ಎಕ್ಸ್ ಟ್ರಿಮ್ 200 ಎಸ್ ಬೈಕ್ ಬೆಲೆ ಹೆಚ್ಚಳ | ಹೀರೋ ಮೋಟೋಕಾರ್ಪ್ ಎಷ್ಟು ಹೆಚ್ಚಳ ಮಾಡಿದೆ ಗೊತ್ತಾ?

ದ್ವಿಚಕ್ರ ಪ್ರಿಯರೇ ಇಲ್ಲೊಂದು ಮಹತ್ವದ ಮಾಹಿತಿ ನಿಮಗಾಗಿ ನೀಡಲಾಗಿದೆ. ಹೌದು ಹೀರೋ ಮೋಟೋಕಾರ್ಪ್ ತಯಾರಾಕರು ತಮ್ಮ ಮೋಟಾರ್ ಸೈಕಲ್ ವಾಹನದ ಬೆಲೆಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಿದೆ. ಯಾಕೆಂದರೆ ಹಣದುಬ್ಬರದ ವೆಚ್ಚದಿಂದಾಗಿ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಬೆಲೆಗಳ ಪರಿಷ್ಕರಣೆ ಅಗತ್ಯವಾಗಿದೆ ಎಂದು ಈ ಮೇಲಿನ ನಿರ್ಧಾರ ಮಾಡಲಾಗಿದೆ. ಸದ್ಯ ಈ ಬೆಲೆ ಪರಿಷ್ಕರಣೆಯು ಹೀರೋ ಮೋಟೋಕಾರ್ಪ್ ಪ್ರೀಮಿಯಂ ಮಾದರಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

ಮುಖ್ಯವಾಗಿ ಬೆಲೆ ಏರಿಕೆಯು ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್ ಮೇಲೆಯು ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯ ಬಳಿಕ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಬೆಲೆಯು ಮುಂಬೈ ಎಕ್ಸ್ ಶೋರೂಂ ಪ್ರಕಾರ ರೂ.1,36,423 ಆಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಈ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್ ನಲ್ಲಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಲಾಗಿದೆ.

ಪ್ರಸ್ತುತ ಮಾದರಿಯನ್ನು ಹೀರೋ ಕಂಪನಿಯು ಎಕ್ಸ್‌ಟ್ರಿಮ್ 200ಎಸ್ ಬೈಕಿನಲ್ಲಿ ಹಲವಾರು ಹೊಸ ಫೀಚರ್ ಗಳು, ಹೆಚ್ಚುವರಿ ಉಪಕರಣಗಳು ಮತ್ತು ವಿನ್ಯಾಸದಲ್ಲಿ ಸ್ವಲ್ಪ ನವೀಕರಣಗಳನ್ನು ನಡೆಸಲಾಗಿದೆ. ಈ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕ್ ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಟೈಲ್ ಲೈಟ್ ಗಳು, ಹಿಂಭಾಗದ ಕೌಲ್ ವಿನ್ಯಾಸ, ಆಂಟಿ-ಸ್ಲಿಪ್ ಸೀಟುಗಳು ಮತ್ತು ಇತರ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು ಅಲ್ಲದೆ ಈ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್ ಮತ್ತು ಸರ್ವಿಸ್ ರಿಮೈಂಡರ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.

ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಫೀಚರ್ ಗಳ ಸುದೀರ್ಘ ಪಟ್ಟಿಯ ಜೊತೆಗೆ, ಈ ಎಕ್ಸ್‌ಟ್ರಿಮ್ 200ಎಸ್ ಬೈಕ್ ಸಹ ಹೊಚ್ಚ ಹೊಸ ಬಣ್ಣದ ಆಯ್ಕೆಯೊಂದಿಗೆ ಬರುತ್ತಿದೆ ಇದು ಪರ್ಲ್ ಫೇಡ್ಲೆಸ್ ವೈಟ್ ಎಂದು ಕರೆಯಲಾಗುತ್ತದೆ. ಇನ್ನು ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್‌ನ ಇತರ ಎರಡು ಸ್ಟ್ಯಾಂಡರ್ಡ್ ಆಯ್ಕೆಗಳೊಂದಿಗೆ ಈ ಹೊಸ ಬಣ್ಣದ ಆಯ್ಕೆಯು ಲಭ್ಯವಿರುತ್ತದೆ. ಈ ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಎಕ್ಸ್‌ಟ್ರಿಮ್ 200ಎಸ್ ಬೈಕಿನಲ್ಲಿ ಅದೇ 199 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಫ್ಯೂಯಲ್ -ಇಂಜೆಕ್ಟ್ ಎಂಜಿನ್‌ ಅನ್ನು ನವೀಕರಿಸಿ ಅದನ್ನು ಅಳವಡಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 17.8 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 16.4 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ ಹೀರೋ ಎಕ್ಸ್‌ಟ್ರಿಮ್ 200ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ.ಇನ್ನು ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 276 ಎಂಎಂ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಿದೆ.

