ಕರ್ನಾಟಕದಲ್ಲಿ ಕೊರೋನಾದ ರಾಕ್ಷಸ ಕುಣಿತ | ಇಂದು ಒಟ್ಟು127 : ಮಂಡ್ಯವೊಂದರಲ್ಲೇ 61 !
ಇವತ್ತು ಕರ್ನಾಟಕ ರಾಜ್ಯದಲ್ಲಿ ಕೋರೋನಾ ಕುಣಿತ. ಇಂದು ಬೆಳಿಗ್ಗೆ ಬಿಡುಗಡೆಯಾದ ಕರ್ನಾಟಕ ದ ಹೆಲ್ತ್ ಬುಲೆಟಿನ್ ನಲ್ಲಿ 127 ಕೋರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿರುವಂತೆ ಆತಂಕ ಜಾಸ್ತಿಯಾಗುತ್ತಿದೆ.
ಈ ಮೂಲಕ ರಾಜ್ಯದಲ್ಲಿ ಕೋರೋನಾ ರೋಗಿಗಳ ಸಂಖ್ಯೆ 1373 ಗೆ ಏರಿದೆ.
ಇವತ್ತಿನ 127 ಸೋಂಕಿತರಲ್ಲಿ ದಕ್ಷಿಣಕನ್ನಡದ ಇಬ್ಬರು ಮತ್ತು ಉಡುಪಿಯ ನಾಲ್ಕು ಜನ ರೋಗಿಗಳು ಸೇರಿದ್ದಾರೆ.
ಮಂಡ್ಯ ಜಿಲ್ಲೆಯೊಂದರಲ್ಲೆ ಭಯ ಹುಟ್ಟಿಸುವ ಸಂಖ್ಯೆಯ 61 ಜನ ಸೋಂಕಿತ ಪತ್ತೆಯಾಗಿದ್ದಾರೆ.
ಇನ್ನುಳಿದಂತೆ ದಾವಣಗೆರೆ 19, ಶಿವಮೊಗ್ಗ 12, ಕಲಬುರ್ಗಿ 11 ರಷ್ಟು ದೊಡ್ಡ ಸಂಖ್ಯೆಯ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. ಇವತ್ತು ಪತ್ತೆಯಾದ ಬಹುಪಾಲು ಸೋಂಕಿತರು ಹೊರರಾಜ್ಯಗಳಿಂದ ಬಂದವರಾಗಿದ್ದು ವಿಶೇಷವಾದ ವಿಚಾರ. ಅವರಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಮತ್ತೆ ಕೆಲವರು ಗುಜರಾತ್ ರಾಜ್ಯದಿಂದ ಬಂದವರಾಗಿದ್ದಾರೆ. ಬೆರಳೆಣಿಕೆಯಷ್ಟು ಅಂದರೆ 4 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಈವರೆಗೆ ಕರ್ನಾಟಕದಲ್ಲಿ ಸಾವು : 40
ಈಗಿರುವ ಕೋರೋನಾ ರೋಗಿಗಳು : 802
ಇಲ್ಲಿಯವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು : 530