ಗಮನಿಸಿ | ಸೆಕೆಂಡ್ ಹ್ಯಾಂಡ್ ಕಾರು ಮಾರಾಟ, ಖರೀದಿ ನಿಯಮದಲ್ಲಿ ಪ್ರಮುಖ ಬದಲಾವಣೆ!

ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದರು. ಇದೀಗ, ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಹಾಗೂ ಖರೀದಿ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.

 

ಬಳಸಿದ ಕಾರನ್ನು ಖರೀದಿಸಲು ಬಯಸುವವರು ಗಮನಿಸಬೇಕಾದ ಸಂಗತಿ. ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ನಿಯಮಗಳನ್ನು ಸರ್ಕಾರ ಬದಲಾವಣೆ ಮಾಡಲಾಗಿದೆ. ಈಗ ಹೊಸ ನಿಯಮಗಳಲ್ಲಿ ಮುಂದಿನ ಅವಧಿಯಲ್ಲಿ ಉಪಯೋಗಿಸಿದ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಇಬ್ಬರಿಗೂ ಕೂಡ ಕೆಲವು ನಿಬಂಧನೆಗಳನ್ನು ತರಲಾಗಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳನ್ನು ಮಾರಾಟ ಮಾಡುವ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ವಿತರಕರ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಎಲೆಕ್ಟ್ರಾನಿಕ್ ವಾಹನ ಟ್ರಿಪ್ ನೋಂದಣಿ ಕಡ್ಡಾಯವಾಗಿದ್ದು, ಈ ಹಂತದಲ್ಲಿ,ಕಾರನ್ನು ಎಷ್ಟು ಕಿಲೋಮೀಟರ್ ಓಡಾಟ ನಡೆಸಲಾಗಿದೆ ಜೊತೆಗೆ ಚಾಲಕನ ಮಾಹಿತಿ ಹೀಗೆ ವಾಹನದ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ. ಆದರೆ ಈ ನಡುವೆ ಕಾರು ಯಾರು ಬಳಕೆ ಮಾಡುತ್ತಿದ್ದಾರೆ ಎಂದು ಕಾರಿನ ಮಾಲೀಕರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ.

ಈ ಉದ್ದೇಶಕ್ಕಾಗಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಿಗೂ ತಿದ್ದುಪಡಿ ಮಾಡಿದೆ.ಕಾರು ಮಾರಾಟ ಮಾಡುವಾಗ ವಿತರಕರು ಖಾಲಿ ಸೇಲ್ ಲೆಟರ್‌ಗೆ ಸಹಿ ಮಾಡುತ್ತಾರೆ. ಈ ಬಳಿಕ ಕಾರನ್ನು ಮಾರಾಟ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಸಾರಿಗೆ ತಜ್ಞ ಗುರ್ಮತಿತ್ ಸಿಂಗ್ ತನೇಜಾ ಮಾಹಿತಿ ನೀಡಿದ್ದಾರೆ.

ಹೊಸ ನಿಯಮದ ಪ್ರಕಾರ, ಡೀಲರ್ ಮೊದಲು ತನ್ನ ಹೆಸರಿನಲ್ಲಿ ಕಾರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಅವನು ಅದನ್ನು ಮಾರಾಟ ಮಾಡಬಹುದಾಗಿದೆ. ಅಲ್ಲದೆ, ವಿತರಕರು RTO ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಹೊಸ ನಿಯಮದ ಅನುಸಾರ, ಡೀಲರ್ ಮೊದಲು ಕಾರನ್ನು ತನ್ನ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ವಾಹನಗಳನ್ನು ಮಾರಾಟ ಮಾಡಬಹುದು.

ಈ ಪರಿಸ್ಥಿತಿಯಲ್ಲಿ ಕಾರ್ ಮಾಲೀಕರ ಅನುಮೋದನೆಯ ಬಳಿಕ ಯಾವುದೇ ಹೊಣೆಗಾರಿಕೆ ಉಂಟಾಗದು. ವಿತರಕರು ಆ ಬಳಿಕ ನೋಂದಣಿ, ಫಿಟ್ನೆಸ್ ಪ್ರಮಾಣಪತ್ರ, NOC ಮತ್ತು ಸ್ವಾಧೀನದಲ್ಲಿರುವ ವಾಹನಗಳ ವರ್ಗಾವಣೆಗೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಆರ್‌ಟಿಒದಲ್ಲಿ ನೋಂದಾಯಿಸಿದ ವಿತರಕರು ಮಾತ್ರ ಕಾರುಗಳನ್ನು ಖರೀದಿ ಇಲ್ಲವೇ ಮಾರಾಟ ಮಾಡಬಹುದಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರು ಬಳಸಿದ ವಾಹನವನ್ನು ಖರೀದಿಸುವಾಗ ಯಾವುದೇ ಅಪರಾಧ ಇಲ್ಲವೇ ಹಗರಣ ಆಗದಂತೆ ತಪ್ಪಿಸಲು ನೆರವಾಗುತ್ತದೆ.ಕಾರು ಖರೀದಿಯ ವೇಳೆ, ನೋಂದಣಿ ವರ್ಗಾವಣೆ, ಕಾರು ಮಾಲೀಕರ ಮಾಹಿತಿ ಸೇರಿದಂತೆ ಮೂರನೇ ವ್ಯಕ್ತಿ ಹಾನಿಯಂತಹ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುವ ಅವಶ್ಯಕತೆ ಬರುವುದಿಲ್ಲ.

Leave A Reply

Your email address will not be published.