ಮೋಟಾರ್‌ಸೈಕಲ್ ಸಿಂಗಲ್-ಪೀಸ್ ಸ್ಟೆಪ್-ಅಪ್ ಸೀಟ್, ಬಣ್ಣ-ಹೊಂದಾಣಿಕೆಯ ಮುಂಭಾಗದ ಫೆಂಡರ್ ಮತ್ತು ಸ್ಪ್ಲಿಟ್-ಸ್ಟೈಲ್ ಅಲಾಯ್ ವೀಲ್‌ಗಳನ್ನು ಸಹ ಬಳಸುತ್ತದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ ಒಂದು ದೊಡ್ಡ ನವೀಕರಣವೆಂದರೆ ಉಪಕರಣ ಇನ್ಸ್ ಟ್ರೂಮೆಂಟ್ ಗೇರ್ ಸ್ಥಾನ ಸೂಚಕವನ್ನು ಸೇರಿಸಿದೆ, ಇನ್ನೂ ಬ್ಲೂಟೂತ್ ಸಂಪರ್ಕವನ್ನು ಪಡೆಯುವುದಿಲ್ಲ. ಇಲ್ಲದಿದ್ದರೆ, ಕನ್ಸೋಲ್ ಹಿಂದಿನ ಆವೃತ್ತಿಯಂತೆ ಅದೇ ವಿನ್ಯಾಸ ಮತ್ತು ಸೆಟಪ್ ಅನ್ನು ಉಳಿಸಿಕೊಳ್ಳುತ್ತದೆ. ಈ ಬೈಕಿನ ಸಿಂಗಲ್ ಡಿಸ್ಕ್ ಮತ್ತು ಡ್ಯುಯಲ್ ಡಿಸ್ಕ್ ರೂಪಾಂತರಗಳು ಮೂರು ಬಣ್ಣಗಳಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.

ಇನ್ನು ಬೆಲೆ ಏರಿಕೆಯು ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಮೇಲೆಯು ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯ ಬಳಿಕ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಸಿಂಗಲ್ ಡಿಸ್ಕ್ ರೂಪಾಂತರದ ಬೆಲೆಯು ರೂ. 1,17,786 ಆಗಿದೆ. ಇನ್ನು ಡ್ಯುಯಲ್ ಡಿಸ್ಕ್ ರೂಪಾಂತರಕ್ಕೆ ರೂ. 1,21,430 ಮತ್ತು ಸ್ಟೆಲ್ತ್ ರೂಫಾಂತರ ಬೆಲೆ ರೂ. 1,23,245 ಆಗಿದೆ. ಈ ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಸಿಂಗಲ್-ಪಾಡ್ ಹೆಡ್‌ಲೈಟ್, ಮಸ್ಕಲರ್ ವಿನ್ಯಾಸ, ಸೈಡ್-ಸ್ಲಂಗ್ ಎಕ್ಸಾಸ್ಟ್ ಮತ್ತು ಅಲಾಯ್ ವ್ಹೀಲ್ ಗಳನ್ನು ಮುಂದುವರೆಸಿದೆ ಎನ್ನಲಾಗಿದೆ.

ಈ ಮೇಲಿನ ಕಾರಣ ಮತ್ತು ವಿಶೇಷತೆಯ ತಯಾರಿಕಾ ವೆಚ್ಚದ ಪರಿಣಾಮವಾಗಿ ಹೀರೋ ಮೋಟೋಕಾರ್ಪ್ ತಯಾರಾಕರು ತಮ್ಮ ಮೋಟಾರ್ ಸೈಕಲ್ ವಾಹನದ ಬೆಲೆಯನ್ನು ಪರಿಷ್ಕರಣೆ ಮಾಡಲು ನಿರ್ಧರಿಸಿವೆ ಎಂದು ಗ್ರಾಹಕರಿಗೆ ಭರವಸೆ ನೀಡಲಾಗಿದೆ.

Leave A Reply

Your email address will not be published.