ಎಸ್‌ಎಸ್‌ಎಲ್‌ಸಿ ಯಿಂದ ಪಿಜಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ | ಈ ಕೂಡಲೇ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ!!!

ಎಸ್. ಎಸ್. ಎಲ್. ಸಿ ಯಿಂದ ಮೇಲ್ಪಟ್ಟು ಪದವಿ, ಸ್ನಾತಕೋತ್ತರ ಪದವಿಯ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಿದ್ದು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಸಂದೀಪನಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು, ಅವರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು, ಅವರ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಭರಿಸಲು ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಪಠ್ಯಪುಸ್ತಕಗಳ ವೆಚ್ಚ, ಅಧ್ಯಯನ ಸಲಕರಣೆಗಾಗಿ ಪಾವತಿ, ಹಾಸ್ಟೆಲ್ ಶುಲ್ಕ, ಸಂಚಾರ ಮತ್ತು ಇತರೆ ವೆಚ್ಚಗಳನ್ನು ಕೂಡ ನೀಡಲಾಗುತ್ತದೆ.

ಹಾಗೇ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಸಲ್ಲಿಸಬೇಕಾದರೆ, ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಜಿಯೊಂದಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಡಬ್ಲ್ಯೂಎಸ್‌ (EWS) ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

ಇನ್ನೂ, ಅರ್ಜಿ ಸಲ್ಲಿಸಲು ಯಾವುದೆಲ್ಲಾ ದಾಖಲಾತಿಗಳು ಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಮೊದಲಾಗಿ ಆಧಾರ್ ಕಾರ್ಡ್, ಎಸ್‌ಎಸ್ಎಲ್‌ಸಿ ಮತ್ತು ಕಳೆದ ವರ್ಷದ ಮಾರ್ಕ್ಸ್ ಕಾರ್ಡ್, ನಿಮ್ಮ ಫೋಟೋ, ಇಡಬ್ಲ್ಯೂಎಸ್(EWS) ಸರ್ಟಿಫಿಕೇಟ್, ಶುಲ್ಕ ಮರುಪಾವತಿಗೆ ಶುಲ್ಕಪಾವತಿ ರಶೀದಿ, ಸಂಸ್ಥೆಯ ಪ್ರಾಂಶುಪಾಲರು ಧೃಡಿಕರಿಸಿದ ಅಧ್ಯಯನ ಪ್ರಮಾಣ ಪತ್ರ, ಜಾತಿ ಪ್ರಮಾಣಪತ್ರ ಹಾಗೂ
ವಿಶೇಷ ಚೇತನ ವಿದ್ಯಾರ್ಥಿಗಳು ಅಂಗವೈಕಲ್ಯ ಪ್ರಮಾಣಪತ್ರ.

ಇನ್ನೂ, ಈ ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧಿಕೃತ ವೆಬ್‌ಸೈಟ್‌ https://ksbdb.karnataka.gov.in/ ಗೆ ಭೇಟಿ ನೀಡಿ.

Leave A Reply

Your email address will not be published.