ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ರೂಪಾಯಿಗಳ ಬಹುಮಾನ! | ಈ ಸ್ಪರ್ಧೆಯಲ್ಲಿ ನೀವೂ ಪಾಲ್ಗೊಳ್ಳಿ ಹಣ ನಿಮ್ಮದಾಗಿಸಿಕೊಳ್ಳಿ

ಸರಕಾರ ಇರುವುದೇ ಜನರ ಒಳಿತಿಗಾಗಿ. ಹೀಗಾಗಿ, ಜನರ ಒಪ್ಪಿಗೆಯ ಮೇರೆಗೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಉತ್ತಮ ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡುವ ಜೊತೆಗೆ, ಜನತೆಗೆ ನಗದು ಬಹುಮಾನವನ್ನು ಕೂಡ ಘೋಷಿಸಿದೆ.

ಹೌದು. ಕೇಂದ್ರ ಸರ್ಕಾರದಿಂದ ಜನತೆಗೆ ಗುಡ್ ನ್ಯೂಸ್ ಒಂದಿದ್ದು, 1ಲಕ್ಷದವರೆಗೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಆಯುಷ್ಮಾನ್ ಭಾರತ್ ಯೋಜನೆಗೆ ಹೊಸ ಲೋಗೋ ವಿನ್ಯಾಸವನ್ನ ರಚಿಸಿದವರಿಗೆ ಈ ಬಹುಮಾನ ದೊರಕಲಿದೆ.

ಕೇಂದ್ರ ಸರ್ಕಾರವು ದೇಶದ ಬಡ ಜನರಿಗೆ ಉಚಿತ ಆರೋಗ್ಯ ವಿಮೆಯನ್ನ ಒದಗಿಸುತ್ತಿದ್ದು, ಅರ್ಹ ಜನರಿಗೆ 5 ಲಕ್ಷ ರೂಪಾಯಿವರೆಗಿನ ವೈದ್ಯಕೀಯ ಸೌಲಭ್ಯವನ್ನ ಉಚಿತವಾಗಿ ಒದಗಿಸಲಾಗುವುದು. ಈಗ ಸರ್ಕಾರವು ಈ ಯೋಜನೆಗಾಗಿ ಹೊಸ ಲೋಗೋವನ್ನು ವಿನ್ಯಾಸಗೊಳಿಸಲು ಜನರ ಸಹಾಯವನ್ನು ಕೇಳಿದೆ. ಲೋಗೋವನ್ನ ವಿನ್ಯಾಸಗೊಳಿಸಲು ಆಸಕ್ತಿ ಇರುವವರು ಆನ್ ಲೈನ್’ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಲಾಂಛನವನ್ನ ಸಲ್ಲಿಸಲು ಜನವರಿ 12ಕೊನೆಯ ದಿನಾಂಕವಾಗಿದ್ದು, ಅತ್ಯುತ್ತಮ ಲೋಗೋಗೆ ಆಯ್ಕೆಯಾದ ವಿಜೇತರಿಗೆ 10,000 ರೂಪಾಯಿಂದ 1 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು. ಇಲ್ಲಿಯವರೆಗೆ, ಸ್ಪರ್ಧೆಯಲ್ಲಿ 970 ಕ್ಕೂ ಹೆಚ್ಚು ಲೋಗೋಗಳನ್ನ ಕಳುಹಿಸಲಾಗಿದೆ.

Leave A Reply

Your email address will not be published.