ವರ್ಷಾಂತ್ಯಕ್ಕೆ ಊರಿಗೆ ಹೋಗುವವರಿಗೆ ಭರ್ಜರಿ ಸಿಹಿ ಸುದ್ದಿ

ಕರ್ನಾಟಕದ ರೈಲು ಪ್ರಯಾಣಿಕರು ಗಮನಿಸಬೇಕಾದ ಮಾಹಿತಿ ಇಲ್ಲಿದೆ . ಸದ್ಯ ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ . ಹಾಗೆಯೇ ವರ್ಷ ಕೊನೆಯಲ್ಲಿ ನಿಮಗಾಗಿ ವಿಶೇಷ ರೈಲು ವ್ಯವಸ್ಥೆ ತರಲಾಗಿದೆ.

ಹೌದು ಭಾರತೀಯ ರೈಲ್ವೆ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲನ್ನು ಘೋಷಿಸಿದೆ. ಪ್ರಸ್ತುತ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ವಿಶೇಷ ರೈಲನ್ನು ಘೋಷಿಸಲಾಗಿದೆ. ಅಲ್ಲದೇ ಮುರುಡೇಶ್ವರದಿಂದ ಬೆಂಗಳೂರಿಗೂ ವಾರಕ್ಕೆ ಒಮ್ಮೆ ಈ ವಿಶೇಷ ರೈಲು ಸಂಚರಿಸಲಿದೆ.

ಡಿಸೆಂಬರ್ 10ರಿಂದ ಜನವರಿ 29ರವರೆಗೆ ಈ ವಿಶೇಷ ರೈಲು ವಾರಕ್ಕೆ ಒಮ್ಮೆ ಬೆಂಗಳೂರಿನಿಂ ಮುರುಡೇಶ್ವರಕ್ಕೆ ಸೇವೆ ಒದಗಿಸಲಾಗಿದೆ.

ಈ ವಿಶೇಷ ರೈಲು 11.55 ಗಂಟೆಗೆ ಪ್ರತಿ ಶನಿವಾರ ರಾತ್ರಿ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದೆ. ಈ ರೈಲು ಮರುದಿನ, ಅಂದರೆ ರವಿವಾರ ಮಧ್ಯಾಹ್ನ 12.55ಕ್ಕೆ ಮುರುಡೇಶ್ವರ ರೈಲು ನಿಲ್ದಾಣವನ್ನು ತಲುಪುತ್ತದೆ.

ವಾರಕ್ಕೊಮ್ಮೆ ಸೇವೆ ನೀಡುವ ಈ ವಿಶೇಷ ರೈಲು ಬೆಂಗಳೂರಿನಿಂದ ಹೊರಟು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳದ ಮೂಲಕ ಮುರುಡೇಶ್ವರವನ್ನು ತಲುಪುತ್ತದೆ.

ವರ್ಷ ಕೊನೆಯಲ್ಲಿ ಬೆಂಗಳೂರಿನಿಂದ ಕರಾವಳಿ-ಮಲೆನಾಡು ಭಾಗಕ್ಕೆ ಪ್ರಯಾಣ ಬೆಳೆಸುವ ಯೋಜನೆ ಮಾಡುತ್ತಿದ್ದರೆ ಈ ರೈಲಿನ ಉಪಯೋಗ ನೀವು ಪಡೆಯಬಹುದಾಗಿದೆ. ಅಲ್ಲದೇ ಜನವರಿಯಲ್ಲಿ ಊರಿನಿಂದ ಬೆಂಗಳೂರಿಗೆ ಮರಳುವಾಗಲೂ ನೀವು ಇದೇ ರೈಲಿನ ಟಿಕೆಟ್ ಬುಕ್ ಮಾಡಬಹುದಾಗಿದೆ.

ಒಟ್ಟಿನಲ್ಲಿ ಈ ವರ್ಷದ ಕೊನೆಯಲ್ಲಿ ಊರಿಗೆ ಹೋಗಬಯಸುವವರಿಗೆ ಇದೊಂದು ಸಿಹಿ ಸುದ್ದಿ ಆಗಿದೆ.

Leave A Reply

Your email address will not be published.