ಸಿಬಿಎಸ್‌ಇ 10,12ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ | ನಿಮಗೊಂದು ಮುಖ್ಯವಾದ ಮಾಹಿತಿ

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ. 40 ರಷ್ಟು ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡ. 30ರಷ್ಟು ಪ್ರಶ್ನೆಗಳನ್ನು ಸಾಮರ್ಥ್ಯವನ್ನಾಧರಿಸಿದ ಪ್ರಶ್ನೆಗಳು ಇರಲಿವೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಕೇಂದ್ರ ಶಿಕ್ಷಣ ಸಚಿವಾಲಯ 2023ರಿಂದ ಸಿಬಿಎಸ್‌ಇ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಒಂದಿಷ್ಟು ಮಹತ್ತರ ಬದಲಾವಣೆಯನ್ನು ಮಾಡಿದೆ. ಈ ಬಾರಿ ಬೋರ್ಡ್ ಪರೀಕ್ಷೆಯಲ್ಲಿ ಹಲವಾರು ಬದಲಾವಣೆಗಳು ಇರಲಿವೆ ಎನ್ನಲಾಗಿದೆ. ಹಾಗಾಗಿ, ಸಿಬಿಎಸ್‌ಇ 10,12ನೇ ತರಗತಿ ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಹೌದು!! ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ. 40 ರಷ್ಟು ಜೊತೆಗೆ 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡ. 30ರಷ್ಟು ಪ್ರಶ್ನೆಗಳನ್ನು ಸಾಮರ್ಥ್ಯವನ್ನು ಆಧರಿಸಿದ ಪ್ರಶ್ನೆಗಳು ಕೇಳಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2022(NEP) ಪ್ರಕಾರ ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಥಿಯರಿ ಪರೀಕ್ಷೆಗಳು ಆರಂಭವಾಗಲಿದೆ. ಅದೆ ರೀತಿ, ಶ್ರೀಘ್ರದಲ್ಲೇ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು 2022-23ನೇ ಸಾಲಿನ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕೇಳಲಾಗುವ ಸಾಮರ್ಥ್ಯವನ್ನಾಧರಿಸಿದ ಪ್ರಶ್ನೆಗಳು ವಸ್ತುನಿಷ್ಠ, ಸಮರ್ಥನೆ, ಪ್ರತಿಕ್ರಿಯೆ, ತಾರ್ಕಿಕತೆ ಮತ್ತು ಕೇಸ್‌ ಸ್ಟೆಡಿಯ ಬಹು ಸ್ವರೂಪಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ಬಳಿಕ ಅದರಲ್ಲಿ ಸೂಚಿಸಲಾದ ಶಿಪಾರಸ್ಸುಗಳನ್ನು ಅನುಸರಿಸುವಂತೆ ಸಂಯೋಜಿತ ಶಾಲೆಗಳಿಗೆ ಸೂಚಿಸಲಾಗುವ ಕುರಿತು ಎಂದು ಸಚಿವೆ ಅನ್ನಪೂರ್ಣ ದೇವಿ ಮಾಹಿತಿ ನೀಡಿದ್ದಾರೆ.

2023ನೇ ಸಾಲಿನ ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15,2023 ರಿಂದ ಆರಂಭವಾಗಲಿವೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ಮಾಹಿತಿ ನೀಡಿದೆ. ಆದರೆ , ಈ ಬಗ್ಗೆ ಸಂಪೂರ್ಣ ವೇಳಾಪಟ್ಟಿಯನ್ನು ಸದ್ಯ ಬಿಡುಗಡೆ ಮಾಡಲಾಗಿಲ್ಲ. ಈ ಬಾರಿ ವರ್ಷಕ್ಕೊಮ್ಮೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸಾಂಪ್ರದಾಯಿಕ ಅಭ್ಯಾಸಕ್ಕೆ ಪುನಃ ಮರಳಿದೆ ಎಂದು ಸಿಬಿಎಸ್‌ಇ ನಿರ್ಧರಿಸಿದೆ ಎನ್ನಲಾಗಿದೆ.

2023 ರ ಆವೃತ್ತಿಗೆ ಸಿಬಿಎಸ್‌ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಆರಂಭವಾಗಲಿದೆ. ಇತ್ತೀಚಿನ ಮಾಹಿತಿಯನ್ನೂ ಪಡೆಯಲು ವಿದ್ಯಾರ್ಥಿಗಳು cbse.gov.in ಗೆ ಭೇಟಿ ನೀಡಬಹುದಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE), ಈ ಹಿಂದಿನ ನೋಟಿಫಿಕೇಶನ್ ಅನುಸಾರ, ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಫೆಬ್ರವರಿ 15,2023 ರಿಂದ ಮೇ ತಿಂಗಳ ವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಸಂಪೂರ್ಣ ವೇಳಾಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬಿಡುಗಡೆ ಮಾಡಿಲ್ಲ.

Leave A Reply

Your email address will not be published.