ದೊಡ್ಡ ಎಡವಟ್ಟು, ಡಾಕ್ಟರ್ ಹೀಗೂ ಮಾಡ್ತಾರಾ ? ಅಪರೇಷನ್ ವೇಳೆ ಮಹಿಳೆ ಹೊಟ್ಟೆಯಲ್ಲಿ ಟವೆಲ್ ಇಟ್ಟು ಮರೆತ್ರು ನಂತರ ಆಗಿದ್ದೇನು ಗೊತ್ತಾ?
ವೈದ್ಯರನ್ನು ಪ್ರಾಣ ಉಳಿಸುವ ದೇವರೆಂದು ನಂಬುತ್ತಾರೆ. ಆದರೆ ಅಂತಹ ವೈದ್ಯರೇ ಒಮ್ಮೆ ಮೈ ಮೇಲೆ ಪ್ರಜ್ಞೆಯಿಲ್ಲದಂತೆ ವರ್ತಿಸಿದರೆ, ರೋಗಿಗಳು ಜೀವವನ್ನೆ ಕಳೆದುಕೊಳ್ಳಬೇಕಾಗಬಹುದು. ಅಥವಾ ಜೀವನ ಪೂರ್ತಿ ನರಳಾಡ ಬೇಕಾಗಿರುತ್ತದೆ. ಹಾಗೆಯೇ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು ಆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಟವೆಲ್ ಬಿಟ್ಟು ಯಡವಟ್ಟು ಮಾಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ನಡೆದಿದೆ.
ಮೊದಲಿಗೆ ಹೊರಗೆ ಚಳಿ ಹೆಚ್ಚಾಗಿದ್ದರಿಂದ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ಹೆರಿಗೆ ನಂತರ ಮನೆಗೆ ಬಂದ ಮೇಲೂ ಮಹಿಳೆಯ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಶಂಶೇರ್, ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಆಕೆಯ ಹೊಟ್ಟೆಯನ್ನು ಪರೀಕ್ಷೆಸಿದಾಗ ಟವೆಲ್ ಇರುವುದು ಪತ್ತೆಯಾಗಿ, ಇದೀಗ ಮಹಿಳೆಗೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಟವೆಲ್ ಹೊರಗೆ ತೆಗೆಯಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ರಾಜೀವ್ ಸಿಂಘಾಲ್ ಅವರು, ಅಮ್ರೋಹಾದ ನೌಗಾವಾನಾ ಸಾದತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಸೈಫೀ ನರ್ಸಿಂಗ್ ಹೋಮ್ ನಡೆಸಲಾಗುತ್ತಿದೆ. ನಜ್ರಾನಾ ಎಂಬ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಹೊಟ್ಟೆಯಲ್ಲಿ ವೈದ್ಯರು ಟವೆಲ್ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಈ ಸಂಬಂಧ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.