Good News : ಪಿಂಚಣಿದಾರರೇ ನಿಮಗಿದೋ ಗುಡ್ ನ್ಯೂಸ್ | ಡಿಜಿಟಲ್ ಇ-ಜೀವಂತ ಪ್ರಮಾಣದ ಕುರಿತು ಇಲ್ಲಿದೆ ತುರ್ತು ಮಾಹಿತಿ
ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ.ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ನಿವೃತ್ತಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾರ್ಪಾಡು ಆದೇಶ ಹೊರಡಿಸಿದ್ದು ತಿಳಿದಿರುವ ವಿಚಾರ.
ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆಯ ನಡುವೆ ಆಗಿರುವ ಒಪ್ಪಂದದ ಅನುಸಾರ ಜೀವಂತ ಪ್ರಮಾಣ ಪತ್ರವನ್ನು ‘ಇ ವಿದ್ಯುನ್ಮಾನ’ ಆಡಳಿತ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ‘ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಸೇವೆ’ ಒದಗಿಸಲು ಕ್ರಮವಹಿಸಲಾಗಿರುವ ಕುರಿತು ಖಜಾನೆ ಇಲಾಖೆ ಅಪರ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮಿ ಯವರು ಮಾಹಿತಿ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.
ಈ ವೇಳೆ, ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪ್ರಮಾಣಿಕರಿಸಿ ನೀಡಲಾಗುವ ‘ಜೀವಂತ ಪ್ರಮಾಣ ಪತ್ರ’ ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳ ವಿಧಾನಗಳನ್ನು ಅನುಸರಿಸಿ ಈ ಪ್ರಯೋಜನ ಪಡೆಯಲು ಸುಲಭವಾಗಿ ವ್ಯವಹಾರವನ್ನು ನಡೆಸಲು ನೆರವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.
ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆಯ ನಡುವೆ ನಡೆದಿರುವ ಒಪ್ಪಂದದ ಅನುಸಾರ ಜೀವಂತ ಪ್ರಮಾಣ ಪತ್ರವನ್ನು ‘ಇ ವಿದ್ಯುನ್ಮಾನ’ ಆಡಳಿತ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ‘ಪಿಂಚಣಿದಾರ ಮನೆ ಬಾಗಿಲಿಗೆ ಸೇವೆ’ ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪಿಂಚಣಿದಾರರ ಮನೆ ಬಾಗಿಲಿಗೆ ಬಂದು, ಬಯೋಮೆಟ್ರಿಕ್ ಉಪಕರಣದ ಮೂಲಕ ವಿವರಗಳನ್ನು ಪಡೆದುಕೊಂಡು, ಇ-ಜೀವಂತ ಪ್ರಮಾಣ ಪತ್ರವನ್ನು ಗ್ರಾಮೀಣ ಅಂಚೆ ಸೇವಕರು ನೀಡುತ್ತಾರೆ. ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಯಾವುದೇ ಕಚೇರಿಗಳಿಗೆ ಭೇಟಿ ನೀಡಿ ಅಲೆದಾಡುವ ತಾಪತ್ರಯ ತಪ್ಪಿಸಲು ಸರಳ ವಿಧಾನಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗಿದೆ.
ಪಿಂಚಣಿಯನ್ನು ಪಾವತಿಸುವ ಬ್ಯಾಂಕು ಶಾಖೆಗಳಿಗೆ ವಿದ್ಯುನ್ಮಾನ ತಂತ್ರಾಂಶದ ಮೂಲಕ ನೇರವಾಗಿ ತಮ್ಮ ಜೀವಂತ ಪ್ರಮಾಣ ಪತ್ರಗಳನ್ನು ರವಾನೆ ಮಾಡಬಹುದಾಗಿದೆ. ಪಿಂಚಣಿದಾರರಿಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುವ ಸಲುವಾಗಿ ಹತ್ತಿರದ ಅಂಚೆ ಕಛೇರಿ ಇಲ್ಲವೇ ಪೋಸ್ಟ್‌ಮ್ಯಾನ್ ಅವರನ್ನು ಸಂಪರ್ಕಿಸಬಹುದಾಗಿದೆ.
