15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಲಾಟರಿ ಆರಂಭ! ಲಾಟರಿ ಮಾರಾಟ ಸಂಘದಿಂದ ಒತ್ತಾಯ! ಈ ಕುರಿತು ಸರ್ಕಾರದ ನಿಲುವೇನು ಗೊತ್ತ?

ಲಾಟರಿ ಮಾರಾಟದ ಬ್ಯುಸಿನೆಸ್ ಅಲ್ಲಿ ಕೇರಳ ರಾಜ್ಯ ಎತ್ತಿದ ಕೈ. ಪ್ರಸ್ತುತ ಕೇರಳ ಹೇಗೆ ಈ ಫೀಲ್ಡ್ ಅಲ್ಲಿ ಹೆಸರು ಗಳಿಸಿದೆಯೋ ಹಾಗೆಯೇ ಕರ್ನಾಟಕ ಕೂಡ ಸುಮಾರು ಹದಿನೈದು ವರ್ಷಗಳ ಹಿಂದೆ ಲಾಟರಿ ಮಾರಾಟದಿಂದ ತುಂಬಾ ಫೇಮಸ್ ಆಗಿತ್ತು. ಕಾರಣಾಂತರಗಳಿಂದ ಸರ್ಕಾರ ಅದನ್ನು ನಿಷೇದಿಸಿತ್ತು. ಆದರೆ ಇದೀಗ ಮತ್ತೆ ಲಾಟರಿ ಮಾರಾಟಕ್ಕೆ ಕರ್ನಾಟಕ ಸರ್ಕಾರ ಅಸ್ತು ಅನ್ನಲು ತಯಾರಿ ನಡೆಸುತ್ತಿದೆ. ಹಾಗಾದರೆ ಕರ್ನಾಟಕದಲ್ಲಿ ಮತ್ತೆ ಲಾಟರಿ ಮಾರಾಟದ ಹಾವಳಿ ಶುರುವಾಗುತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹದಿನೈದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಲಾಟರಿ ಮಾರಾಟ ತುಂಬಾ ಪ್ರಸಿದ್ಧಿಯನ್ನು ಪಡೆದಿತ್ತು. ಇದಕ್ಕೂ ಮುಂಚೆ ಸರ್ಕಾರವೇ 7 ಲಾಟರಿಗಳನ್ನು ನಡೆಸ್ತಿತ್ತು. ವಾರ್ಷಿಕ ನೂರು ಕೋಟಿ ಆದಾಯ ಸರ್ಕಾರಕ್ಕೆ ಬರ್ತಿತ್ತು. ಈ ಮೂಲಕ ಲಾಟರಿ ಮಾರಾಟ ಮಾಡುವ ಏಜೆಂಟ್‍ಗಳು ಕೂಡ ಬದುಕು ನಡೆಸುತ್ತಿದ್ದರು. ಆದರೆ ಲಾಟರಿ ಮಾರಾಟದಿಂದ ಸಾವಿರಾರು ಕುಟುಂಬಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಬೀದಿಗೆ ಬಿದ್ದವು. ಇದರ ಗೀಳಿನಿಂದ ಅನೇಕ ಸಂಸಾರಗಳು ಮುರಿದು ಬಿದ್ದವು. ಈ ಎಲ್ಲಾ ಕಾರಣಗಳಿಂದ 2007ರಲ್ಲಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಲಾಟರಿ ಮಾರಾಟವನ್ನು ನಿಷೇಧಿಸಿತು. ಅಕ್ರಮವಾಗಿ ಮಾರಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಆದೇಶಿಸಿತ್ತು.

ಆದರೆ ಇದೀಗ ಮತ್ತೆ ಲಾಟರಿ ಮಾರಾಟವನ್ನು ಅಧಿಕೃತಗೊಳಿಸಲು ರಾಜ್ಯ ಸರಕಾರ ಚಿಂತಿಸುತ್ತಿದೆ. ಈ ಬಗ್ಗೆ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ಖುದ್ದು ರಾಜ್ಯಪಾಲರ ಕಛೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

ಈ ಬಗ್ಗೆ ಸಿಎಂ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದು, ಪತ್ರದಲ್ಲಿ ಲಾಟರಿ ಮಾರಾಟವನ್ನು ಪುನರಾರಂಭ ಮಾಡುವಂತೆ ಮನವಿ ಮಾಡಲಾಗಿದೆ. ಇದರ ಕುರಿತು ರಾಜ್ಯಪಾಲರ ಕಛೇರಿಯಿಂದ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆಯಲಾಗಿದ್ದು, ಮತ್ತೆ ಲಾಟರಿ ಮಾರಾಟಕ್ಕೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರ 2007ರಲ್ಲಿ ನಿಷೇಧ ಮಾಡಿದ ಬಳಿಕ ಕೆಲವು ಲಾಟರಿ ಮಾರಾಟಗಾರರು, ಏಜೆಂಟ್ ಗಳು ಸರ್ಕಾರದ ನಿಲುವಿನ ವಿರುದ್ಧ 2014ರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಮೊಕದ್ದಮೆ ಹೂಡ್ತಾರೆ. ಆದರೆ ಸುಪ್ರೀಂಕೋರ್ಟ್ ಕೂಡ ಇದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿವೇಚನೆ, ನಾವು ಮಧ್ಯಸ್ಥಿಕೆ ವಹಿಸಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇಂತಹ ಹಲವು ಬೆಳವಣಿಗೆಗಳ ಆದ ಬಳಿಕ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘವು ಎಚ್ಚೆತ್ತುಕೊಂಡು ರಾಜ್ಯ ಸರ್ಕಾರಕ್ಕೆ ಲಾಟರಿ ಮಾರಾಟ ಮರು ಅನುಷ್ಠಾನ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ರಾಜ್ಯದಲ್ಲಿ ಸಾಂಪ್ರದಾಯಿಕ ಲಾಟರಿ ವ್ಯವಸ್ಥೆ ಪುನರಾರಂಭಕ್ಕೆ ಸರ್ಕಾರ ಮುಂದಾಗಿ ಲಾಟರಿ ಮಂತ್ರಿಯನ್ನು ನೇಮಕ ಮಾಡಬೇಕು. ರಾಜ್ಯದ ಸಂಪನ್ಮೂಲ ಹೆಚ್ಚಳದ ಜೊತೆಗೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಲಾಟರಿ ಮಾರಾಟ ವ್ಯವಸ್ಥೆಯನ್ನು ಶುರುಮಾಡಬೇಕೆಂದು ಸಂಘಟನೆಯಿಂದ ತೀವ್ರ ಒತ್ತಡ ಹಾಕುತ್ತಿದೆ.

ಇದೆಲ್ಲಾ ವಿಚಾರಗಳು ಸದ್ಯ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿರುವುದರಿಂದ ಸರ್ಕಾರ ಮತ್ತೆ ಲಾಟರಿ ಮಾರಾಟಕ್ಕೆ ಅನುಮತಿ ನೀಡುತ್ತದೆಯೋ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.