ವೆಂಟಿಲೇಟರ್ ಶಬ್ದ ಕಿರಿಕಿರಿ ಆಗುತ್ತೆ ಅಂತ ಆಫ್ ಮಾಡಿದ ವೃದ್ಧೆ | ಈ ಅಚಾತುರ್ಯದ ಪರಿಣಾಮ ಭೀಕರ!
ಆರೋಗ್ಯವೇ ಭಾಗ್ಯ ಎಂದು ಎಲ್ಲರಿಗೂ ತಿಳಿದೇ ಇದೆ. ಆದರೂ ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಕೆಲವೊಮ್ಮೆ ಚಿಕಿತ್ಸೆಗಾಗಿ ಆಸ್ಪತ್ರೆ ಮೆಟ್ಟಿಲು ಹತ್ತಬೇಕಾಗುತ್ತದೆ. ಹಾಗೇನೇ ಅಂತಹುದೇ ಒಂದು
ತೀವ್ರ ನಿಗಾ ಘಟಕದಲ್ಲಿನ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಇಷ್ಟೇನಾ ವಿಷಯ ಎಂದು ನಿಮಗೆ ಅನಿಸಬಹುದು. ಆದರೆ ವಿಷಯ ಇದಲ್ಲ, ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗುತ್ತಿದೆ ಎಂದು ಬೇಸತ್ತ ವೃದ್ಧೆಯೊಬ್ಬಳು ಅದನ್ನು ಆಫ್ ಮಾಡಿದ್ದು ಹಾಗಾಗಿ ರೋಗಿ ಸಾವಿಗೀಡಾದ ಘಟನೆ ನಡೆದಿದೆ. ಈಗ 72 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಇಬ್ಬರೂ ರೋಗಿಗಳು ಒಂದೇ ವಾರ್ಡ್‌ನಲ್ಲಿದ್ದು, ಆಗ ಇನ್ನೊಬ್ಬಾಕೆಗೆ ಅಳವಡಿಸಿದ್ದ ವೆಂಟಿಲೇಟರ್ ಶಬ್ದಕ್ಕೆ ಬೇಸತ್ತು ಈಕೆ ಅದನ್ನು ಆಫ್ ಮಾಡಿದ್ದಳು. ಜರ್ಮನಿಯ ಮ್ಯಾಸ್ಲಿಮ್‌ನ ಆಸ್ಪತ್ರೆಯೊಂದರಲ್ಲಿ ನ. 29ರಂದು ಈ ಪ್ರಕರಣ ನಡೆದಿದೆ.
ರೋಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಐಸಿಯು ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಅನಿಸುತ್ತಿತ್ತು ಎಂದು ಆಕೆ ತಿಳಿಸಿದ್ದಾರೆ. ಅದಾಗ್ಯೂ ರೋಗಿಗೆ ವೆಂಟಿಲೇಟರ್ ಅಗತ್ಯವಿದೆ ಎಂದು ಇನ್ನೊಮ್ಮೆ ಆನ್ ಮಾಡಿದ್ದಾಗಲೂ ಆಕೆ ನಂತರ ಅದನ್ನು ಆಫ್ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಾವಿಗೀಡಾದ ರೋಗಿ ಅಪಾಯದಲ್ಲಿ ಇರದಿದ್ದರೂ ವೆಂಟಿಲೇಟರ್ ಅಗತ್ಯವಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಬಳಿಕ ಜೈಲಿಗೆ ಕಳುಹಿಸಿದ್ದಾರೆ.