Home latest ಆಟವಾಡುವಾಗ ನಾಡಬಂದೂಕು ಟ್ರಿಗರ್‌ ಪ್ರೆಸ್‌ | 7 ವರ್ಷದ ಬಾಲಕ ಸಾವು, ಇಬ್ಬರು ಅರೆಸ್ಟ್‌

ಆಟವಾಡುವಾಗ ನಾಡಬಂದೂಕು ಟ್ರಿಗರ್‌ ಪ್ರೆಸ್‌ | 7 ವರ್ಷದ ಬಾಲಕ ಸಾವು, ಇಬ್ಬರು ಅರೆಸ್ಟ್‌

Hindu neighbor gifts plot of land

Hindu neighbour gifts land to Muslim journalist

ನಾಡಬಂದೂಕಿನಿಂದ ಬಾಲಕನೊಬ್ಬನಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ ಘಟನೆಯು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಬಾಲಕ ಶಮಾ(7) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಯುಪಿ ಮೂಲದ ಅಮಿನುಲ್ಲಾ, ಸಮ್​ಸೂನ್​ ಕುಟುಂಬ ಮೂರು ದಿನದ ಹಿಂದಷ್ಟೆ ಕೂಲಿ ಕೆಲಸಕ್ಕೆ ಬಂದಿದ್ದು ಮಲ್ಲೇಶ ಎಂಬಾತನ ಜಮೀನಿನಲ್ಲಿ ಕೆಲಸಕ್ಕಿದ್ದರು. ತಂದೆ-ತಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಜಿದ್ ಹಾಗೂ ಶಮಾ ನಾಡಬಂದೂಕಿನೊಂದಿಗೆ ಆಟವಾಡಿದ್ದಾರೆ. ಈ ವೇಳೆ ತನ್ನ ಅರಿವಿಗೆ ಬರೆದೇ ಮೃತ ಶಮಾ ಸಹೋದರ ಸಾಜೀದ್(16) ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಶಮಾನಿಗೆ ತಗುಲಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗುಂಡು ಹಾರಿಸಿದ ಸಾಜೀದ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಬಂದೂಕು‌ ಇಟ್ಟಿದ್ದ ತೋಟದ ಮಾಲೀಕ ಮಲ್ಲೇಶ್​ನನ್ನೂ ಬಂಧಿಸಲಾಗಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.