ಪ್ರಧಾನಿ ಮೋದಿ ನನ್ನ ಆರೋಗ್ಯ ವಿಚಾರಿಸಿದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ : ಹೆಚ್‌ ಡಿ ದೇವೇಗೌಡರು

Share the Article

ಬೆಂಗಳೂರು: ಜಿ20 ಶೃಂಗಸಭೆಯ ಭಾರತದ ಅಧ್ಯಕ್ಷತೆ ಹಿನ್ನೆಲೆ ನಡೆದ ಸರ್ವಪಕ್ಷ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ “ನನ್ನ ಆರೋಗ್ಯ ವಿಚಾರಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ”ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಟ್ಟಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆಡ.

ಪ್ರಧಾನಿ ಜತೆಗಿನ ಫೋಟೋ ಜತೆಗೆ ಪತ್ರದೊಂದಿಗೆ ಟ್ವೀಟ್ ಮಾಡಿರುವ ಅವರು, ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವುದು ಬಹಳಷ್ಟು ಒಳ್ಳೆಯ ವಿಷಯಗಳ ಆರಂಭ”. “ವಸುದೈವ ಕುಟುಂಬಕಂ”ಎಂಬ ದೃಷ್ಟಿಕೋನದಿಂದ ಜಗತ್ತನ್ನು ನೋಡುವಲ್ಲಿ ಈ ಅವಕಾಶ ಮಹತ್ವದ್ದಾಗಿದೆ. ಜಿ20 ಒಕ್ಕೂಟವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಆರ್ಥಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕತೆ ಹಾಗೂ ಪರಿಸರ ಕ್ಷೇತ್ರವೂ ಸೇರಿದಂತೆ ವಿಶ್ವಕ್ಕೆ ಅಗಾಧವಾದ ಕೊಡುಗೆ ನೀಡುವುದಕ್ಕಾಗಿ ಈ ವೇದಿಕೆ ಭಾರತಕ್ಕೆ ಮಹತ್ವದ್ದಾಗಿದೆ. ಭಾರತ ಒಂದು ಯುವ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ಸೌಹಾರ್ದ ವಾತಾವರಣದಲ್ಲಿ ಈ ವೇದಿಕೆಯ ಅಧ್ಯಕ್ಷೆತಯನ್ನು ವಹಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಬಾಂಧವ್ಯ ವೃದ್ಧಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ-ಉಕ್ರೇನ್ ಉದ್ವಿಗ್ನ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲೂ ಅವರು ತೆಗೆದುಕೊಂಡ ನಿಲುವನ್ನು ನಾನು ಶ್ಲಾಘಿಸುತ್ತೇನೆ. ಇಂದು ನಡೆದ ಸಭೆ ಮಹತ್ವದ್ದಾಗಿದೆ. ಸಭೆ ಬಳಿಕ ನನ್ನ ಆರೋಗ್ಯ ವಿಚಾರಿಸಿದ ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

Leave A Reply