Home News ಗಂಡ ಬೇಡ ಬಾಯ್‌ಫ್ರೆಂಡ್‌ ಬೇಕು | ಪತಿಯನ್ನು ಧಿಕ್ಕರಿಸಿ ಹೋದಾಕೆ ಶವವಾಗಿ ಪತ್ತೆ

ಗಂಡ ಬೇಡ ಬಾಯ್‌ಫ್ರೆಂಡ್‌ ಬೇಕು | ಪತಿಯನ್ನು ಧಿಕ್ಕರಿಸಿ ಹೋದಾಕೆ ಶವವಾಗಿ ಪತ್ತೆ

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಪ್ರೇಮಿಗಳಿಗೆ ಬಣ್ಣ, ವಯಸ್ಸು, ಹಣ, ಅಂತಸ್ತು, ಜಾತಿ, ಧರ್ಮ ಯಾವುದು ಲೆಕ್ಕಕ್ಕೆ ಇರಲ್ಲ. ಪ್ರೀತಿ ಒಂದೇ ಶಾಶ್ವತ ಅನ್ನೋ ವೇದಾಂತ ಪ್ರೀತಿಸುವವರಿಗೆ. ಆದರೆ ಹೆಣ್ಣು ಒಂದು ಮಾಯೆ ಯಾರನ್ನು ಯಾವಾಗ ಯಾಮಾರಿಸುತ್ತಾಳೆ ಮತ್ತು ಯಾರಿಂದ ಹೇಗೆ ಮೋಸ ಹೋಗುತ್ತಾಳೆ ಅನ್ನೋದು ಊಹಿಸೋಕೆ ಸಾಧ್ಯ ಆಗಲ್ಲ. ಇನ್ನು ಹೆಣ್ಣು ಅಕ್ರಮ ಸಂಬಂಧಗಳಿಗೆ ವಾಲಿದರೆ ಅವಳ ಸ್ಥಿತಿ ಹೀಗೆಯೇ ಆಗುತ್ತದೆ ಅನ್ನುವ ನಿದರ್ಶನ ಇಲ್ಲಿದೆ.

ಹೌದು ಇದೀಗ ಹಾಸನದಲ್ಲಿ ಮಹಿಳೆಯೊಬ್ಬಳು ಅಕ್ರಮ ಸಂಬಂಧಕ್ಕೆ ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಆಕೆಯ ಶವವನ್ನು ಪ್ರಿಯಕರನೇ ಹೂತಿಟ್ಟಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಸುಮಾರು 22 ವರ್ಷದ ಕಾವ್ಯ ಒಂದೂವರೆ ವರ್ಷದ ಹಿಂದೆ ಹಾಸನ ಮೂಲದ ಯುವಕನನ್ನು ಪ್ರೀತಿಸಿ ಕಾವ್ಯ ಮದುವೆಯಾಗಿದ್ದಳು. ಆದರೆ ಮೂರು ನಾಲ್ಕು ತಿಂಗಳಲ್ಲೇ ಕಾವ್ಯ ಗಂಡನನ್ನು ಬಿಟ್ಟು ನಂತರ ತನ್ನ ಪೋಷಕರ ಸಂಪರ್ಕ ಕಡಿದುಕೊಂಡಿದ್ದಳು. ಅದಲ್ಲದೆ ತನ್ನ ಗಂಡನನ್ನು ಬಿಟ್ಟು ಸ್ನೇಹಿತನ ಜೊತೆಗೆ ವಾಸವಾಗಿದ್ದು ನಂತರ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾ. ಪರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ಗಂಡನನ್ನು ಬಿಟ್ಟು ಪ್ರಿಯಕರ ಅವಿನಾಶ್​ ಜೊತೆಗೆ ಕಾವ್ಯ ಮದುವೆಯಾಗದೇ ವಾಸವಾಗಿದ್ದಳು. ಆದರೆ ಈಗ ಮಗಳು ಶವವಾಗಿ ಪತ್ತೆಯಾಗಿದ್ದು, ಆಕೆಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿರುವುದು ಅವಿನಾಶ್​ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಅಲ್ಲದೇ ಮಹಿಳೆಯನ್ನು ಹೂತಿಟ್ಟ ಸ್ಥಳದಲ್ಲಿಯೇ ನಿಂತು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸದ್ಯ ಹೊಳೆನರಸೀಪುರ ತಹಶೀಲ್ದಾರ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಮೃತ ದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತ ದೇಹವನ್ನು ಹೊರ ತೆಗೆದ ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಸದ್ಯ ಕಾವ್ಯ ಸಾವಿನ ಸುತ್ತ ಅನುಮಾನಗಳು ಹುಟ್ಟುಕೊಂಡಿದ್ದು, ಪೊಲೀಸ್ ತನಿಖೆ ನಂತರ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.