ಒಂದು ಕರೆ ಮಾಡಬೇಕು ಎಂದಾಗ ಫೋನ್ ಕೊಡ್ತೀರಾ? ಅಕೌಂಟ್ ಫುಲ್ ಖಾಲಿ ಮಾಡ್ತಾರೆ!!!
ದೇಶದಲ್ಲಿ ಈಗಾಗಲೇ ಸೈಬರ್ ಕ್ರೈಮ್’ಗಳಂತಹ ಹಗರಣಗಳು ಹೆಚ್ಚುತ್ತಲೇ ಇದೆ. ಈ ನಡುವೆ ಮತ್ತೊಂದು ಹೊಸ ಹಗರಣ ಬೆಳಕಿಗೆ ಬಂದಿದೆ. ಈ ಕ್ರೈಮ್ ನಲ್ಲಿ ಕಿರಾತಕರು ನಮ್ಮ ಬಳಿ “ನಾನೊಂದು ತುರ್ತು ಕರೆ ಮಾಡಬೇಕಾಗಿದೆ ನಿಮ್ಮ ಫೋನ್ ಬಳಸಬಹುದೆ? ಎಂದು ಕೇಳಿ ಫೋನ್ಗಳನ್ನು ಪಡೆಯುತ್ತಾರೆ. ಇಂತಹ ಸಂಧರ್ಭಗಳಲ್ಲಿ ನಿಮ್ಮ ಫೋನ್ ಅನ್ನು ನೀವು ನೀಡಿದರೆ, ಅಷ್ಟೇ ಆಮೇಲೆ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲಾ ಒಂದೇ ಒಂದು ಫೋನ್ ಕಾಲ್ ಮಾಡಿ, ಗುಳುಂ ಮಾಡಿ ಬಿಡುತ್ತಾರೆ. ಹಾಗಾಗಿ ಈ ಹೊಸ ಸೈಬರ್ ಕ್ರೈಮ್ ಹೇಗೆ ಕಾರ್ಯನಿರ್ವಹಿಸುತ್ತದೆ? ಅದನ್ನು ಹೇಗೆ ಗುರುತಿಸುವುದು? ಎಂಬ ಮಾಹಿತಿ ಇಲ್ಲಿದೆ.
ಕರೆ ಮಾಡಿದ ನಂತರ ನಿಮಗೆ ತಿಳಿಯದೆ ನಿಮ್ಮ ನಕಲಿ ಸಿಮ್ ಪಡೆಯುತ್ತಾರೆ. ಅಂದರೆ ನೀವು ಸ್ವೀಕರಿಸುತ್ತಿರುವ ಕರೆಗಳು ಮತ್ತು SMS ಗಳ ಸಂಖ್ಯೆಯಲ್ಲಿ ತೀವ್ರವಾದ ಬದಲಾವಣೆಯಾಗಿರುತ್ತದೆ. ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರು ನಿಯಮಿತವಾಗಿ ನಿಮಗೆ ಕರೆ ಮಾಡುವಾಗ,ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಿಮ್ಮ ಸಂಖ್ಯೆಯನ್ನು ಹೊಸ ಸಿಮ್ ಗೆ ನಿಯೋಜಿಸಿದಾಗ ಸಂದೇಶ ಕಳುಹಿಸುವುದು ಮತ್ತು ಕರೆ ಮಾಡುವುದು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಬಹುದು.
