ಬ್ಯಾಂಕ್ ಉದ್ಯೋಗಾಕಾಕ್ಷಿಂಗಳಿಗೆ ಭರ್ಜರಿ ಸಿಹಿ ಸುದ್ದಿ | 314 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ |
Bank of Maharashtra Recruitment 2022: ಬ್ಯಾಂಕ್ ಆಫ್ ಮಹಾರಾಷ್ಟ್ರ(Bank of Maharashtra) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರ(Banking Sector)ದಲ್ಲಿ ಕೆಲಸ ಮಾಡಲು ಆಸಕ್ತರಿರುವ ಅಭ್ಯರ್ಥಿಗಳಿಗೆ ಇದು ಸದಾವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಹಾಕಲು ಡಿಸೆಂಬರ್ 23, 2022 ಕೊನೆಯ ದಿನವಾಗಿದೆ.
ಒಟ್ಟು 314 ಅಪ್ರೆಂಟಿಸ್(Apprentice) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಅಂದಹಾಗೆ, ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/12/2022
ಅರ್ಜಿ ಸಲ್ಲಿಸಲು ಕೊನೆ ದಿನ: 23/12/2022
ಸಂಸ್ಥೆ : ಬ್ಯಾಂಕ್ ಆಫ್ ಮಹಾರಾಷ್ಟ್ರ
ಹುದ್ದೆ : ಅಪ್ರೆಂಟಿಸ್
ಒಟ್ಟು ಹುದ್ದೆ : 314
ವೇತನ : ತಿಂಗಳಿಗೆ 9000 ರೂ.
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಹುದ್ದೆ ವಿವರ : ಆಂಧ್ರ ಪ್ರದೇಶ- 10
ಚಂಡೀಗರ್- 2
ಛತ್ತೀಸ್ಗಢ-2
ದೆಹಲಿ-10
ಗೋವಾ-4
ಗುಜರಾತ್-6
ಕರ್ನಾಟಕ-8
ಮಧ್ಯ ಪ್ರದೇಶ -22
ಮಹಾರಾಷ್ಟ್ರ- 207
ಪಂಜಾಬ್-5
ರಾಜಸ್ಥಾನ-3
ತಮಿಳುನಾಡು-10
ಉತ್ತರ ಪ್ರದೇಶ- 20
ಪಶ್ಚಿಮ ಬಂಗಾಳ-5
ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ, ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 31, 2022ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ, SC/ST ಅಭ್ಯರ್ಥಿಗಳು- 5 ವರ್ಷ, PWD (UR/EWS) ಅಭ್ಯರ್ಥಿಗಳು- 10 ವರ್ಷ,PWD (OBC) ಅಭ್ಯರ್ಥಿಗಳು- 13 ವರ್ಷ, PWD (SC/ST) ಅಭ್ಯರ್ಥಿಗಳು- 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು- 100 ರೂ.
UR/EWS/OBC ಅಭ್ಯರ್ಥಿಗಳು-150 ರೂ.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಮೆರಿಟ್ ಲಿಸ್ಟ್, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