Home News ರೈತನೋರ್ವ ಇಟ್ಟ ವಿಚಿತ್ರ ಬೇಡಿಕೆ | ಮನೆ ಮುಂದೆ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲು ಜಿಲ್ಲಾಧಿಕಾರಿಗೆ ಮನವಿ...

ರೈತನೋರ್ವ ಇಟ್ಟ ವಿಚಿತ್ರ ಬೇಡಿಕೆ | ಮನೆ ಮುಂದೆ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲು ಜಿಲ್ಲಾಧಿಕಾರಿಗೆ ಮನವಿ | ಕಾರಣ ನೀವು ತಿಳಿದರೆ ನಿಜಕ್ಕೂ ಆಶ್ಚರ್ಯಪಡ್ತೀರಾ

Hindu neighbor gifts plot of land

Hindu neighbour gifts land to Muslim journalist

ಸರ್ಕಾರ ನಮ್ಮ ಬೇಕು ಬೇಡಗಳನ್ನು ಈಡೇರಿಸುವಲ್ಲಿ ಸದಾ ನಮಗೆ ಬೆಂಗಾವಲು ಆಗಿರುತ್ತದೆ. ಹಾಗಂತ ನಮ್ಮ ಪ್ರತಿಯೊಂದು ಮನವಿಯನ್ನು ಈಡೇರಿಸಲು ಸಾಧ್ಯ ಆಗುವುದಿಲ್ಲ. ಹೌದು ಇಲ್ಲೊಂದು ರೈತ ಅಧಿಕಾರಿಗೆ ಮನವಿ ಮಾಡಿರುವುದು ನೋಡಿ ನೀವು ಆಶ್ಚರ್ಯ ಪಡುತ್ತೀರಾ!

ತಮಿಳುನಾಡಿನ ಧರ್ಮಪುರಿ ಮೂಲದ ಗಣೇಶನ್ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಮಾಡಿದ್ದಾರೆ. ಅಂದಹಾಗೆ ಗಣೇಶನ್ ಬಳಿ ಯಾವುದೇ ಹೆಲಿಕಾಪ್ಟರ್ ಇಲ್ಲ. ಆದರೆ, ಆತನ ಕಿರಿಯ ಮಗಳು ಆಟಿಕೆ ಹೆಲಿಕಾಪ್ಟರ್ ಹೊಂದಿದ್ದು , ಹಿರಿಯ ಮಗಳು ಹೆಲಿಕಾಪ್ಟರ್ ಫೋಟೋವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ಈ ಪ್ರಕರಣ ಎಲ್ಲರ ಗಮನ ಸೆಳೆದಿದೆ.

ಹೌದು ತಮ್ಮ ಮನೆಯ ಮುಂದೆ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾರೆ.

ತಮ್ಮ ಸಮಸ್ಯೆಯ ಬಗ್ಗೆ ಮಾತನಾಡಿರುವ ಗಣೇಶನ್, ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 4 ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದಿದ್ದೇವೆ . ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸ್ ಮತ್ತು ಕಂದಾಯ ಇಲಾಖೆಗೆ ದೂರು ದಾಖಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ.ಆದ್ದರಿಂದ ಎಲ್ಲರ ಗಮನ ಸೆಳೆಯಲು ಈ ರೀತಿಯ ವಿಶೇಷ ಪ್ರಯತ್ನ ಮಾಡಿದೆ ಎಂದು ಸುದ್ದಿಗಾರರ ಮುಂದೆ ತಿಳಿಸಿದ್ದಾರೆ.