ವಂಚಕರು ಜನರ ಉತ್ತಮ ಸ್ವಭಾವವನ್ನೇ ಬಂಡವಾಳವನ್ನಾಗಿರಿಸಿಕೊಂಡು ಈ ಹೊಸ ಕಾಲ್ ಸ್ಕ್ಯಾಮ್ ಅನ್ನು ರಚಿಸಿದ್ದಾರೆ. ಇದರಲ್ಲಿ, ಸ್ಪ್ಯಾಮರ್ಗಳು ತುರ್ತಾಗಿ ಕರೆ ಮಾಡಬೇಕು ಒಮ್ಮೆ ನಿಮ್ಮ ಫೋನ್ ಸಂಖ್ಯೆಯನ್ನು ನನಗೆ ಕೊಡಬಹುದೆ? ಎಂದು ಅವರು ಕೇಳುತ್ತಾರೆ. ನೀವು ಫೋನ್ ಕೊಟ್ಟರೆ ಅವರು ತಕ್ಷಣ * 21 * ಅಥವಾ * 401 * ಗೆ ಕರೆ ಮಾಡುತ್ತಾರೆ. ಅಷ್ಟೆ, ಇಲ್ಲಿಂದ ನಿಮ್ಮ ಫೋನ್ ಕರೆಗಳು ಮತ್ತು ಸಂದೇಶಗಳು ಅವರ ಸಂಖ್ಯೆಗೆ ಫಾರ್ವಡ್ ಆಗುತ್ತವೆ.
ನಿಮ್ಮ ಫೋನ್ ಸಂದೇಶಗಳು ಮತ್ತು ಕರೆಗಳನ್ನು ಫಾರ್ವಡ್ ಮಾಡಿದರೆ ನಿಮ್ಮ ಪ್ರಮುಖ ಸಂದೇಶಗಳು (OTP ನಂತಹ) ಮತ್ತು ಕರೆ ವಿವರಗಳು ಸ್ಪ್ಯಾಮರ್ಗಳ ಕೈಗೆ ಬೀಳುತ್ತವೆ. ಶೀಘ್ರದಲ್ಲೇ ಅವರು ನಿಮ್ಮ ಮಾಹಿತಿಯೊಂದಿಗೆ ನಿಮ್ಮ ಪಾಕೆಟ್ ಅನ್ನು ಖಾಲಿ ಮಾಡುತ್ತಾರೆ.
ನಿಮಗೆ ತಿಳಿಯದೆ ಯಾರಾದರೂ ನಿಮ್ಮ ಫೋನ್ನಲ್ಲಿ ಕರೆ ಫಾರ್ವಡ್ ಮಾಡುವಿಕೆಯನ್ನು ಹೊಂದಿಸಿದ್ದಾರೆಯೇ ಎಂಬುದನ್ನು ನೀವು ಸುಲಭವಾಗಿ ಪತ್ತೆಹಚ್ಚಬಹುದು. ಇದಕ್ಕಾಗಿ ನಿಮ್ಮ ಫೋನ್ನಿಂದ *#62# ಅಥವಾ *#67# ಅನ್ನು ಡಯಲ್ ಮಾಡುವ ಮೂಲಕ ನಿಮ್ಮ ಫೋನ್ನಲ್ಲಿರುವ ಎಲ್ಲಾ ವಿವರಗಳನ್ನು ನೀವು ನೋಡಬಹುದು. ನಿಮ್ಮ ಫೋನ್ನಲ್ಲಿ ನೀವು ತಿಳಿಯದೆ ಕರೆ ಫಾರ್ವಡ್ ಮಾಡುವಿಕೆಯನ್ನು ಹೊಂದಿಸಿದ್ದರೆ, ನೀವು ಅದನ್ನು ಸುಲಭವಾಗಿ ತೆಗೆದುಹಾಕಬಹುದು. ಇದಕ್ಕಾಗಿ, ನಿಮ್ಮ ಫೋನ್ನಿಂದ *73 ಅನ್ನು ಡಯಲ್ ಮಾಡಿ ಅಥವಾ ನಿಮ್ಮ ಫೋನ್ ಸೆಟ್ಟಿಂಗ್ಗಳಲ್ಲಿ ‘ಕರೆ’ ಆಯ್ಕೆಗೆ ಹೋಗಿ, ಕರೆ ಫಾರ್ವಡ್ ಮಾಡುವಿಕೆಗೆ ಹೋಗಿ ಮತ್ತು ಕರೆ ಫಾರ್ವಡ್ ಮಾಡುವ ಆಯ್ಕೆಯನ್ನು ಆಫ್ ಮಾಡಬಹುದು.