ಪ್ರೀತಿಗಿಂತ ಹೆಚ್ಚಾಯ್ತು ಕಾಮದ ವಾಂಛೆ | ಕಾಮದ ಹಿಂದೆ ಹೋದ ಪತ್ನಿ | ಪ್ರಶ್ನಿಸಿದ ಗಂಡನನ್ನೇ ಕೊಂದಳು | ಮಾಯಾಂಗನೆಯ ನವರಂಗಿ ಆಟ ಹೀಗಿದೆ!

ಇಂದಿನ ಕಾಲದಲ್ಲಿ ಒಬ್ಬರ ಮೇಲೆ ನಂಬಿಕೆ ಇಡಬೇಕಾದರೆ ನೂರು ಬಾರಿ ಯೋಚಿಸಬೇಕು. ಯಾರನ್ನೂ ನಂಬಿ ಜೀವನ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆಯಾಗಿದ್ದರೂ ಬೇರೊಬ್ಬರ ಜೊತೆ ಸಂಬಂಧ ಬೆಳೆಸಿ, ತನ್ನ ಹೆಂಡತಿಯನ್ನೋ ಅಥವಾ ಗಂಡನನ್ನು ಕೊಲೆ ಮಾಡಿ ಸಿಕ್ಕಿ ಬಿದ್ದ ಘಟನೆಗಳು ಅದೆಷ್ಟೋ ಇವೆ. ಅಂತಹದೆ ಪ್ರಕರಣವೊಂದು ಹೊರಬಿದ್ದಿದ್ದೂ, ಮದುವೆಯಾಗಿ ಎರಡು ಮಕ್ಕಳಿದ್ದರೂ, ಮಹಿಳೆಯೊಬ್ಬಳು ಪ್ರಿಯಕರನ ಮೋಹಕ್ಕೆ ಒಳಗಾಗಿ ಕಟ್ಟಿಕೊಂಡ ಗಂಡನನ್ನೇ ಕೊಲೆ ಮಾಡಿದ್ದಾಳೆ. ಕೊನೆಗೆ ಪೋಲಿಸರ ಬಲೆಗೆ ಹೇಗೆ ಸಿಕ್ಕಿಬಿದ್ದಳು ಎಂಬ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಚನ್ನಪಟ್ಟಣ ಬಳಿಯ ಕೃಷ್ಣಪುರದೊಡ್ಡಿಯ ದೇಸೇಗೌಡನನ್ನ ಜಯಲಕ್ಷ್ಮೀ ಮದುವೆಯಾಗಿದ್ದಳು. ಬಳಿಕ ದಂಪತಿ, ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ವಾಸವಿದ್ದರು. ಫಾರಂಹೌಸ್​​ನಲ್ಲಿ ಗಂಡ ಕೆಲಸ ಮಾಡ್ತಿದ್ರೆ, ಜಯಲಕ್ಷ್ಮೀ ಗಾರ್ಮೆಂಟ್ಸ್​​ಗೆ ಹೋಗುತ್ತಿದ್ದಳು. ಇಬ್ಬರು ಮಕ್ಕಳೊಟ್ಟಿಗೆ ಸುಖಸಂಸಾರ ಸಾಗುತ್ತಿತ್ತು. ಈ ಮಧ್ಯೆ ಜಯಲಕ್ಷ್ಮೀ ಜೀವನಕ್ಕೆ ಟೆಕ್ಕಿ ರಾಜೇಶನ ಪ್ರವೇಶವಾಯಿತು. ಇವರಿಬ್ಬರ ಪರಿಚಯ ಪ್ರೀತಿ-ಪ್ರೇಮಕ್ಕೆ ತಿರುಗಿ ನಂತರ ಪ್ರಣಯದ ಸುಖದಲ್ಲಿದ್ದರು. ಗಂಡ ಇಲ್ಲದಿದ್ದಾಗ ಪ್ರಿಯಕರ ರಾಜೇಶ, ಜಯಲಕ್ಷ್ಮೀ ಮನೆಗೆ ಬಂದು ಹೋಗುತ್ತಿದ್ದ.

