ವಂಶ ಬೆಳೆಸಲು ಸೊಸೆ ಜತೆ ಸೆಕ್ಸ್ ಮಾಡಲು ಮಾವ ಉತ್ಸುಕ | ಎದ್ದು ಬಂದ ಬೀಗರಿಂದ ಬಿತ್ತು ಹಾಸನದಲ್ಲಿ ಹೆಣ

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳ್ಳಿಯ ರಾಗಿಕಾವಲು ಗ್ರಾಮದ ಕೆರೆ ಬಳಿ ನವೆಂಬರ್ 13ರಂದು ದೊಡ್ಡಹಳ್ಳಿ ತಮ್ಮೇಗೌಡನ ಮೃತದೇಹ ಪತ್ತೆಯಾಗಿತ್ತು.

 

ತಮ್ಮೇಗೌಡ ತನ್ನ ವಿಕಲಚೇತನ ಮಗನಿಗೆ ಮದುವೆ ಮಾಡಿದ್ದ. ಸಹಜವಾಗಿ ತಮ್ಮೇಗೌಡ ಅಜ್ಜನಾಗುವ ಕನಸು ಕೂಡಾ ಕಂಡಿದ್ದ. ಆದರೆ, ಮಗನಿಗೆ ಮಗು ಹುಟ್ಟಲಿಲ್ಲ. ತನಗೆ ಮೊಮ್ಮಕ್ಕಳು ಆಗದ ಕಾರಣ ವಂಶೋದ್ಧಾರ ಮಾಡಲು ನಿರ್ಧರಿಸಿದ ತಮ್ಮೆಗೌಡ ಸೊಸೆಯೊಂದಿಗೆ ತಾನೇ ಮಲಗಲು ಮುಂದಾಗಿದ್ದಾನೆ.

ಆದರೆ ಸೊಸೆ ಇದಕ್ಕೆ ನಿರಾಕರಿಸಿದ್ದಾಳೆ. ತನ್ನೊಂದಿಗೆ ಮಲಗುವಂತೆ ಮತ್ತು ಮಗು ಮಾಡಿಕೊಡುವಂತೆ ಆತ ಸೊಸೆಗೆ ದುಂಬಾಲು ಬಿದ್ದಿದ್ದಾನೆ. ಈ ವಿಷಯವನ್ನು ಆ ಸೊಸೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಮಹಿಳೆಯ ಪೋಷಕರು ಕೋಪಗೊಂಡು ಚಂದ್ರೇಗೌಡ ಮತ್ತು ಯೋಗೇಶ ಎಂಬಿಬ್ಬರಿಗೆ 50,000 ರೂಪಾಯಿಗೆ ಸುಪಾರಿ ನೀಡಿದ್ದಾರೆ. ಸುಪಾರಿ ಪಡೆದು ಬಂದ ಕೊಲೆಗಾರರು ಕೊಲೆ ಮಾಡಿ, ನಂತರ ತಮ್ಮೆಗೌಡನ ಮೃತ ದೇಹವನ್ನು ಕೆರೆಗೆ ಎಸೆದು ಪರಾರಿಯಾಗಿದ್ದಾರೆ. ತಮ್ಮೆಗೌಡನ ಮಿಸ್ಸಿಂಗ್ ಮತ್ತು ಶವದ ಸುತ್ತ ಮೊಬೈಲ್ ಲೊಕೇಷನ್ ಆಧರಿಸಿ ಪೊಲೀಸರು ಅರಸಿದಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಆಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ತಮ್ಮೇಗೌಡನ ಬೀಗರನ್ನು ಬಂಧಿಸಿದ್ದಾರೆ. ವಂಶೋದ್ಧಾರ ಮಾಡಲು ಹೋದ ಮಾವ ಸಾವು ಕಂಡಿದ್ದಾನೆ. ಮಗಳಿಗೆ ಮಲಗಲು ಕಿರುಕುಳ ನೀಡುತ್ತಿದ್ದ ಮಾವನ ಬಗ್ಗೆ ಪೊಲೀಸರಿಗೆ ದೂರು ಕೊಡುವ ಬದಲು ಸುಪಾರಿ ಮಡಗಿದ ದುಡುಕು ಬುದ್ದಿಯ ಬೀಗರು ಕಂಬಿ ಹಿಂದೆ ಬಿದ್ದಿದ್ದಾರೆ.

Leave A Reply

Your email address will not be published.