ಫಿಫಾ ವಿಶ್ವಕಪ್’ ಪಂದ್ಯ ಸಮಯದಲ್ಲಿ ಪತ್ನಿಗೆ ಮೇಕಪ್ ಮಾಡಲು ಸಹಾಯ ಮಾಡಿದ ಪತಿ | ವೀಡಿಯೋ ನೋಡಿ

Share the Article

ಎಲ್ಲರೂ ತಮ್ಮ ಪತ್ನಿಯನ್ನು ಪ್ರೀತಿಸುವವರೆ, ಆದರೆ ಕೆಲವರು ತೋರ್ಪಡಿಸುತ್ತಾರೆ. ಇನ್ನೂ ಕೆಲವರು ಮನಸ್ಸಿನಲ್ಲಿ ಪ್ರೀತಿನ ಬಚ್ಚಿಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಪತ್ನಿಯ ಮೇಲಿರುವ ಪ್ರೀತಿನ ಆಕೆಗೆ ಮೇಕಪ್ ಮಾಡಲು ಸಹಾಯ ಮಾಡುವ ಮೂಲಕ ತೋರ್ಪಡಿಸಿ, ಸಖತ್ ವೈರಲ್ ಆಗಿದ್ದಾನೆ.

ಕತಾರ್‌ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯಾವಳಿಯು ಇಂದು ಕೊನೆಗೊಳ್ಳಲಿದೆ. ಸ್ಟೇಡಿಯಂಗೆ ಪಂದ್ಯವನ್ನು ವೀಕ್ಷಿಸಲು ಬಂದಿರುವ ಅಭಿಮಾನಿಗಳ ಕೆಲವು ಆಸಕ್ತಿದಾಯಕ ವೀಡಿಯೊಗಳು ಈ ವೇಳೆ ಸೆರೆಗೊಂಡಿದೆ.

ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿನ ಒಂದು ವಿಡಿಯೋದಲ್ಲಿ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿರುವ ಪತಿ ತನ್ನ ಪತ್ನಿಗೆ ಮೇಕ್‌ಅಪ್ ಮಾಡಿಕೊಳ್ಳಲು ಸಹಾಯ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇದೀಗ ಸಖತ್ ವೈರಲ್ ಆಗಿದೆ.

ಇನ್ನೂ, ಈ ವಿಡಿಯೋ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ‌ರ್ ನಲ್ಲಿ ಹಂಚಿಕೊಂಡಿದ್ದು, ನೀಲಿ ಜರ್ಸಿಯ ವ್ಯಕ್ತಿಯೊಬ್ಬರು ಅದೇ ಬಣ್ಣದ ಜರ್ಸಿಯನ್ನು ಧರಿಸಿರುವ ಪತ್ನಿಯ ಪಕ್ಕದಲ್ಲಿ ಕುಳಿತಿದ್ದಾರೆ. ಹಾಗೇ ಹೆಂಡತಿ ಮೇಕ್‌ಅಪ್ ಮಾಡುತ್ತಿರುವುದು ನೋಡಿದ ಪತಿ ಆಕೆಗೆ ಸಹಕಾರಿಯಾಗಿ, ಐ ಲೈನರ್ ಹಾಕಲು ತನ್ನ ಮೊಬೈಲ್ ಫೋನ್ ಅನ್ನು ಹಿಡಿದಿದ್ದಾರೆ. ಮೊಬೈಲ್ ನೋಡಿ ಪತ್ನಿ ಮೇಕಪ್ ಮಾಡಿಕೊಳ್ಳುತ್ತಿರುವ ದೃಶ್ಯ ಇಲ್ಲಿ ನೋಡಬಹುದಾಗಿದೆ. ಇನ್ನೂ, ಈ ವೀಡಿಯೊವನ್ನು ಗುಲ್ಜರ್ ಶಾಬ್ ಅವರು ಟ್ವಿಟರ್‌’ನಲ್ಲಿ ‘ವರ್ಷದ ಪತಿ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

https://twitter.com/Gulzar_sahab/status/1603605410539524097?s=20&t=rwT2iAHwNUIJ7sduxi7IEA

Leave A Reply