ನರೇಶ್-ಪವಿತ್ರಾ ಕೇಸ್‌ ಗೆ ಸಿಕ್ತು ಬಿಗ್‌ ಟ್ವಿಸ್ಟ್‌

ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಟ್ರೋಲಿಂಗ್ ವಿಷಯವಾಗಿ ಮಾರ್ಪಟ್ಟಿದ್ದಾರೆ . ನಟಿ ಪವಿತ್ರಾ ಲೋಕೇಶ್ ಹಾಗೂ ಹಿರಿಯ ನಟ ನರೇಶ್ ಅವರ ಸಂಬಂಧದ ಬಗ್ಗೆ ದಿನಕ್ಕೊಂದು ಕಥೆ ಕೇಳಿ ಬರುತ್ತಿವೆ. ಇವರಿಬ್ಬರ ಸಂಬಂಧದ ಬಗ್ಗೆ ಮಾಧ್ಯಮಗಳಲ್ಲಿ ವಿಭಿನ್ನ ಕಥೆಗಳು ಹರಿದಾಡುತ್ತಿರುವ ಬೆನ್ನಲ್ಲೆ ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲು ನರೇಶ್ ರೆಡಿಯಾಗಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಸಂಚಲನ ಮೂಡಿಸಿದೆ. ಇಬ್ಬರ ಬಗ್ಗೆಯೂ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ.

ಪವಿತ್ರಾ ಲೋಕೇಶ್ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದು, ಅಲ್ಲದೆ ನಟಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಹಿಂದೆ ನರೇಶ್ ಮಾಜಿ ಪತ್ನಿ ರಮ್ಯಾ ಕೈವಾಡವಿದೆ ಎಂದು ಪವಿತ್ರಾ ಲೋಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಪವಿತ್ರಾ ಲೋಕೇಶ್ ಅವರು ನರೇಶ್ ಜೊತೆ ಕರ್ನಾಟಕ ಮೈಸೂರಿನ ಹೋಟೆಲ್ ರೂಮಿನಲ್ಲಿ ತಂಗಿದ್ದ ಸಂದರ್ಭ ಈ ದೃಶ್ಯದ ಸುದ್ದಿ ಭಾರೀ ವೈರಲ್ ಆಗಿ ಸಂಚಲನ ಮೂಡಿಸಿದೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ಕೂಡ ಇದಕ್ಕೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು.


ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಕೃಷ್ಣ ನಿಧನದ ಬಳಿಕ, ಪವಿತ್ರಾ ಲೋಕೇಶ್ ಪೊಲೀಸ್ ದೂರು ದಾಖಲಿಸಿದ್ದರು. ತನಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾರ್ಫಿಂಗ್ ಮಾಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ಪವಿತ್ರಾ ಲೋಕೇಶ್ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಕುರಿತಾಗಿ ಇಬ್ಬರೂ ಹೈದರಾಬಾದ್ ನಾಂಪಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 12 ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಸೂಚನೆ ನೀಡಿದೆ. ಇಮಾಂತಿ ಟ್ಯಾಕ್ಸ್ ರಾಮರಾವ್, ಮಿರರ್ ಟಿವಿ, ರೆಡ್ ಟಿವಿ, ದಿ ನ್ಯೂಸ್ ಕ್ಯೂಬ್, ಲೇಟೆಸ್ಟ್ ತೆಲುಗು ಡಾಟ್ ಕಾಮ್, ತೆಲುಗು ಜರ್ನಲಿಸ್ಟ್, ದಾಸರಿ ವಿಜ್ಞಾನ, ಮೂವೀ ನ್ಯೂಸ್, ಲೈಫ್ ಇನ್ಫರ್ಮೇಷನ್, ಕೃಷ್ಣ ಕುಮಾರಿ, ರಮ್ಯಾ ರಘುಪತಿ ಅವರಿಗೂ ನ್ಯಾಯಾಲಯ ನೋಟಿಸ್ ಕಳುಹಿಸಿದೆ.


ಇದರ ಜೊತೆಗೆ ಹೋಟೆಲ್ ಘಟನೆಯಿಂದ ಇವರಿಬ್ಬರ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗಿದ್ದು, ಪವಿತ್ರಾ ಲೋಕೇಶ್ ಅವರು ತಮ್ಮ ವಿರುದ್ಧ ಸುಳ್ಳು ಮತ್ತು ಅಶ್ಲೀಲ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಪವಿತ್ರಾ ಲೋಕೇಶ್ ಅವರು ನರೇಶ್ ಪತ್ನಿ ರಮ್ಯಾ ರಘುಪತಿ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ರಮ್ಯಾ ಮತ್ತು ನರೇಶ್ ನಡುವೆ ಕೌಟುಂಬಿಕ ಕಲಹಗಳಿದ್ದು, ರಮ್ಯಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ .


ಸೂಪರ್‌ಸ್ಟಾರ್ ಕೃಷ್ಣ ನಿಧನರಾದ ಬಳಿಕ ಪವಿತ್ರ ಹಾಗೂ ನರೇಶ್ ತೀವ್ರವಾಗಿ ನೊಂದುಕೊಂಡಿದ್ದರು ಎನ್ನಲಾಗಿದ್ದು, ಅದೇ ಸಮಯಕ್ಕೆ ನರೇಶ್ ಅವರ ಮೂರನೇ ಹೆಂಡತಿ ರಮ್ಯಾ ಅಲ್ಲಿಗೆ ಬಂದಿದ್ದಾರೆ. ಇದರಿಂದಾಗಿ ಅಂದು ಪವಿತ್ರಾ ಲೋಕೇಶ್ ಟ್ರೋಲಿಂಗ್ ಹೆಚ್ಚಾಗಿದೆ. ಈ ಟ್ರೋಲಿಂಗ್ ಹಿಂದೆ ರಮ್ಯಾ ಕೈವಾಡವಿದೆ ಎಂದು ಪವಿತ್ರಾ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಪವಿತ್ರ ಅವರು ಟ್ರೋಲರ್‌ಗಳ ವಿರುದ್ಧ ಮಾತ್ರವಲ್ಲದೆ ರಮ್ಯಾ ವಿರುದ್ಧವೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.