ಹಿರಿಯ ನಾಗರಿಕರು, NSC, MIS ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ

ಸಣ್ಣ ಉಳಿತಾಯ ಖಾತೆದಾರರಿಗೆ ಹಣಕಾಸು ಸಚಿವಾಲಯವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.

ಸಣ್ಣ ಉಳಿತಾಯ ಯೋಜನೆ ಅಕ್ಟೋಬರ್- ಡಿಸೆಂಬರ್ ಬಡ್ಡಿದರ ಜನವರಿ-ಮಾರ್ಚ್ ಬಡ್ಡಿ ದರ

ಉಳಿತಾಯ ಠೇವಣಿ 4.0% 4.0%
ಒಂದು ವರ್ಷದ ಠೇವಣಿ 5.5% 6.6%
ಎರಡು ವರ್ಷದ ಠೇವಣಿ 5.7% 6.8%
ಮೂರು ವರ್ಷದ ಠೇವಣಿ 5.8% 6.9%
ಐದು ವರ್ಷಗಳ ಠೇವಣಿ 6.7% 7.0%
5 ವರ್ಷ RD 5.8% 5.8%
ಹಿರಿಯ ನಾಗರಿಕರ ಯೋಜನೆ 7.6% 8.0%
ಮಾಸಿಕ ಆದಾಯ ಖಾತೆ 6.7% 7.1%
NSC 6.8% 7.0%
PPF 7.1% 7.1%
ಕಿಸಾನ್ ವಿಕಾಸ್ ಪತ್ರ 7.0%(123 ತಿಂಗಳು) 7.2%
ಸುಕನ್ಯಾ ಸಮೃದ್ಧಿ 7.6% 7.6%

ಅಂದ ಹಾಗೆ ಸತತ ಎರಡನೇ ತ್ರೈಮಾಸಿಕ ಹೆಚ್ಚಳವಾಗಿದೆ. ವಿವಿಧ ಠೇವಣಿಗಳ ಮೇಲಿನ ದರಗಳನ್ನು 20 ರಿಂದ 110 ಬೇಸಿಸ್ ಪಾಯಿಂಟ್ ಗಳ ನಡುವೆ ಹೆಚ್ಚಿಸಲಾಗಿದೆ ಮತ್ತು ಈಗ 4.0 ಪ್ರತಿಶತದಿಂದ 7.6 ಪ್ರತಿಶತದವರೆಗೆ ಬಡ್ಡಿ ದರ ಇದೆ.

Leave A Reply

Your email address will not be published.