Home latest ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ

ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವರನ್ನು, ಆಯುಕ್ತರನ್ನು ಭೇಟಿ ಮಾಡಿದ ಜಿಲ್ಲಾ ಯುವಜನ ಒಕ್ಕೂಟ

Hindu neighbor gifts plot of land

Hindu neighbour gifts land to Muslim journalist

ಸವಣೂರು : ಬೆಂಗಳೂರಿನಲ್ಲಿ ಯುವಜನ ಸೇವಾ ಕ್ರೀಡಾ ಸಚಿವ ನಾರಾಯಣ ಗೌಡ ಹಾಗೂ ಇಲಾಖೆಯ ಆಯುಕ್ತ ಮುಹಿಲನ್ ಎಂ.ಪಿ. ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ವತಿಯಿಂದ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿ ಮನವಿ ನೀಡಲಾಯಿತು.

ಯುವಕ ಮತ್ತು ಯುವತಿ ಮಂಡಲದ ಅಸ್ತಿತ್ವ ಮತ್ತು ಅದಕ್ಕೆ ಅನುದಾನ ನೀಡುವ ಕುರಿತು ಹಾಗೂ ರಾಜ್ಯ ಯುವ ಸಂಘ ಗಳ ಒಕ್ಕೂಟ ಮುಂದಿನ ದಿನಗಳಲ್ಲಿ ರಥಯಾತ್ರೆ ಮತ್ತು ಪ್ರಶಸ್ತಿ ಪ್ರದಾನದ ಬಗ್ಗೆ ಚರ್ಚಿಸಲಾಯಿತು.

ರಾಜ್ಯ ಸರಕಾರ ನೀಡುತ್ತಿದ್ದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಯುವಜನ ಮೇಳಗಳನ್ನು ಮತ್ತೆ ಆರಂಭಿಸುವ ಕುರಿತು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸಚಿವ ನಾರಾಯಣ ಗೌಡ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ,ಜಿಲ್ಲಾ ಯುವಬಜನ ಒಕ್ಕೂಟದ ನಿರ್ದೇಶಕ ,ಪುತ್ತೂರು ತಾಲೂಕು ಯುವಜನ‌ ಒಕ್ಕೂಟದ ,ಎಪಿಎಂಸಿ ಪುತ್ತೂರು ಇದರ ಮಾಜಿ ಅಧ್ಯಕ್ಷ ದಿನೇಶ್ ಮೆದು,ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ,ಸುಪ್ರಿತ್ ರೈ ಕೊಯಿಲ ಮೊದಲಾದವರಿದ್ದರು.