Home Breaking Entertainment News Kannada BCCIನಿಂದ ನೂತನ ‘ಸಲಹಾ ಸಮಿತಿ’ ರಚನೆ : ಟೀಂ ಇಂಡಿಯಾ ‘ಮಾಜಿ ಆಟಗಾರ’ನಿಗೆ ಸ್ಥಾನ

BCCIನಿಂದ ನೂತನ ‘ಸಲಹಾ ಸಮಿತಿ’ ರಚನೆ : ಟೀಂ ಇಂಡಿಯಾ ‘ಮಾಜಿ ಆಟಗಾರ’ನಿಗೆ ಸ್ಥಾನ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗುರುವಾರ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ (CAC) ನೇಮಕವನ್ನ ಪ್ರಕಟಿಸಿದ್ದು, ಅದು ರಾಷ್ಟ್ರೀಯ ಆಯ್ಕೆಗಾರರನ್ನ ಸಹ ಆಯ್ಕೆ ಮಾಡುತ್ತದೆ. ಚೇತನ್ ಶರ್ಮಾ ನೇತೃತ್ವದ ತಂಡವನ್ನ ವಜಾಗೊಳಿಸಿದ ನಂತ್ರ ಈ ಸಮಿತಿ ರಚನೆಯಾಗಿದೆ. ಅದ್ರಂತೆ, ಸಿಎಸಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷನಾ ನಾಯಕ್ ಇದ್ದಾರೆ.

ಅಶೋಕ್ ಮಲ್ಹೋತ್ರಾ 7 ಟೆಸ್ಟ್ ಮತ್ತು 20 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ ಮತ್ತು ಇತ್ತೀಚೆಗೆ ಭಾರತೀಯ ಕ್ರಿಕೆಟಿಗರ ಸಂಘದ (ICA) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪರಾಂಜಪೆ ಭಾರತದ ಪರ 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಹಿರಿಯ ಪುರುಷರ ಆಯ್ಕೆ ಸಮಿತಿಯ ಭಾಗವಾಗಿದ್ದರು.

11 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತದ ಪರ ಎರಡು ಟೆಸ್ಟ್, 46 ಏಕದಿನ ಮತ್ತು 31 ಟಿ 20 ಪಂದ್ಯಗಳನ್ನು ಆಡಿರುವ ನಾಯಕ್, ಮೂವರು ಸದಸ್ಯರ ಸಿಎಸಿಯ ಭಾಗವಾಗಿ ಮುಂದುವರಿದಿದ್ದಾರೆ.