ವೈದ್ಯರ ಚೀಟಿ ಇಲ್ಲದೆ ಔಷಧ ವಿತರಿಸುವಂತಿಲ್ಲ | ತಪ್ಪಿದರೆ ಪರವಾನಗಿ ರದ್ದು

ವೈದ್ಯರ ಚೀಟಿ ಇಲ್ಲದೇ ಔಷಧ ವಿತರಿಸುವ ರೀಟೆಲ್‌ ಔಷಧ ವ್ಯಾಪಾರಿಗಳ ಪರವಾನಗಿ ರದ್ದುಪಡಿಸಲು ಕೇರಳ ಸರ್ಕಾರವು ನಿರ್ಧರಿಸಿದೆ.

ರಾಜ್ಯದಲ್ಲಿ ವೈದ್ಯರ ಚೀಟಿ ಇಲ್ಲದೆ ಆ್ಯಂಟಿಬಯೋಟಿಕ್‌ಗಳನ್ನು ಮಾರಾಟ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತಿರುವನಂತಪುರದಲ್ಲಿ ನಡೆದ ಕೇರಳ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಟ್ರಾಟೆಜಿಕ್ ಆಕ್ಷನ್ ಪ್ಲಾನ್ (KARSAP) ವಾರ್ಷಿಕ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆ್ಯಂಟಿ ಮೈಕ್ರೋಬಿಯಲ್‌ (ಸೂಕ್ಷ್ಮಜೀವಿಗಳ ನಿಗ್ರಹ) ಔಷಧಗಳ ಅತಿಯಾದ ಬಳಕೆ ಮತ್ತು ದುರ್ಬಳಕೆ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮಾನವನ ಆರೋಗ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲಿ ಪಶುಸಂಗೋಪನೆ, ಜಲಚರ ಸಾಕಣೆ, ಮೀನುಗಾರಿಕೆ ಮತ್ತು ಪರಿಸರ ವಲಯದಲ್ಲೂ ಎಎಂಆರ್ ಹೆಚ್ಚಾಗುತ್ತಿರುವುದು ಆ್ಯಂಟಿಬಯೋಟಿಕ್‌ಗಳ ವಿವೇಚನಾ ರಹಿತ ಬಳಕೆಯ ಸ್ಪಷ್ಟ ಸೂಚನೆಯಾಗಿದೆ. ಈ ಹಿನ್ನಲೆ ,ರಾಜ್ಯದಲ್ಲಿ ಆ್ಯಂಟಿಬಯೋಟಿಕ್ ಸಾಕ್ಷರತೆಯನ್ನು ಉತ್ತೇಜಿಸಲು ಕೇರಳವು ಈಗಾಗಲೇ ಅಭಿಯಾನವನ್ನು ಪ್ರಾರಂಭಿಸಿದೆ.

ರಾಜ್ಯದಲ್ಲಿ ಆಂಟಿ ಮೈಕ್ರೊಬಿಯಲ್‌ ರೆಸಿಸ್ಟೆನ್ಸ್‌(ಎಎಂಆರ್‌) ಚಟುವಟಿಕೆಗಳನ್ನು ಬಲಪಡಿಸುವ ಭಾಗವಾಗಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಂಟಿಬಯೋಟಿಕ್‌ ಸ್ಮಾರ್ಟ್‌ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮಾಡಲು ಕೇರಳ ಸರ್ಕಾರವು ಇದೇ ವೇಳೆ ಹಲವು ಕ್ರಮಗಳನ್ನು ಘೋಷಿಸಿದೆ. ಎಎಂಆರ್‌ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‌ಒ) ಕೂಡ ಆತಂಕ ವ್ಯಕ್ತಪಡಿಸಿದೆ.

Leave A Reply

Your email address will not be published.