ಮಧ್ಯಾಹ್ನ 3 ರಿಂದ ರಾತ್ರಿ 9ರ ವರೆಗಿನ ಪ್ರಯಾಣ ಮಾಡುವವರೇ ನಿಮಗೊಂದು ಎಚ್ಚರಿಕೆಯ ಸಂದೇಶ | ಇಲ್ಲಿದೆ ಮಹತ್ವದ ಕಾರಣ

ಇಂದಿನ ಜೀವನ ಶೈಲಿಗೆ ಅನುಗುಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ವಾಹನಗಳು ಇರುವುದು ಸಹಜ. ದಿನನಿತ್ಯದ ಓಡಾಟಕ್ಕೆ ವಾಹನಗಳು ಅವಶ್ಯಕವಾಗಿದ್ದು, ಬಸ್ ಗಳಿಗೆ ಕಾಯುತ್ತಾ ಟ್ರಾಫಿಕ್ ನಡುವಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವ ಸಮಯದಲ್ಲಿ ವಾಹನಗಳು ನೆರವಾಗುತ್ತವೆ. ಆಫೀಸ್, ಕೆಲಸ, ಮನೆ ಹೀಗೆ ಎಲ್ಲ ಕಡೆ ಸಂಚರಿಸಲು ನೆರವಾಗುವ ವಾಹನಗಳಿಂದ ಬೇಕಾದಲ್ಲಿಗೆ ಬೇಕಾದ ಸಮಯಕ್ಕೆ ತೆರಳಬಹುದು.

 

ಹೀಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಯಾವ ಸಮಯದಲ್ಲಿ ಮಾಡುತ್ತೀರಿ ಜೊತೆಗೆ ಹೇಗೆ ಮಾಡುತ್ತೀರಿ ಎನ್ನುವ ವಿಚಾರ ಕೂಡ ಗಮನಿಸಬೇಕಾದ ಸಂಗತಿಯಾಗಿದೆ. ಪ್ರಯಾಣ ಮಾಡುವ ವೇಳೆ ಹೆಚ್ಚಿನ ಎಚ್ಚರ, ನಿಗಾ ವಹಿಸುವುದು ಅಗತ್ಯ.

ನೀವು ಕಾರಿನ ಮೂಲಕವೋ ಇಲ್ಲವೇ ಬೇರೆ ಯಾವುದೇ ವಾಹನ ಮೂಲಕ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ಒಳಗೆ ಪ್ರಯಾಣ ಮಾಡುವ ಹವ್ಯಾಸ ಹೊಂದಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದ್ದು, ಹಾಗೆಂದ ಮಾತ್ರಕ್ಕೆ ಉಳಿದ ಸಮಯದಲ್ಲಿ ಹೇಗೆ ಬೇಕೋ ಹಾಗೆ ವಾಹನ ಚಲಾಯಿಸಬಹುದು ಎಂಬ ಅರ್ಥವಲ್ಲ. ಕೇಂದ್ರ ರಸ್ತೆ ಸಾರಿಗೆ ಇಲಾಖೆ ಮಹತ್ವದ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಅಚ್ಚರಿಯ ಸಂಗತಿ ಬಹಿರಂಗ ಪಡಿಸಿದೆ. ಹೌದು!! 3 ರಿಂದ ರಾತ್ರಿ 9ರವರೆಗೆ ಭಾರತದ ರಸ್ತೆಗಳಲ್ಲಿ ಸಂಚಾರ ಮಾಡುವ ವೇಳೆ ಭಾರತದಲ್ಲಿ ಅತೀ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸಿದೆ ಎಂಬ ಮಾಹಿತಿ ತಿಳಿಸಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ2021ರ ಸಾಲಿನ ರಸ್ತೆ ಅಪಘಾತದ ಅಂಕಿ ಅಂಶ ದಾಖಲೆ ಬಿಡುಗಡೆ ಮಾಡಿದ್ದು, ಈ ದಾಖಲೆ ಅನುಸಾರ ಭಾರತದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ವರೆಗಿನ ಪ್ರಯಾಣದಲ್ಲಿ ಅತೀ ಹೆಚ್ಚು ಅಪಘಾತ ಸಂಭವಿಸಿದ್ದು ಜೊತೆಗೆ ಅತೀ ಹೆಚ್ಚು ಸಾವು ನೋವು ಕೂಡ ಸಂಭವಿಸಿದೆ.

