ಕ್ಲಾಸ್‌ಮೇಟ್‌ಗೆ ವಾಟ್ಸಪ್‌ ಮಾಡಿದ್ದಕ್ಕೆ ಬೈದ ಪೋಷಕರು | ಅಷ್ಟೇ ಆಮೇಲೆ ನಡೆದಿದ್ದು ದುರಂತ

ಇತ್ತೀಚಿನ ಆಧುನಿಕ ಯುಗದಲ್ಲಿ ಮಕ್ಕಳು ಹಾದಿ ತಪ್ಪಲು ನಾವೇ ಹೆತ್ತವರೇ ಕಾರಣ ಆಗಿರುತ್ತಾರೆ. ಯಾಕೆಂದರೆ ಆಚಾರ ವಿಚಾರ, ಶಿಸ್ತು ನಿಯಮ, ಸಂಸ್ಕಾರ, ಕಷ್ಟ ಸುಖ ಇವುಗಳಿಗೆ ವ್ಯತ್ಯಾಸ ತಿಳಿಯದಂತೆ ಮಕ್ಕಳನ್ನು ಬೆಳೆಸುವುದು ಹೆತ್ತವರದೇ ತಪ್ಪು ಎನ್ನಬಹುದು. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ.

ಸದ್ಯ ಕೇರಳದ ಇಡುಕ್ಕಿ ಜಿಲ್ಲೆಯ ಕನ್ನಂಪಾಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ 15 ವರ್ಷದ ವಿದ್ಯಾರ್ಥಿನಿ ಮನೆಯ ಸಮೀಪದ ಮರವೊಂದಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.

ಸದ್ಯ ಮೃತಳನ್ನು ದೇವು ಎಂದು ಗುರುತಿಸಲಾಗಿದೆ. ಈಕೆ ಕನ್ನಂಪಾಡಿ ನಿವಾಸಿ ಅಜು ಎಂಬುವರ ಮಗಳಾಗಿದ್ದು, ದೇವು 10ನೇ ತರಗತಿ ಓದುತ್ತಿದ್ದಳು . ತನ್ನ ಶಾಲಾ ಸಹಪಾಠಿ ಹುಡುಗನಿಗೆ ದೇವು ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಮಾಡುತ್ತಿರುವುದನ್ನು ಗಮನಿಸಿದ ಪಾಲಕರು, ಆಕೆಗೆ ಬೈದು ಬುದ್ಧಿ ಹೇಳಿದ್ದರು. ಇಷ್ಟಕ್ಕೆ ಮನನೊಂದುಕೊಂಡ ದೇವು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ.

ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಪೊಲೀಸ್ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.