ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್ ಬಳಿಯೇ ಐಡಿಯಾ ಕೇಳಿದ ವ್ಯಕ್ತಿ!

ಸಾವು ಮನುಷ್ಯನನ್ನು ಹುಡುಕಿಕೊಂಡು ಬರಬೇಕು ಎನ್ನುತ್ತಾರೆ ಆದ್ರೆ, ಇಲ್ಲೊಂದು ಕಡೆ ವ್ಯಕ್ತಿಯೋರ್ವ ಸಾವಿಗಾಗಿ ಗೂಗಲ್ ಮೂಲಕವೇ ಐಡಿಯಾ ಹುಡುಕಿಕೊಂಡು ತನ್ನ ಸಾವಿನ ಹಾದಿ ಹಿಡಿದಿದ್ದಾನೆ.

ಹೌದು. ಇಂತಹದೊಂದು ಘಟನೆ ಬೆಂಗಳೂರು ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದ್ದು, ಅರೆ ಸಾಯುವುದಕ್ಕೂ ಈ ರೀತಿ ಸಿದ್ಧತೆ ಮಾಡಿಕೊಳ್ಳುತ್ತಾರ ಅನ್ನೋ ಪರಿಸ್ಥಿತಿಗೆ ಅಂತಾ ಗೊತ್ತಾದರೆ ಎಂತವರೂ ಸಹ ಶಾಕ್ ಆಗೋದು ಖಂಡಿತ. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಟೆಕ್ಕಿ ವಿಜಯ್ ಕುಮಾರ್ ಎನ್ನುವವರೇ ಇಂತಹದೊಂದು ಆತ್ಮಹತ್ಯೆ ಮಾಡಿಕೊಂಡವರು.

ಹೃದಯದ ಸಮಸ್ಯೆಯಿಂದ ಆಪರೇಷನ್ ಕೂಡ ಮಾಡಿಸಿಕೊಂಡು ಆರೋಗ್ಯ ಸರಿಯಾಗದೆ ಉಸಿರಾಟದ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸೈಡ್ ಎಫೆಕ್ಟ್ ನಿಂದ ವಿಜಯ್ ಸಾಕಷ್ಟು ಬಳಲಿದ್ದರು. ಇದರಿಂದ ತೀವ್ರ ಖಿನ್ನತೆಗೆ ಒಳಗಾದ ವಿಜಯಕುಮಾರ್, ಆತ್ಮಹತ್ಯೆಯ ನಿರ್ಧಾರ ಮಾಡಿದ್ದ. ಆತ್ಮಹತ್ಯೆಗೂ‌ ಮುನ್ನ, ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಯಾವ ರೀತಿ ಆತ್ಮಹತ್ಯೆ ಮಾಡಿಕೊಂಡರೆ ನೋವಿಲ್ಲದೇ ಸಾಯಬಹುದು ಎಂದು ಗೂಗಲ್ ಸರ್ಚ್ ಮಾಡಿ ಕೊನೆಗೆ ನೈಟ್ರೋಜನ್ ಕೆಮಿಕಲ್ ಆಯ್ಕೆ ಮಾಡಿಕೊಂಡಿದ್ದ. ಈ ಕೆಮಿಕಲ್ ನಿಂದ ಬರುವ ಹೊಗೆ ದೇಹದ ಒಳಗೆ ಸೇರಿದ್ರೆ ಪ್ರಜ್ಞೆ ತಪ್ಪಿ ಸುಲಭವಾಗಿ ಸಾಯಬಹುದು ಎಂದು ತಿಳಿದುಕೊಂಡಿದ್ದ.

ಇದೇ ಸರಿಯಾದ ದಾರಿ ಅಂತಾ ವಿಜಯಕುಮಾರ್ ಮೊನ್ನೆ ಮಹಾಲಕ್ಷ್ಮಿ ಲೇಔಟ್ ಬಳಿ ಇರುವ ಪಾರ್ಕ್‌ ಬಳಿ ತನ್ನ ಕಾರು ತೆಗೆದುಕೊಂಡು ಬಂದು ನಿಲ್ಲಿಸಿದ್ದ. ನಂತರ ಅಲ್ಲೇ ಇದ್ದ ವ್ಯಕ್ತಿಯೊಬ್ಬರನ್ನು ತಡೆದು, ‘ನಂಗೆ ಸುಸ್ತಾಗಿದೆ, ಬಿಸಿಲು ಬೀಳದಂತೆ ಕಾರಿಗೆ ಕವರ್ ಮುಚ್ಚಿ’ ಎಂದು ಹೇಳಿದ್ದಾನೆ. ಸಂಪೂರ್ಣವಾಗಿ ಟಾರ್ಪಲ್ ನಿಂದ ಕವರ್ ಮಾಡಿಸಿದ್ದ ಕಾರಿನಲ್ಲಿದ್ದ ಟೆಕ್ಕಿ ಮೂರು ಕೆಜಿಯ ನೈಟ್ರೋಜನ್ ಸಿಲಿಂಡರ್ ಓಪನ್ ಮಾಡಿದ್ದಾನೆ. ನೈಟ್ರೋಜನ್ ಸೇವಿಸಿದ ಕೆಲ ಹೊತ್ತಿನಲ್ಲೇ ಆಸ್ಥಸ್ಥರಾಗಿ ಒದ್ದಾಡಿ ಮೃತಪಟ್ಟಿದ್ದಾನೆ.

ಇನ್ನೂ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟು ಯಾರು ಹತ್ತಿರ ಬರಬೇಡಿ. ಇದು ವಿಷದ ಗಾಳಿ ನಿ‌ಮಗೂ ಸಮಸ್ಯೆ ಆಗುತ್ತೆ, ಇದನ್ನು ಪೊಲೀಸರ ನುರಿತ ಟೀಂ ಓಪನ್ ಮಾಡಲಿ ಎಂದು ನೋಟ್ ಬರೆದು ಕಾರಿನ ಕ್ಲಾಸ್ ಗೆ ಅಂಟಿಸಿದ್ದ. ಸದ್ಯ ವಿಚಾರ ತಿಳಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಒಟ್ಟಾರೆ ಈತನ ವಿಭಿನ್ನ ಆತ್ಮಹತ್ಯೆ ನಿರ್ಧಾರವೇ ಎಲ್ಲರನ್ನೂ ದಂಗಾಗಿಸಿದೆ.

Leave A Reply

Your email address will not be published.