SHOCKING NEWS | 2023 ರಲ್ಲಿ ಮತ್ತೆ ಶುರುವಾಗಲಿದೆ ಕೊರೋನ ಕಂಟಕ! | ಸಂಶೋಧನೆಯಲ್ಲಿ ಬಯಲಾಯ್ತು ಸಂಭವಿಸಲಿರುವ ಸಾವಿನ ಸಂಖ್ಯೆ

Share the Article

ಕೊರೋನ ಮಹಾಮಾರಿಯಿಂದ ಸ್ವಲ್ಪ ಬಿಡುವು ಸಿಕ್ಕಿತು ಎಂದು ಫ್ರೀ ಆಗಿ ಸುತ್ತಾಡುತ್ತಿದ್ದ ಜನತೆಗೆ ಮತ್ತೆ ಕೊರೋನ ಕಂಟಕ ಎದುರಾಗಲಿದೆ. ಹೌದು.2023 ರಲ್ಲಿ ಕೊರೋನ ಸೋಂಕಿಗೆ ತುತ್ತಾಗಿ ಅನೇಕ ಸಾವು-ನೋವುಗಳೇ ಸಂಭವಿಸಲಿದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಇಂತಹ ಒಂದು ದೊಡ್ಡ ಕಂಟಕ ಎದುರಾಗುತ್ತಿರುವುದು, ಕೊರೊನಾ ವೈರಸ್‌ ಮೂಲಕ ಇಡೀ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೀನಾದಲ್ಲಿ. ಹೌದು. ಅಮೆರಿಕದ ಸಂಶೋಧನೆಯೊಂದರ ಪ್ರಕಾರ 2023 ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಚೀನಾದಲ್ಲಿ, ಕೊರೋನಾ ಸಾಂಕ್ರಾಮಿಕದ ವಿನಾಶ ನಿಶ್ಚಿತವೆಂದು ಹೇಳಲಾಗ್ತಿದೆ.

ಚೀನಾದಲ್ಲಿ 2023ರವೇಳೆಗೆ ಈ ಸೋಂಕಿನಿಂದಲೇ 10 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಾರೆಂದು ಹೇಳಲಾಗ್ತಿದೆ. ಆ ಸಮಯದಲ್ಲಿ ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಕರೋನಾ ಸೋಂಕಿಗೆ ಒಳಗಾಗುತ್ತಾರೆ. ಇದರ ಪ್ರಕಾರ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚೀನಾದಲ್ಲಿ ಕೊರೊನಾ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಏರಲಿವೆ ಎಂದು ಅಂದಾಜಿಸಲಾಗಿದೆ.

ಕೊರೊನಾ ವಿಷಯದಲ್ಲಿ ಚೀನಾ ನಿರಂತರವಾಗಿ ಜಗತ್ತಿಗೆ ಸುಳ್ಳು ಹೇಳುತ್ತಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು COVID ನಿರ್ಬಂಧಗಳನ್ನು ತೆಗೆದು ಹಾಕಿದಾಗಿನಿಂದ ಯಾವುದೇ ಅಧಿಕೃತ ಕೊರೊನಾ ಸಾವು ವರದಿಯಾಗಿಲ್ಲ. ಚೀನಾದಲ್ಲಿ ಕೊನೆಯ ಅಧಿಕೃತ ಸಾವು ಡಿಸೆಂಬರ್ 3 ರಂದು ದಾಖಲಾಗಿದೆ. ಪ್ರಸ್ತುತ, ಚೀನಾದಲ್ಲಿ ಕರೋನಾದಿಂದ ಅಧಿಕೃತ ಸಾವಿನ ಸಂಖ್ಯೆ 5235 ಎಂದು ಹೇಳಲಾಗಿದೆ.

ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ & ಇವಾಲ್ಯುಯೇಷನ್ ​​ತನ್ನ ಇತ್ತೀಚೆಗೆ ಅಧ್ಯಯನವೊಂದರ ಪ್ರಕಾರ, ಚೀನಾದಲ್ಲಿ ಝೀರೋ ಕೋವಿಡ್ ನೀತಿಯನ್ನು ಇತ್ತೀಚೆಗೆ ಸಡಿಲಿಸಿದ ಬಳಿಕ ಕರೋನಾ ಪ್ರಕರಣಗಳು ವೇಗವಾಗಿ ಏರುತ್ತಿವೆ. ಸದ್ಯದಲ್ಲೇ ಕ್ರಿಸ್ಮಸ್‌ ಹಾಗೂ ಹೊಸ ವರ್ಷಾಚರಣೆ ಬರ್ತಿರೋದ್ರಿಂದ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ತಿಳಿಸಿದೆ.2023ರ ಏಪ್ರಿಲ್ 1ರ ಸುಮಾರಿಗೆ ಸೋಂಕಿತರ ಸಂಖ್ಯೆ ಉತ್ತುಂಗಕ್ಕೇರಲಿದ್ದು, ಸಾವಿನ ಸಂಖ್ಯೆ 3,22,000ರಷ್ಟಾಗುತ್ತದೆ.

Leave A Reply