Home Jobs Police Training: ಪೊಲೀಸ್ ಕಾನ್ಸ್​ಟೇಬಲ್ ಆಗಬೇಕೆನ್ನುವವರಿಗೆ ಉಚಿತ ತರಬೇತಿ ಸೌಲಭ್ಯ!

Police Training: ಪೊಲೀಸ್ ಕಾನ್ಸ್​ಟೇಬಲ್ ಆಗಬೇಕೆನ್ನುವವರಿಗೆ ಉಚಿತ ತರಬೇತಿ ಸೌಲಭ್ಯ!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಿಂದ 2022 ನೇ ಸಾಲಿನ ಪೋಲಿಸ್ ಪೇದೆ ಪುರುಷ ಮತ್ತು ಮಹಿಳಾ ಹುದ್ದೆಗಳ ನೇಮಕಾತಿಗೆ ರಾಜ್ಯ ಪೊಲೀಸ್ ಇಲಾಖೆ 1591 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ, ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ತರಬೇತಿಯನ್ನು ಆಯೋಜಿಸಿದೆ.

ಕಚೇರಿಯ ವತಿಯಿಂದ ಡಿಸೆಂಬರ್ 5 ರಿಂದ 16ರವರೆಗೆ ಮುಂಬರುವ ಪೋಲಿಸ್ ಕಾನ್ಸ್​ಟೇಬಲ್ (Police Constable Exam) ಮತ್ತು ಡಿ.ಆರ್. ಪೊಲೀಸ್ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ (Competitive Exams Coaching) ಹಾಜರಾಗುವ ಅಭ್ಯರ್ಥಿಗಳಿಗೆ, ವಿಜಯಪುರ ನಗರದ ಸಿದ್ದೇಶ್ವರ ಗುಡಿ ಎದುರಿಗಿರುವ ಇಜೇರಿ ಕರಿಯರ್ ಅಕಾಡೆಮಿಯಲ್ಲಿ ಉಚಿತ ತರಬೇತಿಯನ್ನು ಆಯೋಜಿಸಿದೆ. ಇಲ್ಲಿ ಉಚಿತವಾಗಿ ಪಠ್ಯಕ್ರಮನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ನೀಡುತ್ತಾರೆ.

ತರಬೇತಿಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಲ್ಲಿಸಿದ ಅರ್ಜಿ ಹಾಗೂ ಆಧಾರ ಕಾರ್ಡ್​ ಝೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬಹುದಾಗಿದೆ. ಅಥವಾ ಇಮೇಲ್ empbjp@gmail.com ವಿಳಾಸಕ್ಕೆ ಕಳುಹಿಸಿ ಅಗತ್ಯ ದಾಖಲಾತಿಯೊಂದಿಗೆ ಪರೀಕ್ಷಾರ್ಥಿ ಅಭ್ಯರ್ಥಿಗಳು ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ್ ರಸ್ತೆ ವಿಜಯಪುರ ದೂ: 08352-250383, ಮೊ: 9620095270 ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ತರಬೇತಿಯ ಹೆಸರು:- ಪೋಲಿಸ್ ಕಾನ್ಸ್​ಟೇಬಲ್ ಪರೀಕ್ಷೆ ತರಬೇತಿ
ತರಬೇತಿಯ ಅವಧಿ:- ಡಿಸೆಂಬರ್ 5 ರಿಂದ 16ರವರೆಗೆ
ಶುಲ್ಕ:- ಸಂಪೂರ್ಣ ಉಚಿತ
ಇಮೇಲ್ ವಿಳಾಸ:- empbjp@gmail.com
ದೂರವಾಣಿ ಸಂಖ್ಯೆ:- 08352-250383 ಅಥವಾ 9620095270