PF Interest: ಪಿಎಫ್‌ ದುಡ್ಡು ಖಾತೆ ಸೇರದಿದ್ದರೆ ಈ ರೀತಿ ಮಾಡಿ

ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡಿರುತ್ತೇವೆ ಹಾಗೂ ಅಧಿಕ ಲಾಭ ಮೊತ್ತ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಮ್ಮ ನಿವೃತ್ತಿ ಜೀವನದಲ್ಲಿ ಸಹಾಯವಾಗಲಿದೆ ಹಾಗೆಯೇ ಹೂಡಿಕೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವುದರ ಜೊತೆಗೆ ಅದಕ್ಕಿಂತ ಹೆಚ್ಚು ಲಾಭ ಮೊತ್ತ ಎಷ್ಟಿದೆ ಎಂಬ ಕಡೆ ಗಮನಹರಿಸುತ್ತೇವೆ. ಪ್ರಸ್ತುತ ನೀವು ಪಿಎಫ್ ಖಾತೆಯಲ್ಲಿನ ಬಡ್ಡಿ ಹಣ ವಿಳಂಬವಾಗುವುದರಿಂದ ಖಾತೆದಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈಗಾಗಲೇ ಸಾಫ್ಟ್‌ವೇರ್ ಅಪ್‌ಡೇಟ್ ಕೆಲಸಗಳಿಂದಾಗಿ 2022 ರ FY ಗಾಗಿ PF ಬಡ್ಡಿ ಹಣವನ್ನು ಪಡೆಯುವಲ್ಲಿ ವಿಳಂಬವಾಗಿದೆ ಎಂದು ಹಣಕಾಸು ಸಚಿವಾಲಯ ಕಳೆದ ತಿಂಗಳು ಹೇಳಿದೆ. ಬಜೆಟ್ ಪಿಎಫ್ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ಹೊಸ ತೆರಿಗೆ ನಿಯಮಗಳನ್ನು ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.

ಅದಲ್ಲದೆ ಈಗಾಗಲೇ ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2021-22ರಲ್ಲಿ ಪಿಎಫ್ ಖಾತೆಗೆ ಶೇಕಡಾ 8.10 ಬಡ್ಡಿಯನ್ನು ಪಾವತಿಸಲು ಸರ್ಕಾರ ನಿರ್ಧರಿಸಿದೆ. ಅಂದಹಾಗೆ, ಇದನ್ನು ಮಾರ್ಚ್‌ನಲ್ಲಿಯೇ ನಿರ್ಧರಿಸಲಾಯಿತು. ಅಂದಿನಿಂದ ದೇಶದಲ್ಲಿ ಸುಮಾರು 7 ಕೋಟಿ ಪಿಎಫ್ ಗ್ರಾಹಕರು ತಮ್ಮ ಬಡ್ಡಿ ಹಣಕ್ಕಾಗಿ ಕಾಯುತ್ತಿದ್ದಾರೆ.

ಹೂಡಿಕೆ ಸಲಹೆಗಾರ ಬಲ್ವಂತ್ ಜೈನ್ ಪ್ರಕಾರ ಹಣಕಾಸು ವರ್ಷದ ಆರಂಭದಲ್ಲಿ ನಿರ್ಧಾರ ತೆಗೆದುಕೊಂಡರೂ ವರ್ಷಾಂತ್ಯದವರೆಗೂ ಬಡ್ಡಿ ಮೊತ್ತ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಈ ಕುರಿತು ತಜ್ಞರನ್ನು ವಿಚಾರಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸದ್ಯ ಎಲ್ಲಾ ನಿಯಂತ್ರಕ ಅನುಮೋದನೆಗಳು ಮತ್ತು ಹಣ ಬಿಡುಗಡೆಯಲ್ಲಿ ವಿಳಂಬದಿಂದಾಗಿ, ಕೋಟ್ಯಂತರ ಗ್ರಾಹಕರು ಅದಕ್ಕಾಗಿ ಕಾಯಬೇಕಾಗಿದೆ. ಬಡ್ಡಿದರಗಳನ್ನು ಇಪಿಎಫ್‌ಒ ಟ್ರಸ್ಟ್ ನಿರ್ಧರಿಸಿದ ನಂತರ, ಅದರ ಶಿಫಾರಸನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ನಿಧಿ ಸಂಗ್ರಹ ಕಾರ್ಯ ಆರಂಭವಾಗಲಿದೆ ಎನ್ನಲಾಗಿದೆ.

ಈ ಎಲ್ಲಾ ಕಾರಣದಿಂದಾಗಿ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಪ್ರಾರಂಭಿಸಲಾಯಿತು. ಶೀಘ್ರದಲ್ಲೇ ಗ್ರಾಹಕರು ತಮ್ಮ ಪಿಎಫ್ ಖಾತೆಗೆ ಬಡ್ಡಿ ಹಣವನ್ನು ಪಡೆಯಲು ಪ್ರಾರಂಭಿಸುತ್ತಾರೆ ಎಂದು ಸರ್ಕಾರ ಹೇಳಿದೆ.

ಪಿಎಫ್ ಖಾತೆಯಲ್ಲಿನ ಬಡ್ಡಿ ಹಣ ವಿಳಂಬವಾಗುವುದರಿಂದ ಖಾತೆದಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆದರೆ ತಜ್ಞರು ಈ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಇಪಿಎಫ್ ಆಕ್ಟ್ 1952 ರ ಪ್ರಕಾರ, ಖಾತೆದಾರರು ಪ್ರತಿ ತಿಂಗಳ ಕೊನೆಯಲ್ಲಿ ಪಿಎಫ್ ಹಣವನ್ನು ಪಡೆಯಬೇಕು, ಇಲ್ಲದಿದ್ದರೆ ಅವರು ಅನೇಕ ರೀತಿಯಲ್ಲಿ ತೊಂದರೆ ಅನುಭವಿಸುತ್ತಾರೆ ಎಂದು ಹೇಳಲಾಗಿದೆ.

ಸದ್ಯ ಹಣಕಾಸು ಸಚಿವಾಲಯದ ಪ್ರಕಾರ ಪಿಎಫ್ ಖಾತೆಯಲ್ಲಿನ ಬಡ್ಡಿ ಹಣ ವಿಳಂಬವಾಗುವುದರಿಂದ ಖಾತೆದಾರರಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಭರವಸೆ ನೀಡಿದೆ.

Leave A Reply

Your email address will not be published.