ಕುಡುಕನನ್ನು ಹಿಂಬಾಲಿಸಿಕೊಂಡು ಬಂದ ಪೊಲೀಸ್‌ | ಆತನಲ್ಲಿ ಸಿಕ್ಕಿದ್ದು ಲಕ್ಷಗಟ್ಟಲೆ ದುಡ್ಡು ಕೆಜಿಗಟ್ಟಲೆ ಚಿನ್ನ | ಶಾಕ್‌ ಆದ ಪೊಲೀಸರು

Share the Article

ಮನುಷ್ಯನಲ್ಲಿ ದುಡ್ಡು ಅಗತ್ಯಕ್ಕಿಂತ ಹೆಚ್ಚು ಇದ್ದಾಗ ಆತನ ವರ್ತನೆಯೇ ಬೇರೆ ರೀತಿಯಲ್ಲಿ ಇರುತ್ತದೆ ಅನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.

ಹೌದು ಇಲ್ಲೊಬ್ಬನು ಕಂಠಮಟ್ಟ ಕುಡಿದು ರಸ್ತೆಯ ಮೇಲೆ ಒಂದು ಬ್ಯಾಗಲ್ಲಿ ರೂ 22 ಲಕ್ಷ ನಗದು ಮತ್ತು ಮತ್ತೊಂದು ಬ್ಯಾಗಲ್ಲಿ ಒಂದು ಮುಕ್ಕಾಲು ಕೇಜಿಯಷ್ಟು ಚಿನ್ನಾಭರಣ ಮತ್ತು ಚಿನ್ನದ ಬಿಸ್ಕಿಟ್ ಗಳನ್ನು ಇಟ್ಟುಕೊಂಡು ತೂರಾಡುತ್ತ ರಸ್ತೆಯಲ್ಲಿ ಹೋಗುತ್ತಿದ್ದ.

ಅವನ ಚಲನವಲನಗಳನ್ನು ಗಮನಿಸಿ ಪೊಲೀಸರು ಹಿಂಬಾಲಿಸಿದಾಗ ವಿಚಲಿತನಾಗಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಆದರೆ ಸಾಧ್ಯವಾಗಿಲ್ಲ. ಬ್ಯಾಗ್ ಗಳಲ್ಲಿದ್ದ ದಾಖಲೆಯಿಲ್ಲದ ಹಣ ಮತ್ತು ಚಿನ್ನ ಕಂಡು ಎಸ್ ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮತ್ತು ಚಿನ್ನ ಮತ್ತು ನಗದನ್ನು ವಶ ಪಡಿಸಿಕೊಂಡಿದ್ದಾರೆ.

ಈ ಕುರಿತು ಪೊಲೀಸ್ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave A Reply