Modi Masjid: ಬೆಂಗಳೂರಿನಲ್ಲಿದೆ ಮೋದಿ ಮಸೀದಿ! ಇದರ ವಿಶೇಷತೆ ಗೊತ್ತಾ?

ಬೆಂಗಳೂರಿನಲ್ಲಿ ಮೋದಿ ಎಂಬ ಹೆಸರಿನ ಮಸೀದಿಯೊಂದು ಇದೆ. ಇದೀಗ ಈ ಹೆಸರಿನ ಮಸೀದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಜನರಿಗೆ ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿದೆ. ಇನ್ನೂ ಇದರ ವಿಶೇಷತೆ ಏನು? ಮೋದಿ ಎಂಬ ಹೆಸರು ಏಕೆ ಇಟ್ಟಿದ್ದಾರೆ? ಎಂದು ನೋಡೋಣ.

ಬೆಂಗಳೂರಿನಲ್ಲಿರುವ ಮೋದಿ ಮಸೀದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಿರ್ಮಿಸಿದ ಮಸೀದಿ ಆಗಿರಬಹುದು ಎಂದು ಈಗಾಗಲೇ ಹಲವರು ಭಾವಿಸಿರುತ್ತಾರೆ. ಆದರೆ ಈ ಮಸೀದಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಿರ್ಮಿಸಿದ್ದಲ್ಲ. ಈ ಮಸೀದಿಯ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಟಾಸ್ಕರ್ ಟೌನ್​ನಲ್ಲಿರುವ ಮೋದಿ ಮಸೀದಿ ಭವ್ಯ ವಾಸ್ತುಶಿಲ್ಪದಿಂದಲೂ ಹೆಸರು ಗಳಿಸಿದೆ. ಇನ್ನೂ ಈ ಮಸೀದಿ ಸುಮಾರು 170 ವರ್ಷಗಳಷ್ಟು ಹಳೆಯದು. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಈ ಮಸೀದಿಯ ಹೆಸರಿಗೆ ಯಾವುದೇ ಸಂಬಂಧವಿಲ್ಲ. ಬೆಂಗಳೂರಿನಲ್ಲಿ ಇದೊಂದೇ ಮೋದಿ ಮಸೀದಿ ಅಲ್ಲ. ಇದನ್ನು ಹೊರತುಪಡಿಸಿ ಮೋದಿ ಮಸೀದಿ ಎಂದು ಕರೆಯಲ್ಪಡುವ ಎರಡು ಮಸೀದಿಗಳಿವೆಯಂತೆ.

1849 ರಲ್ಲಿ ಬೆಂಗಳೂರಿನ ಟಾಸ್ಕರ್ ಟೌನ್ ಅನ್ನು ಮಿಲಿಟರಿ ಮತ್ತು ಸಿವಿಲ್ ಸ್ಟೇಷನ್ ಎಂದು ಕರೆಯಲಾಗುತ್ತಿತ್ತು. ಆ ಪ್ರದೇಶದಲ್ಲಿ ಶ್ರೀಮಂತ ವ್ಯಾಪಾರಿ ಮೋದಿ ಅಬ್ದುಲ್ ಗಫೂರ್ ಎಂಬವರು ವಾಸಿಸುತ್ತಿದ್ದರು. ಅವರು ಈ ಪ್ರದೇಶದಲ್ಲಿ ಮಸೀದಿಯ ಅಗತ್ಯವಿದೆ ಎಂದು 1849 ರಲ್ಲಿ ಹೊಸ ಮಸೀದಿಯನ್ನು ನಿರ್ಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಸಮಯದಲ್ಲಿ ಈ ಹೊಸ ಮಸೀದಿಯನ್ನು ತೆರೆಯಲಾಗಿತ್ತು. ಇಂಡೋ-ಇಸ್ಲಾಮಿಕ್ ಆರ್ಕಿಟೆಕ್ಚರ್​ನಲ್ಲಿ 30,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಭವ್ಯ ವಾಸ್ತುಶಿಲ್ಪದ ಮೋದಿ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿ ರಾಜ್ಯ ವಕ್ಫ್ ಮಂಡಳಿಯ ಆಡಳಿತಕ್ಕೆ ಒಳಪಟ್ಟಿದೆ.

Leave A Reply

Your email address will not be published.