Home News ಗರ್ಭಿಣಿ ಶಿಕ್ಷಕಿಯನ್ನು ಎಳೆದಾಡಿದ ಬಾಲಕರು | ಕಾರಣ ನಿಜಕ್ಕೂ ಶಾಕಿಂಗ್‌

ಗರ್ಭಿಣಿ ಶಿಕ್ಷಕಿಯನ್ನು ಎಳೆದಾಡಿದ ಬಾಲಕರು | ಕಾರಣ ನಿಜಕ್ಕೂ ಶಾಕಿಂಗ್‌

Hindu neighbor gifts plot of land

Hindu neighbour gifts land to Muslim journalist

ಗುರುವು ಪರಮಾತ್ಮನಿಗಿಂತಲೂ ಶ್ರೇಷ್ಠ ಎಂದು ಹೇಳುತ್ತಾರೆ. ಏಕೆಂದರೆ ಗುರುವೂ ತನ್ನ ವಿದ್ಯಾರ್ಥಿಗಳು ತಪ್ಪು ಹಾದಿ ಹಿಡಿದರೆ ಅದನ್ನು ತಿದ್ದಿ, ಸರಿಯಾದ ಬುದ್ದಿಯನ್ನು ಹೇಳಿ ಕೊಡುತ್ತಾರೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕಿ ತನ್ನ ವಿದ್ಯಾರ್ಥಿಗಳು ಸರಿಯಾಗಿ ಓದುತ್ತಿಲ್ಲ ಎಂದು ಹಾಗೂ ಶಾಲೆಯಲ್ಲಿ ಅವರ ನಡವಳಿಕೆ ಸರಿಯಾಗಿಲ್ಲವೆಂದು ಆ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿದ್ದರು. ಇದರಿಂದ ಕೋಪಗೊಂಡ ಹುಡುಗರು 5 ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರ ಮೇಲೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ್ದಾರೆ!

ಹೌದು, ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಗಳ ಸರಿಯಾಗಿ ಓದುತ್ತಿಲ್ಲ ಎಂದು ಹಾಗೂ ಶಾಲೆಯಲ್ಲಿ ಅವರ ನಡವಳಿಕೆ ಸರಿಯಾಗಿಲ್ಲವೆಂದು ಆ ವಿದ್ಯಾರ್ಥಿಗಳ ಪೋಷಕರಿಗೆ ಹೇಳಿದ್ದರು. ಇದರಿಂದ ಕೋಪಗೊಂಡ ಹುಡುಗರು ಶಿಕ್ಷಕಿ ಸಭೆ ನಡೆಸಿದ ದಿನ ಸಂಜೆಯೇ ಶಿಕ್ಷಕಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಮುಖ್ಯ ಶೈಕ್ಷಣಿಕ ಬ್ಲಾಕ್‌ನ ಮುಂದೆ ಶಿಕ್ಷಕರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರೇ, ಅವರಲ್ಲಿ ಕೆಲವರು ಆ ಶಿಕ್ಷಕಿಯನ್ನು ತಳ್ಳಿದ್ದಾರೆ. ಒಬ್ಬ ವಿದ್ಯಾರ್ಥಿ ಅವರ ಕೂದಲನ್ನು ಎಳೆದಿದ್ದಾನೆ. ಈ ಘಟನೆಯಲ್ಲಿ 10 ಮತ್ತು 11ನೇ ತರಗತಿಯ 22 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ಮಾಹಿತಿ ಲಭಿಸಿದೆ.

ಆಕೆಯನ್ನು ಇತರ ಕೆಲವು ಮಹಿಳಾ ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿನಿಯರು ಆ ಹುಡುಗರಿಂದ ರಕ್ಷಿಸಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಮೇಲೆ ನಡೆದ ದಾಳಿಯಿಂದ ಕಂಗಾಲಾದ ಶಿಕ್ಷಕಿ ಕುಸಿದು ಬೀಳುವ ಹಂತದಲ್ಲಿದ್ದರು. ತಕ್ಷಣ ಮಹಿಳಾ ಅಟೆಂಡರ್ ಜೊತೆಗೆ ಆಕೆಯನ್ನು ಶಾಲಾ ಕಾರಿನಲಿ ಆಸತ್ರೆಗೆ ಕಳುಹಿಸಲಾಯಿತು.

ಈ ಘಟನೆ ನಡೆದ ಮರುದಿನವೇ ಬೆಳಿಗ್ಗೆ ತಮ್ಮ ನಿವಾಸದಲ್ಲಿ ತುರ್ತು ಸಭೆ ನಡೆಸಿದ ನಂತರ ವಿದ್ಯಾರ್ಥಿಗಳ ಪೋಷಕರಿಗೆ ಕರೆ ಮಾಡಿದ್ದೂ, ಇದರಿಂದ ಮತ್ತಷ್ಟು ಸಿಟ್ಟಾದ ವಿದ್ಯಾರ್ಥಿಗಳು ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಹಾಗೂ ತನ್ಮ ಮೇಲೆ ದಾಳಿ ಮಾಡಲು ಕ್ವಾರ್ಟಸ್ ಕಡೆಗೆ ಬಂದಿದ್ದಾರೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಶಾಲಾ ಆವರಣಕ್ಕೆ ಬಂದು ಪೊಲೀಸರು ವಿದ್ಯಾರ್ಥಿಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗಳ ವಿರುದ್ಧ ಔಪಚಾರಿಕ ದೂರು ದಾಖಲಾಗಬೇಕಾಗಿರುವುದರಿಂದ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.