ಮುಂದೆ ಅತೀ ಸುಲಭ

ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದೆ.ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ.

ಭಾರತ ಸರ್ಕಾರವು ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ವ್ಯವಸ್ಥೆಯನ್ನು ದೊರೆಯುವಂತೆ ವ್ಯವಸ್ಥೆ ಮಾಡಿದ್ದು ಇದನ್ನು ಜೀವನ ಪ್ರಮಾಣ ಪತ್ರ ಎನ್ನಲಾಗುತ್ತದೆ. ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಯಾವುದೇ ತೊಂದರೆಗಳಿಲ್ಲದೆ ಪಡೆಯಲು ಸರಿಯಾದ ಸಮಯಕ್ಕೆ ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.ಮಾಸಿಕ ಪಿಂಚಣಿ ಪಡೆಯಲು ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಪಿಂಚಣಿ ವಿತರಣಾ ಪ್ರಾಧಿಕಾರಗಳಿಗೆ (ಪಿಡಿಎ) ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಆದರೆ ಈಗ ಪಿಂಚಣಿದಾರರು ಕಚೇರಿಗಳಿಗೆ ತೆರಳದೆ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.

ಡಿಜಿಟಲ್ ಲೈಫ್ ಪ್ರಮಾಣಪತ್ರಕ್ಕಾಗಿ ಜೀವನ್ ಪ್ರಮಾಣ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಅವಕಾಶವಿದೆ. ಅಲ್ಲದೆ ಡಾಕ್ಯುಮೆಂಟ್‌ಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲ್ಲವೇ ಜೀವನ್ ಪ್ರಮಾಣ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಅಲ್ಲಿ ಆಧಾರ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ, ಬ್ಯಾಂಕ್ ಖಾತೆ, ಬ್ಯಾಂಕ್ ಹೆಸರು, ಮೊಬೈಲ್ ಸಂಖ್ಯೆ ಮುಂತಾದ ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ಈ ಪ್ರಮಾಣಪತ್ರದ ಐಡಿಗಳನ್ನು ಪಿಂಚಣಿದಾರ, ಪಿಂಚಣಿ ವಿತರಣಾ ಏಜೆನ್ಸಿಯ ಜೀವನ ಪ್ರಮಾಣಪತ್ರ ಭಂಡಾರದಲ್ಲಿ ಸಂಗ್ರಹಿಸಲಾಗುತ್ತದೆ. ಅವುಗಳನ್ನು ಯಾವುದೇ ಸಮಯದಲ್ಲಿಯೂ ಎಲ್ಲಿ ಬೇಕಾದರೂ ಪ್ರವೇಶ ಪಡೆಯಬಹುದು. ಇದಕ್ಕಾಗಿ ಪ್ರಮಾಣಪತ್ರದ ಪಿಡಿಎಫ್ ಪ್ರತಿಯನ್ನು ಜೀವನ್ ಪ್ರಮಾಣ್ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಅದಕ್ಕಾಗಿ ಜೀವನ್ ಪ್ರಮಾಣ್ ಐಡಿ ನಮೂದಿಸಬೇಕಾಗುತ್ತದೆ.

ಪಿಂಚಣಿ ವಿತರಣಾ ಏಜೆನ್ಸಿಯಾದ ಜೀವನ್ ಪ್ರಮಾಣ್‌ನ ವೆಬ್‌ಸೈಟ್‌ನಿಂದಲೂ ಜೀವ ಪ್ರಮಾಣಪತ್ರವನ್ನು ಪಡೆಯಬಹುದು. ಈ ಜೀವನ ಪ್ರಮಾಣ ಪತ್ರ ಪಡೆಯಲು ಆಧಾರ್ ದೃಢೀಕರಣ ಕೂಡ ಕಡ್ಡಾಯವಾಗಿದ್ದು, ಹೀಗಾಗಿ, ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕಾಗುತ್ತದೆ.

ಆನ್‌ಲೈನ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಜೀವನ್ ಪ್ರಮಾಣ್ ಆಧಾರ್ ವೇದಿಕೆಯನ್ನು ಬಳಕೆ ಮಾಡಲಾಗುತ್ತದೆ. ದೃಢೀಕರಣ ಪೂರ್ಣಗೊಂಡ ಬಳಿಕ, ಜೀವನ್ ಪ್ರಮಾಣ ಪ್ರಮಾಣಪತ್ರ ಐಡಿಯನ್ನು ಮೊಬೈಲ್ ಸಂಖ್ಯೆಗೆ SMS ಮೂಲಕ ರವಾನೆ ಮಾಡಲಾಗುತ್ತದೆ.

ಪಿಂಚಣಿದಾರರು ಸಾಫ್ಟ್‌ವೇರ್ ಅಪ್ಲಿಕೇಶನ್, ಸುರಕ್ಷಿತ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ರಚನೆ ಮಾಡಬಹುದು. CSCಗಳು, ಬ್ಯಾಂಕ್‌ಗಳು, ಸರ್ಕಾರಿ ಕಛೇರಿಗಳು ಇಲ್ಲವೇ ಯಾವುದೇ PC/Mobile/Tablet ನಲ್ಲಿ ಕ್ಲೈಂಟ್ ಅಪ್ಲಿಕೇಶನ್‌ನಿಂದ ನಿರ್ವಹಿಸಲ್ಪಡುವ ಜೀವನ್ ಪ್ರಮಾಣ ಕೇಂದ್ರಗಳ ಮೂಲಕ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಪಡೆಯಲು ಅವಕಾಶವಿದೆ. ರಚಿಸಲಾದ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು (DLC) ಆನ್‌ಲೈನ್‌ನಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

Leave A Reply

Your email address will not be published.