Bathroom Vastu : ಬಾತ್ ರೂಂ ನ ಬಕೆಟ್ ನಲ್ಲಿಯೂ ಅಡಗಿದೆ ನಿಮ್ಮ ಅದೃಷ್ಟ
ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜ. ಹಾಗಾಗಿ ಮನೆಯ ನೆಗೆಟಿವ್ ವೈಬ್‌ಅನ್ನು ಹೋಗಲಾಡಿಸಲು ಕೆಲವೊಂದು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ನಿಮ್ಮ ಮನೆಯ ಬಾತ್ ರೂಂ ಅಂದರೆ ಸ್ನಾನಗೃಹದಿಂದ ನಕಾರಾತ್ಮಕತೆಯನ್ನು ಹೋಗಲಾಡಿಸಿ ಲಕ್ಷ್ಮಿ ನೆಲೆಸಲು ಕೆಲವು ಸಲಹೆ ಅನುಸರಿಸುವುದು ಸೂಕ್ತ.
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಬೇಕು. ಆರ್ಥಿಕ ಪ್ರಗತಿ ಆಗಬೇಕು ಎಂದು ಬಯಸುತ್ತಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ವಿಷಯ ತಿಳಿಯಲೇ ಬೇಕು.
ಸಾಮಾನ್ಯವಾಗಿ ಕೆಲವು ಮನೆಗಳಲ್ಲಿ ಬಕೆಟ್ ಅನ್ನು ಖಾಲಿಯಾಗಿಡುವ ಅಭ್ಯಾಸ ಇರುತ್ತದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿರುವ ಖಾಲಿ ಬಕೆಟ್ ನಕಾರಾತ್ಮಕತೆ ಜೊತೆಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಇಂದಿನಿಂದಲೇ ನಿಮ್ಮ ಮನೆಯ ಬಾತ್ ರೂಂನಲ್ಲಿ ಖಾಲಿ ಬಕೆಟ್ ಇಡುವುದನ್ನು ತಪ್ಪಿಸುವುದು ಸೂಕ್ತ.
ಹೌದು ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್ ರೂಂನಲ್ಲಿಟ್ಟ ಬಕೆಟ್ ಖಾಲಿ ಇದ್ದರೆ ಅದು ವ್ಯಕ್ತಿಯನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ತೊಳಲಾಡುವಂತೆ ಮಾಡುತ್ತದೆ. ಅಂತೆಯೇ ಸ್ನಾನಗೃಹದಲ್ಲಿರುವ ಬಕೆಟ್ ಖಾಲಿ ಇದ್ದರೆ ಅದನ್ನು ಅತ್ಯಂತ ಅಶುಭಕರ ಮತ್ತು ಇದು ವ್ಯಕ್ತಿಯನ್ನು ಬಡವನನ್ನಾಗಿಸುತ್ತದೆ ಎಂದೂ ಸಹ ಹೇಳಲಾಗುತ್ತದೆ. ಇದರೊಂದಿಗೆ ಸ್ನಾನ ಗೃಹದಲ್ಲಿ ಯಾವ ಬಣ್ಣದ ಬಕೆಟ್ ಇಡಬೇಕು ಎಂಬ ಬಗ್ಗೆಯೂ ವಾಸ್ತುವಿನಲ್ಲಿ ಸಲಹೆ ನೀಡಲಾಗಿದೆ.
ಸ್ನಾನಗೃಹ ದಲ್ಲಿ ಇರಿಸಬೇಕಾದ ಬಣ್ಣದ ಬಕೆಟ್ ಮತ್ತು ಕ್ರಮಗಳು :
- ವಾಸ್ತುಶಾಸ್ತ್ರದ ಪ್ರಕಾರ, ನೀಲಿ ಬಣ್ಣಕ್ಕೆ ಬಹಳ ಮಹತ್ವವಿದೆ. ವಾಸ್ತುವಿನಲ್ಲಿ ನೀಲಿ ಬಣ್ಣವನ್ನು ಅತ್ಯಂತ ಶುಭ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ, ಸ್ನಾನ ಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಮತ್ತು ಮಗ್ ಅನ್ನು ಇಡುವುದನ್ನು ಅತ್ಯಂತ ಮಂಗಳಕರ. ಇದು ಮನೆಯಲ್ಲಿ ಶಾಂತಿ, ಸುಖ-ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
- ಅದಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ, ಬಾತ್ ರೂಂನಲ್ಲಿ ನೀಲಿ ಬಣ್ಣದ ಬಕೆಟ್ ಅನ್ನು ಇಡುವುದರಿಂದ ಶನಿ ಮತ್ತು ರಾಹು ಗ್ರಹ ದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಆದರೆ, ಇದಕ್ಕಾಗಿ ಬಾತ್ ರೂಂ ಬಕೆಟ್ ನಲ್ಲಿ ಸದಾ ನೀರು ತುಂಬಿರಬೇಕು.
- ವಾಸ್ತುವಿನಲ್ಲಿ ಬಾತ್ ರೂಂನಲ್ಲಿ ಇಡಬೇಕಾದ ಬಕೆಟ್ ಬಗ್ಗೆ ಮಾತ್ರವಲ್ಲ, ಸ್ನಾನ ಗೃಹದ ಟೈಲ್ಸ್ ಬಗ್ಗೆಯೂ ತಿಳಿಸಲಾಗಿದೆ . ವಾಸ್ತು ಪ್ರಕಾರ, ಬಾತ್ ರೂಂನಲ್ಲಿ ನೀಲಿ ಬಣ್ಣದ ಟೈಲ್ಸ್ ಇದ್ದರೆ ಅದು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಮೇಲಿನಂತೆ ವಾಸ್ತು ಪ್ರಕಾರ ನೀವು ನಿಮ್ಮ ಬಾತ್ ರೂಮ್ ನಿಯಮ ಪಾಲಿಸಿದರೆ ನಕಾರಾತ್ಮಕತೆಯನ್ನು ಹೋಗಲಾಡಿಸಬಹುದಾಗಿದೆ.