Flipkart ಇಯರ್ ಎಂಡ್ ಸೇಲ್ | ಈ ಬ್ರಾಂಡ್ ಮೊಬೈಲ್ ಸಿಗುತ್ತೆ ರಿಯಾಯಿತಿ ಬೆಲೆಯಲ್ಲಿ!

ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹೊಸ ಆಫರ್ ನೀಡುವುದರ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಇದೀಗ  ಫ್ಲಿಪ್‌ಕಾರ್ಟ್ ನಲ್ಲಿ ಇಯರ್ ಎಂಡ್ ಸೇಲ್ ಆರಂಭವಾಗಿದೆ.

ಎಲ್ಲಾ ಬ್ರಾಂಡ್‌ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿದ್ದು, ಇದೀಗ  ಐದು ತಿಂಗಳ ಹಿಂದೆ ಬಿಡುಗಡೆಯಾದ ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್ ಫೋನ್ ಮೇಲೆ ರೂ.14,000 ರಿಯಾಯಿತಿಯನ್ನು ಘೋಷಿಸಿದೆ. ಗೂಗಲ್​ ಪಿಕ್ಸೆಲ್​ 6ಎ ಸ್ಮಾರ್ಟ್‌ಫೋನ್ ಅನ್ನು ಕೇವಲ ಒಂದು ಸ್ಟೋರೇಜ್​ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಇದು 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್ ಮಾದರಿಯ ಮೊಬೈಲ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆ ರೂ.43,999 ಆಗಿದೆ.

ಆದರೆ ಪ್ರಸ್ತುತ, ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್‌ನಲ್ಲಿ ಕೇವಲ ರೂ.29,999 ಗೆ ಖರೀದಿಸುವ ಅವಕಾಶವಿದೆ. ಅಂದರೆ ಬಿಡುಗಡೆ ಬೆಲೆಗೆ ಹೋಲಿಸಿದರೆ ಗೂಗಲ್​ ಪಿಕ್ಸೆಲ್​ 6ಎ ಸ್ಮಾರ್ಟ್​​ಫೋನ್​ ಮೇಲೆ 14,000 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು.

ಗೂಗಲ್ ಪಿಕ್ಸೆಲ್ 6ಎ ಸ್ಮಾರ್ಟ್‌ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯ ಇದೆ. ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ರೂ.17,500 ವರೆಗೆ ರಿಯಾಯಿತಿ ಪಡೆಯಬಹುದು. ವಿನಿಮಯ ರಿಯಾಯಿತಿಯನ್ನು ಅನ್ವಯಿಸಿದರೆ, ನೀವು ರೂ.15,000 ಕ್ಕಿಂತ ಕಡಿಮೆ ಬೆಲೆಗೆ ಗೂಗಲ್​ ಪಿಕ್ಸೆಲ್​ 6ಎ ಸ್ಮಾರ್ಟ್‌ಫೋನ್ ಅನ್ನು ಹೊಂದಬಹುದು. ಈ ಎಲ್ಲಾ ಕೊಡುಗೆಗಳು ಡಿಸೆಂಬರ್ 31 ರ ಮೊದಲು ಮಾತ್ರ ಲಭ್ಯವಿರುತ್ತವೆ.

ಗೂಗಲ್​ ಪಿಕ್ಸೆಲ್​ 6ಎ ಸ್ಮಾರ್ಟ್‌ಫೋನ್ 4306mAh ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನೊಂದಿಗೆ ಈ ಸ್ಮಾರ್ಟ್​ಫೋನ್ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಮೊಬೈಲ್​​ಗೆ ಆಂಡ್ರಾಯ್ಡ್​ 13 ಅಪ್ಡೇಟ್​ ಶೀಘ್ರದಲ್ಲೇ ಬರಲಿದೆ. ಎಲ್ಲಾ ಪಿಕ್ಸೆಲ್ ಫೋನ್‌ಗಳು ಆಂಡ್ರಾಯ್ಡ್‌ನ ಕ್ಲೀನ್ ಆವೃತ್ತಿಯೊಂದಿಗೆ ಬರುತ್ತವೆ. ಅಂದರೆ ಇದು ಗೂಗಲ್​ ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ ಯಾವುದೇ ಅಪ್ಲಿಕೇಶನ್‌ಗಳನ್ನು ಹೊಂದಿರುವುದಿಲ್ಲ.

ಇದಿಷ್ಟೇ ಅಲ್ಲದೇ ಈ ಸ್ಮಾರ್ಟ್​​ಫೋನ್ ಮೇಲೆ ಬ್ಯಾಂಕ್ ಕೊಡುಗೆಗಳೂ ಇವೆ. ಬ್ಯಾಂಕ್ ಆಫ್ ಬರೋಡಾ ಮತ್ತು ಐಸಿಐಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಈ ಸ್ಮಾರ್ಟ್​ಫೋನ್ ಅನ್ನು ಖರೀದಿಸಿದರೆ ಹೆಚ್ಚುವರಿ 10 ಶೇಕಡಾ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಗೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. ನೀವು ಹೆಚ್​ಡಿಎಫ್​​ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ ರೂ.1,000 ರಿಯಾಯಿತಿ ಪಡೆಯಬಹುದು. ಇನ್ನು ಈ ಸ್ಮಾರ್ಟ್​ಫೋನ್​ನಲ್ಲಿ ಇಎಮ್​​ಐ ಆಯ್ಕೆಯು ರೂ.1,026 ದಿಂದ ಪ್ರಾರಂಭವಾಗುತ್ತದೆ.

Leave A Reply

Your email address will not be published.