Home Health ಮೊಣಕಾಲು ನೋವಿನ ಸಮಸ್ಯೆಗೆ ಪರಿಹಾರ ನಿಮಗೂ ಬೇಕೇ | ಹಾಗಿದ್ರೆ ಬಳಸಿ ಎಕ್ಕ ಎಲೆಯ ಎಣ್ಣೆ!

ಮೊಣಕಾಲು ನೋವಿನ ಸಮಸ್ಯೆಗೆ ಪರಿಹಾರ ನಿಮಗೂ ಬೇಕೇ | ಹಾಗಿದ್ರೆ ಬಳಸಿ ಎಕ್ಕ ಎಲೆಯ ಎಣ್ಣೆ!

Hindu neighbor gifts plot of land

Hindu neighbour gifts land to Muslim journalist

ಮ್ಯಾಜಿಕಲ್‌ ಗುಣವಿರುವ ಗಿಡಗಳಲ್ಲೊಂದು ಎಕ್ಕದ ಗಿಡ. ಎಕ್ಕದ ಗಿಡದಲ್ಲಿ ಬಿಡುವ ಸುಂದರ ಹೂವುಗಳು. ದೇವರ ಪೂಜೆಗೂ ಬಳಸಲ್ಪಡುವ ಈ ಹೂಗಳು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಸುಲಭವಾಗಿ ಮೂಳೆಗಳು ಮತ್ತು ಸಂಧಿವಾತದಿಂದ ಉಂಟಾಗುವ ಕೀಲು ನೋವು, ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಮಾತ್ರವಲ್ಲ ಮೊಣಕಾಲು ನೋವನ್ನು ಥಟ್ಟೆಂದು ಶಮನಗೊಳಿಸುವ ಪವರ್ ಈ ಎಕ್ಕದ ಹೂವಿನಲ್ಲಿದೆ.

ಹೌದು. ವಯಸ್ಸಾದಂತೆ ಮಾಮೂಲ್ ಆಗಿ ಕಾಣಿಸಿಕೊಳ್ಳುವ ಮಂಡಿ ನೋವಿನಿಂದ ಅದೆಷ್ಟೋ ಜನ ಪರದಾಡುತ್ತಾರೆ. ಇಂತಹ ನೋವಿಗೆ ರಾಮಬಾಣವಾಗಿದೆ ಎಕ್ಕ ಎಲೆ. ಎಕ್ಕ ಎಲೆಯ ಎಣ್ಣೆ ಮಾಡಿಟ್ಟುಕೊಂಡು ಹಚ್ಚುವುದರ ಮೂಲಕ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಹೀಗಾಗಿ ಎಕ್ಕ ಎಲೆಯ ಎಣ್ಣೆ ತಯಾರಿಸುವುದು ಹೇಗೆ ಎಂಬುದನ್ನು ತಿಳಿದಿಕೊಳ್ಳೋದು ಮುಖ್ಯ. ಹಾಗಿದ್ರೆ ಇನ್ಯಾಕೆ ತಡ ಬನ್ನಿ ಈ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ..

ಎಕ್ಕ ಎಲೆಯ ಎಣ್ಣೆ ತಯಾರಿಗೆ ಬೇಕಾಗುವ ಸಾಮಾಗ್ರಿಗಳು:
ಎಕ್ಕದ ಎಲೆ
ಓಮದ ಕಾಳು
ಪಚ್‌ ಕರ್ಪೂರ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಪಾತ್ರೆಗೆ ಅರ್ಧ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಬೇಕು ನಂತರ ಅದಕ್ಕೆ 9 ಎಕ್ಕದ ಎಲೆ ಹಾಕಿ ಕಾಯಿಸಬೇಕು ಎಣ್ಣೆ ಬಿಸಿ ಆಗುತ್ತಿದ್ದ ಹಾಗೆ ಕುಟ್ಟಣಿಗೆಯಲ್ಲಿ ಕುಟ್ಟಿ ಪುಡಿಮಾಡಿಕೊಂಡ ಓಮದ ಕಾಳು, ಪಚ್‌ ಕರ್ಪೂರ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಬೇಕು. ನಂತರ ಗ್ಯಾಸ್‌ ಆಫ್‌ ಮಾಡಿ ಎಣ್ಣೆ ತಣ್ಣಗಾದ ನಂತರ ಎಕ್ಕದ ಎಲೆಯ ಸಮೇತ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ಎಕ್ಕ ಎಲೆಯ ಎಣ್ಣೆಯನ್ನು ಮಂಡಿಗೆ ಹಚ್ಚಿಕೊಂಡು ಮಸಾಜ್‌ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮಂಡಿ ನೋವು ಕಡಿಮೆ ಆಗುತ್ತದೆ.

ಅಷ್ಟೇ ಅಲ್ಲದೆ ಇದರಲ್ಲಿ ಹಲವು ಔಷಧೀಯ ಗುಣವಿದೆ. ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಕೀಲು ನೋವು,ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಎಕ್ಕದ ಎಲೆಯನ್ನು ಬಿಸಿ ಮಾಡಿ ತಣ್ಣಗಾದ ನಂತರ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುವಂತೆ ಮಾಡುತ್ತದೆ. ಎಕ್ಕದ ಗಿಡವನ್ನು ಸ್ಪರ್ಷ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಹಿರಿಯರ ನಂಬಿಕೆ.