ಪಿಂಚಣಿಯನ್ನು ಪಾವತಿಸುವ ನಾಲ್ಕು ಪ್ರಮುಖ ಬ್ಯಾಂಕುಗಳಾದ (Central Pension Processing Centres), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕುಗಳಲ್ಲಿ ಲಭ್ಯವಿರುವ ತಂತ್ರಾಂಶಗಳ ಮೂಲಕ ನೇರವಾಗಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸುವ ಸೌಲಭ್ಯ ದೊರೆಯಲಿದೆ.
ಕಂಪ್ಯೂಟರ್ ತಂತ್ರಾಂಶ ಹಾಗೂ ಮೊಬೈಲ್ ಬಳಕೆ ಮಾಡಲು ಸಾಧ್ಯವಿಲ್ಲದ ಸಾಮಾನ್ಯ ಪಿಂಚಣಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ಅಂಚೆ ಕಚೇರಿಯ ಮೂಲಕ ಜೀವಂತ ಪ್ರಮಾಣಪತ್ರವನ್ನು ಒದಗಿಸಲು ಸರ್ಕಾರ ಮನೆ ಬಾಗಿಲಿಗೆ ಸೇವೆಯನ್ನು ನೀಡಲು ಮುಂದಾಗಿದೆ.
ಈ ಪಿಂಚಣಿ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ Ford Hood, :080-22215073/22132031 ಸಂಪರ್ಕಿಸಬಹುದು. ಅಥವಾ ಅಂಚೆ ಕಚೇರಿಯ ದೂರವಾಣಿ ಸಂಖ್ಯೆ : 080-25597799 ಸಂಪರ್ಕಿಸಬಹುದಾಗಿದ್ದು, ಇಲ್ಲವೇ, ಇ-ಮೇಲ್ : adsppmt@karnataka.gov.in ಇದರ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಈ ಪ್ರಯೋಜನ ಪಡೆಯಲು ತಮ್ಮ ಹೆಸರು, ಪಿಪಿಓ ಸಂಖ್ಯೆ, ಬ್ಯಾಂಕು ಖಾತೆಯ ವಿವರ, ವಿಳಾಸ, ಪಿನ್ ಕೋಡ್ ಆಧಾರ್ ಸಂಖ್ಯೆ, ಮೊಬೈಲು ಸಂಖ್ಯೆಯ ವಿವರಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ನೀಡಬೇಕಾಗಿದೆ.
ಜೀವನ್ ಪ್ರಮಾಣ್ ಪೋರ್ಟಲ್ ಮುಖಾಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್’ ತಂತ್ರಾಂಶದಲ್ಲಿ ಮೇಲೆ ತಿಳಿಸಿದ ವಿವರಗಳನ್ನು ನೀಡಿದ ಬಳಿಕ ಕಾಗದ ರಹಿತ ಟಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ತಯಾರಿಸಲಾಗುತ್ತದೆ.
ಇ-ಜೀವನ್ ಪ್ರಮಾಣ ಐಡಿಯನ್ನು ಪಿಂಚಣಿದಾರರಿಗೆ ಎಸ್.ಎಮ್.ಎಸ್. ಮೂಲಕ ರವಾನೆ ಮಾಡಲಾಗುತ್ತದೆ. ಈ ಅಧಿಕೃತ ಸಂಖ್ಯೆಯ ಸಹಾಯದ ಮೂಲಕ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಪಿಂಚಣಿದಾರರು ಈ ಸೇವೆಯನ್ನು ಪಡೆಯಲು ನಿಗದಿತ 70 ರೂ.ಶುಲ್ಕ ಪಾವತಿಸಬೇಕಾದ ಅವಶ್ಯಕತೆ ಇದ್ದು, ಈ ಪ್ರಕ್ರಿಯೆ ಪ್ರತಿವರ್ಷದ ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ದಾಖಲೀಕರಣ ಪ್ರಕ್ರಿಯೆ ನಡೆಯುತ್ತದೆ.