ಮದುವೆಯಾಗಿ 6 ವರ್ಷವಾದರೂ ‘ಸೆಕ್ಸ್’ ಮಾಡದ ಗಂಡ| ಹೆಂಡತಿ ತಗೊಂಡಳು ಈ ದಿಟ್ಟ ನಿರ್ಧಾರ!
ಎಷ್ಟೋ ಕನಸುಗಳನ್ನು ಕಟ್ಟಿಕೊಂಡು ಹೆಣ್ಣು ಗಂಡು ವಿವಾಹ ಎಂಬ ಸಂಬಂಧಗಳಿಗೆ ಒಳಗಾಗುತ್ತಾರೆ. ಆದರೆ ಕೆಲವರಿಗೆ ವಿವಾಹ ಆದ ನಂತರ ಯಾವ ರೀತಿ ಸಮಸ್ಯೆ ಎದುರಾಗುತ್ತದೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ಕಡೆ ಮದುವೆಯಾಗಿ ಆರು ವರ್ಷವಾದರೂ ಪತ್ನಿ ಬಳಿ ಸೇರದ ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾಳೆ.
ಈಗಾಗಲೇ ದಂಪತಿಗಳು 2016 ರಲ್ಲಿ ವಿವಾಹವಾಗಿದ್ದರು. ದಂಪತಿಗಳ ವಿವಾಹ ಸಂಬಂಧ ಎಲ್ಲಾ ನವವಿವಾಹಿತ ಜೋಡಿಗಳಂತೆ ಇರಲಿಲ್ಲ. ಪತ್ನಿ ಎಷ್ಟೇ ಪತಿಗೆ ಹತ್ತಿರವಾಗಬೇಕೆಂದು ಬಯಸಿದರೂ ಸಹ ಪತಿ ದೂರ ಹೋಗುತ್ತಲೇ ಇದ್ದ. ಸರಸ ಸಲ್ಲಾಪದಲ್ಲಿ ನಿರಾಸಕ್ತಿ ಹೊಂದಿದ್ದ ಪತಿಯ ಬಗ್ಗೆ ಪತ್ನಿಗೆ ತುಂಬಾ ಬೇಸರವಿತ್ತು. “ಮದುವೆಯಾದಗಿನಿಂದ 2017ರ ಜನವರಿವರೆಗೆ ತನ್ನ ಪತಿಯೊಂದಿಗೆ ಅನ್ಯೋನ್ಯತೆಯನ್ನು ಹೊಂದಲು ಹಲವಾರು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದೇನೆ. ಆದರೆ ಅವ್ಯಾವ ಪ್ರಯತ್ನಗಳು ಸಫಲವಾಗಿಲ್ಲ” ಎಂದು ಮಹಿಳೆ ಹೇಳಿದ್ದಾರೆ.
ನಾನು ಇಬ್ಬರೂ ಒಟ್ಟಿಗೆ ಸೇರುವ ಬಗ್ಗೆ ಏನಾದರೂ ಸುಳಿವು ನೀಡಿದ ದಿನ ಅವರು ಮನೆಗೆ ತಡವಾಗಿ ಬರುತ್ತಿದ್ದರು, ಮತ್ತೆ ಇದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟರು. ಈ ಬಗ್ಗೆ ನಾನು ಪ್ರಶ್ನಿಸಿದಾಗಲೆಲ್ಲಾ ಅವರ ಕೆಲಸದ ಒತ್ತಡದ ಬಗ್ಗೆ ನನ್ನ ಬಳಿ ಹೇಳುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ಗಂಡನ ವರ್ತನೆ ಬಗ್ಗೆ ತನ್ನ ಅತ್ತೆಯೊಂದಿಗೆ ಮಾತನಾಡಿದರೂ ಸಹ ಏನು ಪ್ರಯೋಜನವಾಗಲಿಲ್ಲ. ಮಾರ್ಚ್ 2017 ರಲ್ಲಿ ಗಂಡ ಮಲಗಿದ್ದಾಗ ಆತನ ಫೋನ್ ಚೆಕ್ ಮಾಡಿದಾಗ ಇತರ ಪುರುಷರೊಂದಿಗೆ ನಗ್ನವಾಗಿರುವ ಫೋಟೋಗಳು ಮತ್ತು ಅವರ ಜೊತೆ ಲೈಂಗಿಕ ಸಂಪರ್ಕವನ್ನು ಹೊಂದಿರುವುದು ತಿಳಿದು ಬಂತು. ಈ ಫೋಟೋಗಳನ್ನು ನೋಡಿ ನಾನು ಆಘಾತಕ್ಕೆ ಒಳಗಾದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಈ ಎಲ್ಲಾ ಘಟನೆಗಳಿಂದ ರೋಸಿ ಹೋದ ಮಹಿಳೆ ತನ್ನ ಸಲಿಂಗಕಾಮಿ ಪತಿ ಮತ್ತು ಅತ್ತೆ ವಿರುದ್ಧ 2018 ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು.