ಈ ವಿಚಾರ ಕೆಲವೇ ದಿನಗಳಲ್ಲಿ ದೇಸೇಗೌಡನಿಗೆ ಗೊತ್ತಾಗಿದ್ದೂ, ಪ್ರಶ್ನಿಸಿದ್ದಾನೆ. ನವೆಂಬರ್ 26 ರ ರಾತ್ರಿ ಜಗಳವಾಡಿ, ಪತಿ ಬೈಯುತ್ತಿದ್ದಾಗ ಸೈಲೆಂಟಾಗೇ ಪ್ರಿಯಕರನಿಗೆ ಫೋನ್ ಮಾಡಿದ್ದಾಳೆ. ಫೋನ್​​ನಲ್ಲಿ ದೇಸೇಗೌಡನ ಮಾತು ಕೇಳಿಸಿಕೊಂಡ ರಾಜೇಶ, ಆಗಿಂದಾಗ್ಗೆ ಅವರ ಮನೆಗೆ ಬಂದು ದನದ ಕೊಟ್ಟಿಗೆಯಲ್ಲಿದ್ದ ಹಗ್ಗದಿಂದ ದೇಸೇಗೌಡರ ಕತ್ತು ಬಿಗಿದು ಕೊಂದಿದ್ದಾನೆ. ನಂತರ ಶವವನ್ನು ಕಾರಿಗೆ ಹಾಕಿಕೊಂಡು ರಾಮನಗರದ ಹೈವೇ ಪಕ್ಕದ ಚರಂಡಿಗೆ ಎಸೆದಿದ್ದಾನೆ.

ಪ್ರಿಯಕರ ರಾಜೇಶನು ಸಾಕ್ಷ್ಯಾಧಾರ ಸುಳಿವುಗಳು ಸಿಗದಂತೆ,
ಹತ್ಯೆಗೆ ಬಳಸಿದ್ದ ವಸ್ತುಗಳನ್ನೆಲ್ಲ ಒಂದೊಂದು ಕಡೆ ಎಸೆದಿದ್ದನು. ಇತ್ತ, ಜಯಲಕ್ಷ್ಮೀ ಮಾರನೇ ದಿನ ಸೋಲದೇವನಹಳ್ಳಿ ಪತಿ ನಾಪತ್ತೆ ಎಂದು ದೂರು ದಾಖಲಿಸಿದ್ದಳು. ಅಲ್ಲದೇ ನೆಂಟರಿಗೆ ಕರೆ ಮಾಡಿ, ನಮ್ಮ ಯಜಮಾನರು ಏನಾದರೂ ಬಂದಿದ್ದಾರಾ ಅಂತ ಕೇಳಿದ್ದಳು. ಆದ್ರೆ, ಪೊಲೀಸರಿಗೆ ಸಂಶಯ ಬಂದು ಕಾಲ್​ ಡಿಟೇಲ್ಸ್ ತೆಗೆದು ನೋಡಿದಾಗ ಮಾಯಾಂಗನೆಯ ನವರಂಗಿಯಾಟ ಬಯಲಾಗಿದೆ.

ಆದರೂ ತನ್ನ ಡ್ರಾಮಾ ಮುಂದುವರಿಸಿದ ಜಯಲಕ್ಷ್ಮೀ, ರಾಜೇಶನಿಗೆ ಹೆಚ್ಚು ಕಾಲ್ಸ್ ಹೋಗಿದ್ದು, ಯಾರವನು ಎಂದು ಪೊಲೀಸ್ರು ಪ್ರಶ್ನಿಸಿದಾಗ ಆತ ನನ್ನ ತಮ್ಮ ಅಂತ ಹೇಳಿದ್ದಾಳೆ. ಅದೇ ಪ್ರಶ್ನೆಯನ್ನು ರಾಜೇಶ್​ನಲ್ಲಿ ಕೇಳಿದ್ರೆ ಆಕೆ ನನ್ನ ಅಕ್ಕ ಎಂದು ಹೇಳಿದ್ದ. ಆದ್ರೆ, ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಸದ್ಯ ಇದೀಗ ಇಬ್ಬರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.