Home Business LIC Jeevan Pragati Policy : ರೂ.200 ದಿನವೊಂದಕ್ಕೆ ಉಳಿಸಿದರೆ 28 ಲಕ್ಷ ರೂ ಪಡೆಯಬಹುದು!...

LIC Jeevan Pragati Policy : ರೂ.200 ದಿನವೊಂದಕ್ಕೆ ಉಳಿಸಿದರೆ 28 ಲಕ್ಷ ರೂ ಪಡೆಯಬಹುದು! ಹೇಗಂತೀರಾ?

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಜೀವ ವಿಮಾ ನಿಗಮ ನಿಮ್ಮ ಭವಿಷ್ಯದ ಭರವಸೆ ಹೆಚ್ಚಿಸುತ್ತದೆ. ಮುಖ್ಯವಾಗಿ ಈ ಭಾರತೀಯ ಜೀವ ವಿಮಾ ನಿಗಮ ಪಾಲಿಸಿಯ ಯೋಜನೆಯು ವಿಮಾ ಸುರಕ್ಷತೆಯೊಂದಿಗೆ ಉಳಿಯತಾಯದ ಉದ್ದೇಶವನ್ನೂ ಒಳಗೊಂಡಿರುವ ಯೋಜನೆಯಾಗಿದೆ. ಯೋಜನೆಯು ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರದೆ, ಅಕಾಲಿಕ ಮರಣ ಹೊಂದಿದರೆ ಕುಟುಂಬದವರಿಗೆ ವಿಮೆ ನೀಡುವುದರ ಜತೆಗೆ ಹೂಡಿಕೆಯ ದುಪ್ಪಟ್ಟು ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಪ್ರಸ್ತುತ 2023ರಲ್ಲಿ ಹೂಡಿಕೆ ಮಾಡಬಹುದಾದ ಬೆಸ್ಟ್‌ ಎಲ್‌ಐಸಿ ಪಾಲಿಸಿಗಳು ಎಲ್‌ಐಸಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಪ್ರಗತಿ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ನಾವು ಹೂಡಿಕೆಯಲ್ಲಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ಹೌದು ನೀವು ಪ್ರತಿ ದಿನ 200 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 28 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗಲಿದೆ.

ಇದೀಗ ಎಲ್‌ಐಸಿಯ ಕಡಿಮೆ ಅವಧಿಯ ಪಾಲಿಸಿಗಳಲ್ಲಿ ಅಥವಾ ಯೋಜನೆಗಳಲ್ಲಿ ಎಲ್‌ಐಸಿ ಜೀವನ ಪ್ರಗತಿ ಯೋಜನೆ ಕೂಡಾ ಒಂದಾಗಿದೆ. ಈ ಪಾಲಿಸಿಯಲ್ಲಿ ನಾವು ಅತೀ ಉತ್ತಮ ಹಾಗೂ ಹೆಚ್ಚು ವಿಮೆ ಸುರಕ್ಷತೆಯನ್ನು ಪಡೆಯಲು ಸಾಧ್ಯವಾಗುವುದು ಮಾತ್ರವಲ್ಲ, ಮೆಚ್ಯೂರಿಟಿ ವೇಳೆ ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯಲು ಸಾಧ್ಯವಾಗಲಿದೆ. ನಾವು ಕೆಲವೇ ವರ್ಷಗಳಲ್ಲಿ ಈ ಪಾಲಿಸಿಯಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಎಲ್‌ಐಸಿ ಜೀವನ ಪ್ರಗತಿ ಭಿಮಾ ಯೋಜನೆಯಲ್ಲಿ ನೀವು 12ರಿಂದ 20 ವರ್ಷದ ಅವಧಿಯ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಪ್ರತಿ ದಿನ 200 ರೂಪಾಯಿ ಹೂಡಿಕೆಯನ್ನು ಮಾಡಿದರೆ, ಮಾಸಿಕವಾಗಿ ಆರು ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಅಂದರೆ ವಾರ್ಷಿಕವಾಗಿ 72 ಸಾವಿರ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಮೆಚ್ಯೂರಿಟಿ ಅವಧಿಯಲ್ಲಿ ನೀವು 20 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಯೋಜನೆ ಅಡಿಯಲ್ಲಿ ನಾವು 4 ಲಕ್ಷ ರೂಪಾಯಿ ವಿಮೆಯನ್ನು ಖರೀದಿ ಮಾಡಿದರೆ, ಐದು ವರ್ಷದಲ್ಲಿ ವಿಮಾ ಮೊತ್ತವು ಐದು ಲಕ್ಷ ರೂಪಾಯಿ ಆಗಲಿದೆ. 10ರಿಂದ 15 ವರ್ಷದಲ್ಲಿ ವಿಮಾ ಮೊತ್ತವು ಆರು ಲಕ್ಷ ರೂಪಾಯಿ ಆಗಲಿದೆ. 20 ವರ್ಷದಲ್ಲಿ ವಿಮಾ ಮೊತ್ತ 7 ಲಕ್ಷ ರೂಪಾಯಿ ಆಗಲಿದೆ. 12 ವರ್ಷದಿಂದ 45 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಮೊತ್ತ 1.5 ಲಕ್ಷ ರೂಪಾಯಿ ಆಗಿದೆ.

ಈ ಯೋಜನೆಯು ಉತ್ತಮ ರಿಟರ್ನ್ ನೀಡುವುದು ಮಾತ್ರವಲ್ಲ ಜೀವನ ಸುರಕ್ಷ ಯೋಜನೆ ಕೂಡಾ ಹೌದಾಗಿದೆ. ವಿಮೆಯು ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತದೆ. ವಿಮಾದಾರರ ಮರಣದ ಬಳಿಕ ನಾಮಿನಿಗೆ ವಿಮಾ ಮೊತ್ತ ಲಭ್ಯವಾಗುತ್ತದೆ. ಈ ರೀತಿಯಾಗಿ ಉತ್ತಮ ಪ್ರಯೋಜನ ಪಡೆಯಬಹುದಾಗಿದೆ.