ನ್ಯಾಯಾಲಯವು ಎಲ್ಲಾ ಸಾಕ್ಷ್ಯವನ್ನು ಉಲ್ಲೇಖಿಸಿ, ಅರ್ಜಿದಾರರು ಪ್ರತಿವಾದಿ ಮೊಬೈಲ್‌ನಲ್ಲಿ ಕಂಡುಬಂದ ಫೋಟೋಗಳನ್ನು ಗಮನಿಸಲಾಗಿದೆ. ಫೋಟೋದಲ್ಲಿ ಪತಿ ಇತರ ಪುರುಷ ವ್ಯಕ್ತಿಗಳೊಂದಿಗೆ ನಗ್ನವಾಗಿರುವುದು ಕಂಡು ಬಂದಿದೆ. ಮತ್ತು ಮಹಿಳೆಯ ವಾದವನ್ನು ಸಮರ್ಥಿಸುವ ಸಲುವಾಗಿ, ಫೋಟೋಗಳ ಸ್ಕ್ರೀನ್ ಶಾಟ್‌ಗಳನ್ನು ರೆಕಾರ್ಡ್‌ನಲ್ಲಿ ದಾಖಲಿಸಲಾಗಿದೆ. ಪತಿಯ ಫೋನ್‌ನಲ್ಲಿ ಆ ರೀತಿಯ ಫೋಟೋಗಳನ್ನು ನೋಡಿದಾಗ ಸಹಜವಾಗಿಯೇ ಅರ್ಜಿದಾರರಿಗೆ ಸ್ವಾಭಾವಿಕವಾದ ಆಘಾತ, ಸಂಕಟ ಮತ್ತು ಭಾವನಾತ್ಮಕ ನಿಂದನೆ ಉಂಟಾಗಿರುವುದು ಸ್ಪಷ್ಟವಾಗಿದೆ ಎಂದು ಪೂರ್ತಿ ಪ್ರಕರಣವನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಈ ಮೇಲಿನ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ನವೆಂಬರ್ 2021ರಲ್ಲಿ, ಪರಿಹಾರ ನೀಡುವಂತೆ ಆದೇಶಿಸಿತ್ತು. ಈಗ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ನ್ಯಾಯಾಲಯ ಸಲಿಂಗಕಾಮಿ ಗಂಡನಿಂದ ಪತ್ನಿಗೆ 1 ಲಕ್ಷ ರೂಪಾಯಿ ಪರಿಹಾರ ಮತ್ತು ಮಾಸಿಕ 15,000 ರೂಪಾಯಿಗಳನ್ನು ನೀಡಬೇಕೆಂದು ಆದೇಶ ಹೊರಡಿಸಿದೆ.
ಒಟ್ಟಿನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಅಂತೂ ನ್ಯಾಯ ಸಿಕ್ಕಿದೆ. ಕೌಟುಂಬಿಕ ಹಿಂಸಾಚಾರ ಎಂದರೆ ಕೇವಲ ದೈಹಿಕವಾಗಿ ಹಿಂಸಿಸುವುದು ಅಥವಾ ನಿಂದನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಲೈಂಗಿಕ, ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ನಿಂದನೆಯನ್ನು ಸಹ ಒಳಗೊಂಡಿರುತ್ತದೆ ಎಂದು ಗಮನಿಸಿದ ಸೆಷನ್ಸ್ ನ್ಯಾಯಾಲಯವು ಸಲಿಂಗಕಾಮಿ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿಯ ಪರವಾಗಿ ತೀರ್ಪು ನೀಡಿದೆ.