ಇನ್ನು ಭಾರತದ ರಸ್ತೆಗಳಲ್ಲಿನ ಪ್ರಯಾಣದಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ವೆರಗಿನ ಪ್ರಯಾಣ ಸೇಫ್ ಎಂದು ಅಂಕಿ ಅಂಶಗಳು ವರದಿ ಮಾಡಿವೆ.
2017ರಿಂದ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆ ವರೆಗೆ ಸಂಭವಿಸುವ ಅಪಘಾತ ಪ್ರಮಾಣ ಹೆಚ್ಚು ಕಂಡು ಬಂದಿದೆ. 2017ರಿಂದ ಇಲ್ಲಿಯವರೆಗೆ ಅಪಘಾತ ಪ್ರಮಾಣದ ಸರಾಸರಿ ಶೇಕಡಾ 35. ಎನ್ನಲಾಗಿದ್ದು,ಇದರಲ್ಲಿ 2020ರಲ್ಲಿ ಲಾಕ್‌ಡೌನ್ ಹಿನ್ನೆಲೆ ಅತೀ ಕಡಿಮೆ ಅಪಘಾತ ಪ್ರಕರಣಗಳು ವರದಿಯಾಗಿವೆ. 2021ರಲ್ಲಿ ನಡೆದ 4,996 ಅಪಘಾತ ಪ್ರಕರಣಗಳು ವರದಿಯಾಗಿದ್ದು ಆದರೆ ಯಾವ ಸಮಯದಲ್ಲಿ ನಡೆದಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ.

2021ರಲ್ಲಿ ಒಟ್ಟು 4.12 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದೆ. ಇದರಲ್ಲಿ 1.58 ಲಕ್ಷ ರಸ್ತೆ ಅಪಘಾತಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ಒಳಗೆ ನಡೆದಿವೆ ಎನ್ನಲಾಗಿದೆ. ಇದರ ಜೊತೆಗೆ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಶೇಕಡ 21 ರಷ್ಚು ರಸ್ತೆ ಅಪಘಾತಗಳು ನಡೆದಿದೆ. ಇನ್ನು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 6 ಗಂಟೆ ಒಳಗೆ ಶೇಕಾಡ 18 ರಷ್ಟು ಅಪಘಾತಗಳು ಸಂಭವಿಸಿದೆ ಎಂದು ತಿಳಿದುಬಂದಿದೆ.

2021ರ ಜನವರಿ ತಿಂಗಳಲ್ಲಿ ಅತೀ ಹೆಚ್ಚು ರಸ್ತೆ ಅಪಘಾತ ಪ್ರಕರಣ ದಾಖಲಾಗಿದ್ದು, ಜನವರಿಯಲ್ಲಿ 40,305 ರಸ್ತೆ ಅಪಘಾತ ಸಂಭವಿಸಿದೆ. ಇನ್ನು ಮಾರ್ಚ್ ತಿಂಗಳಲ್ಲಿ 39,491 ಅಪಘಾತ ಪ್ರಕರಣ ವರದಿಯಾಗಿದೆ. ಈ ಎರಡು ತಿಂಗಳ ಪೈಕಿ ಅತೀ ಹೆಚ್ಚು ಸಾವು ಮಾರ್ಚ್ ತಿಂಗಳಲ್ಲಿ ಸಂಭವಿಸಿದ್ದು, ಮಾರ್ಚ್ ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14,579 ಮಂದಿ ಮೃತ ಪಟ್ಟಿದ್ದಾರೆ.

ಇನ್ನು ಜನವರಿ ತಿಂಗಳಲ್ಲಿ 14,575 ಸಾವು ಸಂಭವಿಸಿದೆ ಎನ್ನಲಾಗಿದೆ. 3 ರಿಂದ ರಾತ್ರಿ 9 ಗಂಟೆ ಒಳಗಡೆ ಅತೀ ಹೆಚ್ಚು ಅಪಘಾತ ಸಂಭವಿಸಿ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ಜೊತೆಗೆ ಉತ್ತರ ಪ್ರದೇಶ ಮೊದಲ ಸ್ಥಾನವನ್ನೂ ಬಾಚಿ ಕೊಂಡಿವೆ. ಈ ಎರಡು ರಾಜ್ಯಗಳಲ್ಲಿ ಒಟ್ಟು 82,879 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.