Home News ಹಿರಿಯ ದಂಪತಿಯ ಭೀಕರ ಕೊಲೆ | ಈ ಕೃತ್ಯದ ಹಿಂದಿತ್ತು 12 ವರ್ಷದ ಅಪ್ರಾಪ್ತ ಬಾಲಕನ...

ಹಿರಿಯ ದಂಪತಿಯ ಭೀಕರ ಕೊಲೆ | ಈ ಕೃತ್ಯದ ಹಿಂದಿತ್ತು 12 ವರ್ಷದ ಅಪ್ರಾಪ್ತ ಬಾಲಕನ ಪ್ಲ್ಯಾನ್

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಘಟನೆಯ ಆರಂಭ ಮತ್ತು ಅಂತ್ಯ ವನ್ನು ಪರಾಮರ್ಶೆ ಮಾಡಿ ನೋಡಿದಾಗ ಭಯಾನಕ ಸತ್ಯ ಬೆಳಕಿಗೆ ಬಂದಾಗ ಆಶ್ಚರ್ಯ ಆಗುವುದು ಖಂಡಿತ ಹಾಗೆಯೇ ಇಲ್ಲೊಂದು ಭಯಾನಕ ಘಟನೆ ನಡೆದಿದೆ. ಅಪರಾಧ ಯಾವ ರೀತಿ ಹೇಗೆ ನಡೆಯುತ್ತವೆ. ಅದಲ್ಲದೆ ಮನುಷ್ಯ ಮನುಷ್ಯ ನನ್ನು ಕೇವಲ ತಮ್ಮ ಸ್ವಾರ್ಥ ಗಳಿಗಾಗಿ ಏನು ಬೇಕಾದರು ಮಾಡಲು ಸಿದ್ಧರಾಗುತ್ತಾರೆ.
ಹೌದು ಇಲ್ಲೊಂದು ಕಡೆ ಹಿರಿಯ ದಂಪತಿಯನ್ನು ಕೊಲೆಗೈದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಾಜಿಯಾಬಾದ್‌ ಪೊಲೀಸರು 12 ವರ್ಷದ ಅಪ್ರಾಪ್ತ ಬಾಲಕನನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ.

ಹೌದು ನವೆಂಬರ್ 22ರಂದು ಗುಜರಿ ವ್ಯಾಪಾರಿ ಇಬ್ರಾಹಿಂ ಹಾಗೂ ಅವರ ಪತ್ನಿ ಹಜ್ರಾ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಬ್ರಾಹಿಂ ಅವರ ದೇಹ ಮನೆಯಲ್ಲಿ ಪತ್ತೆಯಾಗಿತ್ತು. ಅವರ ಪತ್ನಿಯ ದೇಹ ಜಮೀನಿನ ಶೌಚಾಲಯದ ಬಳಿ ಪತ್ತೆಯಾಗಿತ್ತು.

12 ವರ್ಷದ ಬಾಲಕ ಹಿರಿಯ ದಂಪತಿಗೆ ಪರಿಚಯಸ್ಥನಾಗಿದ್ದ. ದಂಪತಿಗಳು ಗುಜರಿ ವ್ಯಾಪಾರ ಮಾಡಿಕೊಂಡು ಸಾಕಷ್ಟು ಹಣ ಉಳಿಸಿಕೊಂಡು ಇದ್ದಾರೆಂದು ಅರಿತ ಬಾಲಕ , ಈ ವಿಚಾರವನ್ನು ಇತರ ಮೂವರ ಬಳಿ ಹೇಳಿ ದರೋಡೆಗೆ ಯೋಜನೆ ಹಾಕಿಕೊಂಡಿದ್ದ. ನಂತರ ಬಾಲಕ ಸೇರಿ ಮೂವರು ದರೋಡೆಗೆ ಯತ್ನಿಸಿದ್ದಾರೆ. ದರೋಡೆಗೆ ಯತ್ನಿಸುವಾಗಲೇ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯವನ್ನು ಎಸೆದವರಲ್ಲಿ ಬಾಲಕ ಸೇರಿ ಮಂಜೇಶ್, ಶಿವಂರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಸಂದೀಪ್ ಪರಾರಿಯಾಗಿದ್ದಾನೆ. ಆರೋಪಿಗಳಿಂದ 12 ಸಾವಿರ ರೂ. ಒಂದು ಮೊಬೈಲ್‌ ಹಾಗೂ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಈ ಕೃತ್ಯದ ಹಿಂದೆ ಇದ್ದ 12 ವರ್ಷದ ಬಾಲಕನನ್ನು ವಿಚಾರಣೆ ನಡೆಸಿದ ಬಳಿಕ ಕೃತ್ಯದ ಹಿಂದಿನ ಕಾರಣ ಬಯಲಾಗಿದೆ.

ಈ ಕೃತ್ಯದ ಕುರಿತು ಇನ್ನು ಹೆಚ್ಚಿನ ಮಾಹಿತಿ ಉಳಿದ ಆರೋಪಿಗಳಿಂದ ತಿಳಿದು ಬರಬೇಕಿದೆ