ನನಗೆ ಒಳ್ಳೆ ಸರ್ವಿಸ್‌ ಕೊಡ್ತಿಯಾ? ನಿನಗೆ 50ಸಾವಿರ ಕೊಡ್ತೀನಿ, ಖುಲ್ಲಂ ಖುಲ್ಲಂ ಪತ್ರ ಬರೆದು ಯುವತಿಗೆ ಸೆಕ್ಸ್‌ಗೆ ಕರೆದ ಕಾಮುಕ

Share the Article

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಶಾಲಾ ಬಸ್‌ನಲ್ಲಿ ಡ್ರಾಪ್‌ ಕೊಡ್ತೇನೆ ಎಂದು ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ಮಾಸುವ ಮೊದಲೇ ಈ ಕಹಿ ಘಟನೆಯ ತನಿಖೆ (Enquiry) ನಡೆಯುತ್ತಿರುವಾಗಲೇ ಮತ್ತೊಂದು ಲೈಂಗಿಕ ದೌರ್ಜನ್ಯ (sexually harassement) ನಡೆದಿರುವುದು ಬೆಳಕಿಗೆ ಬಂದಿದೆ. ಈ ಕಾಮುಕ ಸ್ವಲ್ಪ ವಿಚಿತ್ರ ರೀತಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಪತ್ರ ಬರೆದು ಆಕೆಗೆ ಹಿಂಸೆ ನೀಡುತ್ತಿದ್ದಾನೆ ಎಂದು ವರದಿಯಾಗಿದೆ. ಅಪಾರ್ಟ್‌ಮೆಂಟ್‌ (Apartment) ಒಂದರಲ್ಲಿ ವಾಸವಾಗಿರುವ ಯುವತಿಗೆ (Young Girl) ಪತ್ರ (Letter) ಬರೆಯುವ ಅಪರಿಚಿತ, ಪತ್ರದಲ್ಲಿ ಆಕೆ ವಿರುದ್ಧ ಅಶ್ಲೀಲವಾಗಿ ಬರೆದಿದ್ದಾನಂತೆ!

ಇಂತಹ ಖುಲ್ಲಂಖುಲ್ಲಂ ಆಫರ್‌ನ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಯುವತಿಗೆ ಅಪರಿಚಿತ ವ್ಯಕ್ತಿಯೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳ ನೀಡುತ್ತಿದ್ದಾನಂತೆ. ಅಪಾರ್ಟ್‍ಮೆಂಟ್‍ಯೊಂದರಲ್ಲಿ ವಾಸವಿರುವ ಮಹಿಳೆಗೆ ಅಪರಿಚಿತನೊಬ್ಬ ಫ್ಲಾಟ್‍ನ ಡೋರ್‌ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಬಾರಿಸಿದ್ದಾನೆ. ಪತ್ರದಲ್ಲಿ ಅಸಭ್ಯ ಹಾಗೂ ಅಶ್ಲೀಲ ಪದ ಬಳಸಲಾಗಿದೆ ಎನ್ನಲಾಗಿದೆ.

ಪತ್ರದಲ್ಲಿ, “ನನಗೆ ನೀವು ಒಳ್ಳೆಯ ಸರ್ವಿಸ್‌ ಕೊಡುತ್ತೀರಾ? ಹಾಗಾದ್ರೆ ಇದೇ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‍ಗೆ ಬನ್ನಿ. ನಾನು ನಿಮಗೆ ಒಂದು ದಿನಕ್ಕೆ 50 ಸಾವಿರ ರೂಪಾಯಿ ಕೊಡುತ್ತೇನೆ” ಎಂದು ಅಶ್ಲೀಲವಾಗಿ ಬರೆದಿರುವ ಹಾಗೆ ವರದಿಯಾಗಿದೆ. ಈ ರೀತಿ ಅಶ್ಲೀಲವಾಗಿ ಬರೆದ ಪತ್ರ ಓದಿ ಯುವತಿ ಆಘಾತಗೊಂಡಿದ್ದಾಳೆ. ಆತ ಯಾರು? ನನ್ನನು ಯಾಕೆ ಟಾರ್ಗೆಟ್ ಮಾಡಿದ್ದಾನೆ? ನನಗೇ ಯಾಕೆ ಅಸಹ್ಯವಾಗಿ ಪತ್ರ ಬರೆದಿದ್ದಾನೆ ಅಂತ ಯೋಚಿಸಿದ್ದಾಳೆ. ಇನ್ನೂ ‌ಪತ್ರವನ್ನು ಮಹಿಳೆ ಕೂಡಲೇ ಅಪಾರ್ಟ್‍ಮೆಂಟ್‍ನ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಇನ್ನು ಸದ್ಯ ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಅಪರಿಚಿತನ ವಿರುದ್ಧ ಸಂತ್ರಸ್ತ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್‍ಮೆಂಟ್‍ನಲ್ಲಿರುವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Leave A Reply