ಯಥಾಸ್ಥಿತಿ ಕಾಯ್ದುಕೊಂಡ ಹೆಜಮಾಡಿ ಟೋಲ್ !

Share the Article

ಪಡುಬಿದ್ರಿಯ ಸುರತ್ಕಲ್‌ ಟೋಲ್‌ ಬುಧವಾರ ಮಧ್ಯರಾತ್ರಿಯಿಂದ ರದ್ದು ಮಾಡಲಾಗಿದ್ದು ,ಹೆಜಮಾಡಿ ಟೋಲ್‌ನಲ್ಲಿ ಪರಿಷ್ಕೃತ ದರ ಸದ್ಯ ಜಾರಿ ಮಾಡುವ ಕುರಿತು ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಹೆಜಮಾಡಿಯ ನವಯುಗ ಟೋಲ್‌ ಪ್ಲಾಝಾದೊಂದಿಗೆ ಸುರತ್ಕಲ್‌ ಟೋಲ್‌ ದರವನ್ನು ಜೋಡಿಸಿಕೊಂಡು ಡಿ. 1ರಿಂದ ಸಂಗ್ರಹಿಸುವ ಕುರಿತಾಗಿ ಸರ್ಕಾರ ಈಗಾಗಲೇ ಆಶ್ವಾಸನೆ ನೀಡಿದ್ದು, ಆದರೆ ಟೋಲ್‌ಗ‌ಳ ವಿಲೀನ ಪ್ರಸ್ತಾಪ ಜಾರಿಗೆಯಾಗುವ ಕುರಿತಾಗಿ ಯಾವುದೇ ಸೂಚನೆಗಳು ಸದ್ಯ ದೊರೆತಿಲ್ಲ ಎನ್ನಲಾಗಿದೆ.

ಈ ಸಲುವಾಗಿ ಹೆಜಮಾಡಿ ಟೋಲ್‌ ಗೇಟ್‌ನಲ್ಲಿ ಮುಂಚಿನಂತೆ ಯಥಾ ಪ್ರಕಾರ ಟೋಲ್ ದರ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.ಈಗಾಗಲೆ, ಸುರತ್ಕಲ್‌ ಟೋಲ್‌ನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಿ ದರ ಏರಿಸಿರುವ ಕುರಿತು ಉಡುಪಿಯ ಜನಪ್ರತಿನಿಧಿಗಳು ಮತ್ತು ಜನರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಜಮಾಡಿ ನವಯುಗ ಟೋಲ್‌ ಮತ್ತು ಎನ್‌ಎಚ್‌ಎಐ ನಡುವೆ ಯಾವುದೇ ಒಪ್ಪಂದಗಳು ನಡೆದಿರುವ ಕುರಿತಾಗಿ ಯಾವುದೆ ಸೂಚನೆಗಳು ಲಭ್ಯವಾಗಿಲ್ಲ . ನವಯುಗ ಟೋಲ್‌ ಪ್ಲಾಝಾ ಕಂಪೆನಿಯ ಮುಖ್ಯಸ್ಥರಿಂದ ಈ ಬಗ್ಗೆ ಯಾವುದೇ ಮಾಹಿತಿ ಜಾರಿಗೆ ಬಂದಿಲ್ಲ . ಹಾಗಾಗಿ, ಡಿ. 1ರಿಂದ ಯಾವುದೇ ಬದಲಾವಣೆಯಾಗದೆ, ಹಿಂದಿನ ದರವೇ ಇರುತ್ತದೆ ಎಂದು ಕಂಪೆನಿಯ ಮೂಲಗಳು ಹೇಳಿವೆ.

Leave A Reply