ರೈತರೇ ಗಮನಿಸಿ : ಅಡಿಕೆ ಎಲೆಚುಕ್ಕಿ ರೋಗ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿದರು ಮಹತ್ವದ ಮಾಹಿತಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ಅಡಿಕೆ ಬಿಟ್ಟು ಇತರೆ ಉಪಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆ ತೆಗೆದುಕೊಂಡಿರೋ ಕ್ರಮ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಚರ್ಚೆ ನಡೆಯಿತು.

ರೈತರು ಎದುರಿಸುವ ಈ ಸಮಸ್ಯೆ ಬಗ್ಗೆ ಅಂದರೆ ಈ ಎಲೆ ಚುಕ್ಕಿ ರೋಗಕ್ಕೆ ಸರ್ಕಾರದ ಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಪುತ್ತೂರು ಶಾಸಕ ಸಂಜೀವ್ ಮಠಂದೂರ್, ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲ. ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಬ್ಸಿಡಿ ಕೊಡುವ ಕೆಲಸ ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಂಚಾ ಯೋಜನೆ ಅಡಿ ಪರಿಶಿಷ್ಟ ಜಾತಿ ಪಂಗಡಕ್ಕೆ 90%, ಸಾಮಾನ್ಯರಿಗೆ 75% ಕೊಡಲಾಗ್ತಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಪ್ರಶ್ನೆ ಉದ್ಭವ ಆಗಿದೆ. ಗಾಳಿಯಲ್ಲಿ ಮಹಾಮಾರಿ ಹರಡುತ್ತಿದೆ. ಸಂಶೋಧನೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ ಎಂದು ಅರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ.

“ಹಲವು ವರ್ಷಗಳಿಂದ ಎಲೆಚುಕ್ಕೆ ರೋಗ ಇದೆ. ಒಂದು ಬಾರಿ ರೋಗ ಬಂದ್ರೆ ಇಡೀ ಮರವೇ ಹೋಗ್ತಿದೆ. ಒಂದು ತಲೆಮಾರು ಬೆಳೆಯೇ ಹೋಗ್ತಿದೆ. ಔಷಧೀಯೇ ಇಲ್ಲ” ಎಂದು ಶಾಸಕ ಎಂ.ಪಿ ಕುಮಾರಸ್ವಾಮಿಅಂತ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಉಪನಾಯಕ ಯು.ಟಿ ಖಾದರ್ ಪ್ರಶ್ನೆ ಮಾಡಿ, ಅಡಿಕೆ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಬೆಳೆ. ತಡ ಮಾಡದಂತೆ ಕೊಳೆ ರೋಗ ಬಂದಾಗ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ರೇವಣ್ಣ, ಬರೀ ಮೂರು ತಾಲೂಕು ಮಾತ್ರ ಅಡಿಕೆ ಬೆಳೆ ಮಾಡಲು ಸೇರಿಸಲಾಗಿದೆ. ನಮ್ಮ ತಾಲೂಕಿನಲ್ಲೂ ಅಡಿಕೆ ಬೆಳೀತಾರೆ. ನಮ್ಮ ತಾಲೂಕನ್ನೂ ನರೇಗಾಗೆ ಸೇರಿಸುವಂತೆ ಮನವಿ ಮಾಡಿದರು.

ಕೆಲವರ ಅಭಿಪ್ರಾಯದ ಪ್ರಕಾರ, ಅತಿಯಾದ ರಾಸಾಯನಿಕ ಬಳಕೆಯಿಂದ ರೋಗ ಉಲ್ಬಣ ಆಗುತ್ತದೆ ಎಂದು. ಈ ಸಮಸ್ಯೆ ಕುರಿತು ಹಲವು ವರ್ಷದಿಂದ ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದಕ್ಕೆ ಔಷಧಿ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳಿಗೆ ಆಗ್ತಿಲ್ವಾ? ತಾತ್ಕಾಲಿಕವಾಗಿ ತೇಪೆ ಹಾಕೋದು ಶಾಶ್ವತ ಪರಿಹಾರ ಆಗಲ್ಲ. ಈ ಸಮಸ್ಯೆಯನ್ನು ಬೇರು ಸಹಿತ ಕಿತ್ತು ಹಾಕಲು ಸರ್ಕಾರ ಮುಂದಾಗಬೇಕು. ಪರಿಹಾರ ಕೊಡೋದ್ರಿಂದ ಸಮಸ್ಯೆ ಬಗೆಹರಿಯಲ್ಲ ಶಾಸಕ ಸಿ.ಟಿ ರವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ಶಾಶ್ವತ ಪರಿಹಾರ ಅಂದ್ರೆ ಸಂಶೋಧನೆ ಆಗಬೇಕು. ಪರಿಹಾರ ಕೊಡುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚರ್ಚೆಯಾಗ್ತಿದೆ. ಸಂಶೋಧನಾ ಕೇಂದ್ರ ಶಿವಮೊಗ್ಗ, ಶೃಂಗೇರಿ, ಆಗ್ರಿಕಲ್ಚರ್ ವಿವಿಗೆ ನಾಲ್ಕು ಕೋಟಿ ಹಣ ಸಂಶೋಧನೆ ಮಾಡಲು ಬಿಡುಗಡೆ ಮಾಡ್ತಿದೆ. ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಮೊದಲ ಬಾರಿ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಅರಗ ಜ್ಞಾನೇಂದ್ರ ಹೇಳಿದರು.

Leave A Reply

Your email address will not be published.