ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ | ಅಡಿಕೆ ಬೆಲೆಯಲ್ಲಿ ಏರಿಕೆ!
ಅಡಿಕೆ ಬೆಳೆಗಾರರು ಈಗಾಗಲೆ ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗದಂತಹ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಹಾಗೇ ಈ ಹಿಂದೆ ಅಡಿಕೆ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು, ಬೆಳೆಗಾರರ ಜೇಬಿಗೆ ಕತ್ತರಿ ಹಾಕಿದಂತಾಗಿತ್ತು. ಆದರೆ ಇದೀಗ ಅವರಿಗೆ ಸಂತಸ ತರುವ ಸುದ್ದಿ ಇಲ್ಲಿದೆ. ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ತುಸು ಏರಿಕೆ ಕಂಡಿದ್ದು, ಬೆಳೆಗಾರರು ನಿಟ್ಟಸಿರುಬಿಡುವಂತಾಗಿದೆ.
ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಪ್ರತೀದಿನ ಅಡಿಕೆ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಹಾಗೇ ಇದೀಗ ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದ್ದು, ವರದಿ ಪ್ರಕಾರ, ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾದ್ಯತೆಗಳು ಇದೆ ಎನ್ನಲಾಗುತ್ತಿದೆ. ಇನ್ನೂ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.
ದಾವಣಗೆರೆ ಜಿಲ್ಲೆಯಲ್ಲಿ :
ಚನ್ನಗಿರಿ – ರಾಶಿ ಅಡಿಕೆಗೆ- 43,163 ರೂ.
ದಾವಣಗೆರೆ – ರಾಶಿ ಅಡಿಕೆಗೆ -44,699 ರೂ.
ಹೊನ್ನಾಳಿ -ರಾಶಿ ಅಡಿಕೆಗೆ -41,699 ರೂ.
ಚಿಕ್ಕಮಗಳೂರು :
ಕೊಪ್ಪ – ರಾಶಿ ಅಡಿಕೆಗೆ- 45,899 ರೂ.,
ತುಮಕೂರು :
ರಾಶಿ ಅಡಿಕೆಗೆ -46,800 ರೂ.
ಉತ್ತರ ಕನ್ನಡ :
ಸಿದ್ದಾಪುರ – ರಾಶಿ ಅಡಿಕೆಗೆ -42,959 ರೂ.
ಶಿರಸಿ – ರಾಶಿ ಅಡಿಕೆಗೆ -43,699 ರೂ.
ಯಲ್ಲಾಪುರ – ರಾಶಿ ಅಡಿಕೆಗೆ -50,379 ರೂ.
ದಕ್ಷಿಣ ಕನ್ನಡ :
ಬಂಟ್ವಾಳ – ಹಳೆದು -48,000 – 54,500ರೂ.
ಬಂಟ್ವಾಳ – ಕೋಕ ಅಡಿಕೆಗೆ -12,500 – 25,000 ರೂ.
ಮಂಗಳೂರು – ಹೊಸದು -30,500 -31,000 ರೂ.
ಪುತ್ತೂರು – ಕೋಕ -11,000 – 26,000ರೂ.
ಪುತ್ತೂರು – ಹೊಸದು -32,000 – 38,000ರೂ.
ಶಿವಮೊಗ್ಗ :
ಭದ್ರಾವತಿ -ರಾಶಿ ಅಡಿಕೆಗೆ -45,199 ರೂ.
ಹೊಸನಗರ – ರಾಶಿ ಅಡಿಕೆಗೆ -45,226 ರೂ.
ಸಾಗರ – ರಾಶಿ ಅಡಿಕೆಗೆ -41,199 ರೂ.
ಶಿಕಾರಿಪುರ – ರಾಶಿ ಅಡಿಕೆಗೆ -45,900 ರೂ.
ಶಿವಮೊಗ್ಗ – ರಾಶಿ ಅಡಿಕೆಗೆ -45,199 ರೂ.
ತೀರ್ಥಹಳ್ಳಿ – ರಾಶಿ ಅಡಿಕೆಗೆ -46,899 ರೂ.